ನಾವು ಅನುಸರಿಸಬೇಕಾದ ಸೂತ್ರ ಏನೆಂದರೆ,"ಮಗು ಹೆಣ್ಣು ಗಂಡು ಯಾವುದೇ ಇರಲಿ,ಇಬ್ಬರೂ ಒಂದೇ. ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸೋಣ.ನಮ್ಮ ಹೆಣ್ಣು ಮಕ್ಕಳ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಿಮಗೆ ಹೆಣ್ಣು ಮಗು ಹುಟ್ಟಿದಾಗ 5 ಬೀಜ
ನೆಟ್ಟು,ಸಂಭ್ರಮಿಸಿ'
-ನರೇಂದ್ರ ಮೋದಿ(ತಾವು ದತ್ತು ತೆಗೆದುಕೊಂಡ ಜಯಪುರದಲ್ಲಿ ಹೇಳಿದ್ದು).
ಹರಿಯಾಣದ ಪಾಣಿಪತ್ನಲ್ಲಿ ಜನವರಿ 22, 2015ರಂದು ಪ್ರಧಾನಿ ಅವರು ಬೇಟಿ ಬಚಾವೋ, ಬೇಟಿ ಪಡಾವೋ(ಬಿಬಿಬಿಪಿ)ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಮಕ್ಕಳ ಲಿಂಗ ಅನುಪಾತ(ಸಿಎಸ್ಆರ್) ಕಡಿಮೆ ಆಗುವುದನ್ನು ತಪ್ಪಿಸುವುದು ಮತ್ತು ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ನೀಡುವುದು ಕಾರ್ಯಕ್ರಮದ ಉದ್ದೇಶ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳ ಜಂಟಿ ಕಾರ್ಯಕ್ರಮ ಇದು.
ಮೊದಲ ಹಂತದಲ್ಲಿ ಹೆಣ್ಣು ಮಕ್ಕಳ ಲಿಂಗ ಅನುಪಾತ ಕಡಿಮೆ ಇರುವ ಆಯ್ದ 100 ಜಿಲ್ಲೆಗಳಲ್ಲಿ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯಿದೆ ಜಾರಿ,ರಾಷ್ಟ್ರ ಮಟ್ಟ ದಲ್ಲಿ ಜಾಗೃತಿ ಕಾರ್ಯಕ್ರಮ ಮತ್ತು ಬಹು ಆಯಾಮದ ಪ್ರಕ್ರಿಯೆ ಯೋಜನೆಯ ಮುಖ್ಯ ಅಂಶಗಳು. ತಳ ಹಂತದಲ್ಲಿ ತರಬೇತಿ, ಅರಿವು ಮೂಡಿಸುವುದು,ಸಂವೇದನೆ ಹೆಚ್ಚಳ ಹಾಗೂ ಸಮುದಾಯಿಕ ಕ್ರಿಯೆಗೆ ತೊಡಗಿಸುವುದಕ್ಕೆ ಒತ್ತು ನೀಡಲಾಗಿದೆ.
ಸಮಾಜ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಯಲ್ಲಿ ಪರಿವರ್ತನೆ ತರಲು ಎನ್ಡಿಎ ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಧಾನಿ ಅವರು ತಮ್ಮ "ಮನ್ ಕಿ ಬಾತ್' ನಲ್ಲಿ "ಮಗಳೊಡನೆ ಸೆಲ್ಫಿ' ಅಭಿಯಾನವನ್ನು ಆರಂಭಿಸಿದ ಹರಿಯಾಣದ ಬಿಬಿಪುರದ ಸರಪಂಚನನ್ನು ಶ್ಲಾಘಿಸಿದರು. ಜನ ತಮ್ಮ ಮಗಳೊಂದಿಗೆ ಫೋಟೋ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಕೆಲ ದಿನದಲ್ಲೇ ಇದು ಜಗತ್ತಿನೆಲ್ಲೆಡೆ ವ್ಯಾಪಿಸಿ ಬಿಟ್ಟಿತು, ದೇಶ ಹಾಗೂ ವಿಶ್ವದ ಎಲ್ಲ ಕಡೆ ಜನ ತಮ್ಮ ಮಗಳೊಂದಿಗೆ ಫೋಟೋ ತೆಗೆದುಕೊಂಡು, ಹಂಚಿಕೊಂಡು ಸಂಭ್ರಮಿಸಿದರು.
