ನಮ್ಮ ದೇಶವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲ ನಮ್ಮ ಯುವಜನಾಂಗವೇ ನಮ್ಮ ಹೆಮ್ಮೆ. ನಮ್ಮ ಯುವಜನರು ಯಾವುದೇ ಸಮಸ್ಯೆ ಅಥವಾ ಅನಾರೋಗ್ಯದಿಂದ ಬಳಲುತ್ತಿರುವಾಗ ಅವರಿಗೆ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯ.ಪುಣೆಯ ಏಳು ವರ್ಷ ವಯಸ್ಸಿನ ವೈಶಾಲಿ ಅವಕಾಶವಂಚಿತ ಕುಟುಂಬದವಳಾಗಿದ್ದು ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ಹೃದಯದಲ್ಲಿನ ರಂಧ್ರದಿಂದಾಗಿ ಬಳಲುತ್ತಿದ್ದಳು. ಆಕೆ ಇಷ್ಟು ವರ್ಷಗಳಿಂದ ಅನುಭವಿಸುತ್ತಿದ್ದ ನೋವನ್ನು ಊಹಿಸಿ.

ತನ್ನ ಹೃದಯದ ಚಿಕಿತ್ಸೆಗಾಗಿ ನೆರವಾಗುವಂತೆ ಕೋರಿ ಪುಟ್ಟ ಹುಡುಗಿ ವೈಷ್ಣವಿ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯಲು ನಿರ್ಧರಿಸಿದಾಗ, ಆಕೆಗೆ ಪ್ರಧಾನ ಮಂತ್ರಿ ನೆರವಿನ ಬಗ್ಗೆ ಉತ್ತರಿಸುತ್ತಾರೆ ಮಾತ್ರವಲ್ಲ, ತನ್ನ ಮನೋಬಲ ಹೆಚ್ಚಿಸಲು ಅವರು ಖುದ್ದಾಗಿ ತನ್ನನ್ನು ಭೇಟಿಮಾಡಬಹುದೆಂಬ ಅರಿವಿರಲಿಲ್ಲ.ವೈಶಾಲಿ ಪ್ರಧಾನ ಮಂತ್ರಿಯವರಿಗೆ ಬರೆದ ಎರಡು ಪುಟಗಳ ಭಾವನಾತ್ಮಕ ಪತ್ರದಲ್ಲಿ, ತನ್ನನ್ನು ಮಗಳೆಂದು ಭಾವಿಸಿ ಸಹಾಯಮಾಡುವಂತೆ ವಿನಂತಿಸಿ, ಇದರಿಂದ ಪೆÇಲೀಸ್ ಅಧಿಕಾರಿಯಾಗಬೇಕೆಂಬ ತನ್ನ ಕನಸು ನನಸಾಗುವುದೆಂಬ ಆಶಯ ವ್ಯಕ್ತಪಡಿಸಿದ್ದಳು.

ಈ ಪತ್ರವನ್ನು ಪರಿಗಣಿಸಿ ಪ್ರಧಾನ ಮಂತ್ರಿಯವರು ವೈಶಾಲಿಯನ್ನು ಗುರುತಿಸಿ ಆಕೆಗೆ ಸಮರ್ಪಕ ವೈದ್ಯಕೀಯ ತಪಾಸಣೆಯ ಸೌಲಭ್ಯ ಕಲ್ಪಿಸಿ ಉಚಿತವಾಗಿ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದು ಸಾಕಾರಗೊಂಡ ಬಳಿಕ ವೈಶಾಲಿ ಪ್ರಧಾನ ಮಂತ್ರಿಯವರಿಗೆ ಒಂದು ಮನಮುಟ್ಟುವ ಪತ್ರ ಬರೆದು ಅದರೊಂದಿಗೆ ತಾನು ಬಿಡಿಸಿದ ಚಿತ್ರವೊಂದನ್ನೂ ಲಗ್ತೀಕರಿಸಿದಳು. ಅದಕ್ಕೆ ಕೂಡ ಪ್ರಧಾನ ಮಂತ್ರಿಯವರು ಉತ್ತರಿಸಿದರು.

ಬಳಿಕ, 2016ರ ಜೂನ್ 25ರಂದು ಪ್ರಧಾನ ಮಂತ್ರಿಯವರು ಪುಣೆಗೆ ತೆರಳಿದ್ದ ಸಂದರ್ಭದಲ್ಲಿ ಖುದ್ದಾಗಿ ವೈಶಾಲಿ ಹಾಗೂ ಅವರನ್ನು ಭೇಟಿಮಾಡಿದರು. ಈ ಭೇಟಿ ತಮ್ಮ ನೆನಪಿನಲ್ಲಿ ಸದಾ ಉಳಿಯಲಿದೆ ಎಂದು ಶ್ರೀ ಮೋದಿ ಅವರು ಹೇಳಿದರು.ವೈಶಾಲಿ ಅವರ ಈ ದೃಷ್ಟಾಂತ ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಪತ್ರಗಳು ಪ್ರಧಾನ ಮಂತ್ರಿ ಹಾಗೂ ಅವರ ಕಚೇರಿಯನ್ನು ತಲುಪುತ್ತವೆ. ಸಂಬಂಧಪಟ್ಟ ಸಮಸ್ಯೆಗೆ ಸ್ಪಂದಿಸಲು ಹಾಗೂ ಭಾರತದ ನಾಗರಿಕರು ಯಾವುದೇ ಕಷ್ಟ ಅನುಭವಿಸದಂತೆ ಖಾತ್ರಿಪಡಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ.