ಅದು 1995. ಗುಜರಾತ್ನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಜಯ ಗಳಿಸಿ, ಬಹುಮತದಿಂದ ಸಕರ್ಾರವನ್ನು ರಚಿಸಿತ್ತು. ಎರಡು ತಿಂಗಳ ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವುದಿತ್ತು. ಚುನಾವಣೆಗೆ ಸಿದ್ಧತೆ ಆರಂಭ ಭರದಿಂದ ಸಾಗಿದ್ದ ಹೊತ್ತಿನಲ್ಲೇ ತಮ್ಮ ನಂಬುಗೆ ಯವರು, ಅನುಯಾಯಿಗಳು ಹಾಗೂ ಪಕ್ಷದ ಸದಸ್ಯರಲ್ಲದವರ ಸಭೆ ಕರೆದ ಮೋದಿ ಅವರು, ಈವರೆಗೆ ಯಾರೂ ನೋಡಿರದ, ತಾವು ಇತ್ತೀಚೆಗೆ ವಿದೇಶ ಪ್ರವಾಸದ ವೇಳೆ ತಂದಿದ್ದ ಡಿಜಿಟಲ್ ಕ್ಯಾಮೆರಾವನ್ನು ತೋರಿಸಿದರು. ರಾಜ್ಯದೆಲ್ಲೆಡೆ ಚುನಾವಣೆ ಪ್ರಚಾರದ ವೇಳೆ ತಂಡದೊಂದಿಗೆ ಕ್ಯಾಮೆರಾ ಕೊಂಡೊಯ್ದು ತಾವು ಕಂಡಿದ್ದನ್ನು-ಜನರ ವೇಷಭೂಷಣ, ಅಭಿವ್ಯಕ್ತಿ, ಧರಿಸುವ ವಸ್ತ್ರ, ಅವರು ಸೇವಿಸುವ ಆಹಾರ ಇದನ್ನೆಲ್ಲ ದಾಖಲಿಸಲು ತಂಡಕ್ಕೆ ಅವರು ಸೂಚಿಸಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಡಿಜಿಟಲ್ ಕ್ಯಾಮೆರಾ ಪ್ರಸಿದ್ಧಿಗೆ ಬರುವ ಮುನ್ನವೇ ಅದರ ಸಾಧ್ಯತೆಗಳು ಮೋದಿ ಅವರಿಗೆ ಮನದಟ್ಟಾಗಿತ್ತು.ದೇಶದ ಬಹುತೇಕರಿಗೆ ಆ ಕ್ಯಾಮೆರಾ ಬಗ್ಗೆ ಅರಿವು ಇರಲಿಲ್ಲ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಶೋಧನೆಗಳನ್ನು ವೈಯಕ್ತಿಕ ಹಾಗೂ ಸಕರ್ಾರದಲ್ಲೂ ಬಳಕೆ ಮಾಡುವ ಅವರ ಅಭ್ಯಾಸ ಈಗಲೂ ಮುಂದುವ ರಿದಿದೆ. ಅದು ಅವರ ದೂರದೃಷ್ಟಿಯ ದ್ಯೋತಕ. ಸಮೂಹ ಸಂವಹನದಲ್ಲಿ ಸಾಮಾಜಿಕ ಮಾಧ್ಯಮದ ಸಾಧ್ಯತೆಯನ್ನು ಮೊದಲು ಗುರುತಿಸಿದವರು ಅವ ರು. ಏಕಮುಖ ಸಂವಹನವಲ್ಲದೆ ಸಮಾನರ ನಡುವೆ ದ್ವಿಮುಖ ಸಂವಹನಕ್ಕೂ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದವರು ಅವರು. ಗುಜರಾತ್ನ ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ ಮಾಧ್ಯಮದ ಮೂಲಕ ಅವರನ್ನು ಸುಲಭವಾಗಿ ಸಂಪಕರ್ಿಸ ಬಹುದಾಗಿತ್ತು. ಪ್ರಧಾನಿ ಆದ ಬಳಿಕ ಅವರು ಜುಲೈ 2014ರಲ್ಲಿ ಆರಂಭಿಸಿದ ಮೊದಲ ಉಪಕ್ರಮವೇ "ಮೈಗವ್'. ಒಂದು ವರ್ಷದ ಬಳಿಕ "ಡಿಜಿಟಲ್ ಇಂಡಿಯಾ'ವನ್ನು ಆರಂಭಿಸಲಾಯಿತು. ಸಕರ್ಾರ ದ ಆಡಳಿತವನ್ನು ಉತ್ತರದಾಯಿ, ಪಾರದರ್ಶಕ ಹಾಗೂ ಪ್ರತಿಕ್ರಿಯಾತ್ಮಕಗೊಳಿಸುವುದು ಇದರ ಉದ್ದೇಶವಾಗಿತ್ತು. 2015ರಲ್ಲಿ ಕ್ಯಾಲಿಫೋನರ್ಿಯಾದ ಸ್ಯಾನ್ ಹ್ಯೂಸೆಯಲ್ಲಿ ನಡೆದ ಡಿಜಿಟಲ್ ಇಂಡಿಯಾ ಸಮಾವೇಶದಲ್ಲಿ ಮಾತನಾಡಿ,"ಸಾಮಾಜಿಕ ಮಾಧ್ಯಮ ಇಲ್ಲವೇ ತಂತ್ರಜ್ಞಾನ ವೇಗವಾಗಿ ಮತ್ತು ವ್ಯಾಪ್ತಿ ಯಲ್ಲಿ ಹಿರಿದುಗೊಳ್ಳುತ್ತ ನಡೆದಿದೆ. ಇದನ್ನು ಬಳಸಿಕೊಂಡು ಸಮಾಜದ ಅಂಚಿನಲ್ಲಿ ಉಳಿದುಕೊಂಡವರನ್ನು ಮೇಲೆತ್ತಲು ಸಾಧ್ಯವಿದೆಯೇ ಎಂಬುದನ್ನು ನಾವು ಆಲೋಚಿಸಬೇಕಿದೆ. ಈ ನಂಬಿಕೆಯನ್ನು ಆಧರಿಸಿ ಡಿಜಿಟಲ್ ಇಂಡಿಯಾ ಸೃಷ್ಟಿಯಾಗಿದೆ. ಮಾನವ ಜನಾಂಗದ ಇತಿಹಾಸದಲ್ಲೇ ಅತಿ ದೊಡ್ಡಡು ಎನ್ನಬಹುದಾದ ಹಾಗೂ ಭಾರತವನ್ನು ಪರಿವತರ್ಿಸುವ ಉಪಕ್ರಮ ಇದು. ದೇಶದಲ್ಲಿರುವ ದುರ್ಬಲರು, ದೂರ ಪ್ರದೇಶದವರು ಹಾಗೂ ಬಡವರ ಬದುಕನ್ನಲ್ಲ ದೆ, ನಾವು ಬದುಕುವ ಹಾಗೂ ಕೆಲಸ ಮಾಡುವ ರೀತಿಯನ್ನೇ ಇದು ಬದಲಿಸಲಿದೆ,'ಎಂದು ಹೇಳಿದರು.