"ಬೇಟಿ ಬಚಾವೋ, ಬೇಟಿ ಪಡಾವೋ' ಕಾರ್ಯಕ್ರಮ ಆರಂಭಿಸಿದ ಬಳಿಕ ಎಲ್ಲ ರಾಜ್ಯಗಳಲ್ಲಿ ಜಿಲ್ಲೆ ಮಟ್ಟದಲ್ಲಿ ಕ್ರಿಯಾಯೋಜನೆಗಳನ್ನು ಚಾಲನೆಗೊಳಿಸ ಲಾಗಿದೆ. ಜಿಲ್ಲಾ ಹಂತದ ಅಧಿಕಾರಿಗಳು ಹಾಗೂ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರಿಗೆ ಸಾಮಥ್ರ್ಯ ಹೆಚ್ಚಳ ಕಾರ್ಯಕ್ರಮಗಳು ಹಾಗೂ ತರಬೇತಿ ನೀಡುವ ಮೂಲಕ ಸಬಲಗೊಳಿಸಲಾಗುತ್ತಿದೆ. ಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿ ಇಲಾಖೆ ವತಿಯಿಂದ ಏಪ್ರಿಲ್-ಅಕ್ಟೋಬರ್ 2015ರ ಅವಧಿಯಲ್ಲಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಇಂಥ 9 ವಿಧದ ತರಬೇತಿ ನೀಡಲಾಗಿದೆ.
ಕೆಲವು ಸ್ಥಳೀಯ ಉಪಕ್ರಮಗಳು
"ಬೇಟಿ ಬಚಾವೋ, ಬೇಟಿ ಪಡಾವೋ' ಕಾರ್ಯಕ್ರಮದಡಿ ಪಿತೋರ್ಘಡ ಜಿಲ್ಲೆಯಲ್ಲಿ ಹೆಣ್ಣು ಮಗುವಿನ ರಕ್ಷಣೆ ಮತ್ತು ವಿದ್ಯೆ ನೀಡಲು ಹಲವು ಹೆಜ್ಜೆಗಳನ್ನು ಇರಿಸಲಾಗಿದೆ. ಜಿಲ್ಲೆ ಹಾಗೂ ವಿಭಾಗ ಹಂತದಲ್ಲಿ ಕಾರ್ಯ ಪಡೆಗಳನ್ನು ರಚಿಸಲಾಗಿದೆ. ಹೆಣ್ಣು ಮಕ್ಕಳ ಲಿಂಗ ಅನುಪಾತಕ್ಕೆ ಸಂಬಂಧಿಸಿದಂತೆ ಈ ಕಾರ್ಯಪಡೆಗಳು ಸಭೆಗಳನ್ನು ನಡೆಸುತ್ತಿದ್ದು, ಸ್ಪಷ್ಟ ಮಾರ್ಗದಶರ್ಿ ಸೂತ್ರಗಳನ್ನು ರೂಪಿಸಿವೆ. ಸಮುದಾಯದಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲೆ, ಸೈನಿಕ ಶಾಲೆಗಳು, ನಾನಾ ಸಕರ್ಾರಿ ಇಲಾಖೆಗಳ ನೌಕರರು ಇನ್ನಿತರರ ಜತೆ ರ್ಯಾಲಿಗಳನ್ನು ಆಯೋಜಿಸಲಾಗಿದೆ.
ಪಿತೋರ್ಘಡದಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬೀದಿ ನಾಟಕಗಳನ್ನು ಆಯೋಜಿಸಲಾಗಿದೆ. ಹೆಚ್ಚು ಜನರನ್ನು ತಲುಪಲು ಗ್ರಾಮಗಳಲ್ಲದೆ ಸಂತೆ, ಮಾರು ಕಟ್ಟೆಗಳಲ್ಲೂ ನಾಟಕ ಪ್ರದರ್ಶನ ನಡೆಸಲಾಗಿದೆ. ಈ ಮೂಲಕ ಲಿಂಗ ಆಧರಿತ ಗರ್ಭಪಾತದ ಬಗ್ಗೆ ಜನರಲ್ಲಿ ಸಂವೇದನೆ ಮೂಡಿಸಲಾಗುತ್ತಿದೆ. ಹೆಣ್ಣು ಮಕ್ಕ ಳು ಹುಟ್ಟಿನಿಂದ ಜೀವನವಿಡೀ ಎದುರಿಸುವ ಸಮಸ್ಯೆ-ಸವಾಲುಗಳನ್ನು ಈ ನಾಟಕಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿವೆ. ಸಹಿ ಆಂದೋಲನ ಹಾಗೂ ಪ್ರತಿಜ್ಞೆ ತೆಗೆದು ಕೊಳ್ಳುವಿಕೆ ಮೂಲಕ ಸ್ನಾತಕೋತ್ತರ ಕಾಲೇಜಿನ 700ಕ್ಕೂ ಹೆಚ್ಚು ವಿದ್ಯಾಥರ್ಿಗಳು ಹಾಗೂ ಹಲವು ಸೈನಿಕರನ್ನು ಬಿಬಿಬಿಪಿ ಕಾರ್ಯಕ್ರಮ ತಲುಪಿದೆ.
ಪಂಜಾಬ್ನ ಮನ್ಸಾ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉಪಕ್ರಮವೊಂದನ್ನು ಆರಂಭಿಸಲಾಗಿದೆ."ಉಡಾನ್-ಲಿವ್ ಯುವರ್ ಡ್ರೀಮ್ ಫಾರ್ ಒನ್ ಡೇ' ಯೋಜನೆಯಡಿ 6ರಿಂದ 12ನೇ ತರಗತಿವರೆಗಿನ ವಿದ್ಯಾಥರ್ಿನಿಯರಿಂದ ಜಿಲ್ಲಾಡಳಿತ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಬಾಲಕಿಯರು ತಾವು ಯಾವ ವೃತ್ತಿಯನ್ನು ಆಯ್ದುಕೊಳ್ಳಬೇಕೆಂದಿದ್ದಾರೋ, ವೈದ್ಯ, ಎಂಜಿನಿಯರ್,ಐಎಎಸ್,ಐಪಿಎಸ್ ಮತ್ತಿತರ ಅಧಿಕಾರಿಗಳ ಜತೆಗೆ ಒಂದು ದಿನ ಕಳೆಯಲು ಮಕ್ಕಳಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಈ ಉಪಕ್ರಮಕ್ಕೆ ಅಪಾರ ಸ್ಪಂದನೆ ಲಭ್ಯವಾಗಿದೆ. 70ಕ್ಕೂ ಹೆಚ್ಚು ವಿದ್ಯಾಥರ್ಿಗಳು ವೃತ್ತಿಪರರ ಜತೆಗೆ ಒಂದು ದಿನ ಕಳೆದಿದ್ದಾರೆ. ಕೆಲಸದ ಪರಿಸರದ ಬಗ್ಗೆ ಮಾಹಿತಿ ಪಡೆದಿದ್ದು, ಭವಿಷ್ಯದಲ್ಲಿ ಯಾವ ವೃತ್ತಿಯನ್ನು ಆಯ್ದುಕೊಳ್ಳಬೇಕು ಎಂಬ ಅರಿವು ಪಡೆದು ಕೊಂಡಿದ್ದಾರೆ..