ನರೇಂದ್ರ ಮೋದಿ ಅವರು ಆಯಾಸಗೊಳ್ಳದಿರಲು ಕಾರಣವೇನು? ತಡೆ ಇಲ್ಲದ ನಿರಂತರ ಕೆಲಸದ ನಡುವೆಯೂ, ಆಯಾಸಗೊಳ್ಳದೆ ಯಂತ್ರದಂತೆ ಕೆಲಸ ನಿರ್ವಹಿಸುತ್ತ ಪ್ರತಿ ಬಾರಿಯೂ ಉತ್ತಮ ಗುಣಮಟ್ಟದ ಫಲಿತಾಂಶ ನೀಡುವುದು ಅವರಿಗೆ ಸಾಧ್ಯವಾಗುವುದಾದರೂ ಹೇಗೆ? ಇದು ಪ್ರಧಾನಿ ಅವರ ಬೆಂಬಲಿಗರು ಮತ್ತು ಅವರನ್ನು ವಿಮಶರ್ಾತ್ಮಕವಾಗಿ ವಿಶ್ಲೇಷಿಸುವವರು ಆಗಾಗ ಕೇಳುವ ಪ್ರಶ್ನೆ.
ಮೊಟ್ಟ ಮೊದಲ ಟೌನ್ಹಾಲ್(ಸಭೆ)ನಲ್ಲಿ ಹಾಗೂ ಇತ್ತೀಚೆಗೆ ಹೊಸ ದಿಲ್ಲಿ ಮೂಲದ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ಪ್ರಶ್ನೆಯನ್ನು ಅವರಿಗೆ ನೇರವಾಗಿ ಕೇಳಲಾಯಿತು. ನೀಡಿದ ಉತ್ತರವು ಅವರ ಪ್ರಾಯೋಗಿಕ ಅರಿವಿನ ಪ್ರತೀಕವಾಗಿದ್ದಂತೆ, ಗಾಢವಾದ ಅಧ್ಯಾತ್ಮಿಕ ಒಳನೋಟಗಳಿಗೂ ಸಾಕ್ಷಿ ಯಾಗಿತ್ತು."ಆಯಾಸ ಎಂಬುದು ಉದ್ದೇಶಿತ ಕೆಲಸವನ್ನು ಸಮರ್ಪಕವಾಗಿ ಮುಗಿಸುವುದರಿಂದ ಆಗುವಂತಹದ್ದಲ್ಲ. ಬದಲಿಗೆ ಕೆಲಸವನ್ನು ಮಾಡದೆ ಉಳಿಸುವುದು ಇಲ್ಲವೇ ಕೆಲಸವನ್ನು ಮುಂದಕ್ಕೆ ಹಾಕುವುದರಿಂದ ಆಗುವ ಮಾನಸಿಕ ಒತ್ತಡ'ಎಂದು ಅವರು ಉತ್ತರಿಸಿದ್ದರು.
ರಾಹುಲ್ ಜೋಶಿ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದು ಇದು-"ನಿಜ ಹೇಳಬೇಕೆಂದರೆ, ನಾವು ಕೆಲಸ ಮಾಡದೆ ಆಯಾಸಗೊಳ್ಳುತ್ತೇವೆ ಮತ್ತು ಕೆಲಸ ನಮಗೆ ತೃಪ್ತಿ ನೀಡುತ್ತದೆ. ಆ ತೃಪ್ತಿ ನಮಗೆ ಶಕ್ತಿ ತುಂಬುತ್ತದೆ. ಇದನ್ನು ನಾನು ಅನುಭವಿಸಿದ್ದೇನೆ ಹಾಗೂ ನನ್ನ ಅನಿಸಿಕೆಯನ್ನು ಯುವ ಮಿತ್ರರಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ಆಯಾಸ ಎಂಬುದು ಬಹುತೇಕ ಮಾನಸಿಕವಾದದ್ದು. ಕೆಲಸ ಮಾಡುವ ಸಾಮಥ್ರ್ಯ ಎಲ್ಲರಲ್ಲೂ ಸಮಾನವಾಗಿರುತ್ತದೆ. ನೀವು ಹೊಸ ಸವಾಲುಗಳನ್ನು ತೆಗೆದುಕೊಳ್ಳುತ್ತಲೇ ಇರಬೇಕಾಗುತ್ತದೆ ಹಾಗೂ ಈ ಸವಾಲು ಎದುರಿಸಲು ಬೇಕಾದ ಶಕ್ತಿಯನ್ನು ನಿಮ್ಮ ಅಂತಃಶಕ್ತಿ ಒದಗಿಸುತ್ತದೆ. ಇಂಥ ಸಾಮಥ್ರ್ಯ ಒಳಗೇ ಇರುವಂಥದ್ದು'.
ಅವರ ಮಂತ್ರ ಸರಳವಾದದ್ದು. ಆದರೆ ಗಾಡ ಚಿಂತನೆಯದು-ನೀವು ನಿಮ್ಮ ಕೆಲಸವನ್ನು ಆನಂದಿಸಿದರೆ, ನಿಮಗೆ ಆಯಾಸ ಎನ್ನಿಸುವುದಿಲ್ಲ. ಏಕೆಂದರೆ,ನಿಮಗೆ ಖುಷಿ ನೀಡುವಂಥದ್ದನ್ನು ನೀವು ಮಾಡುತ್ತಿರುತ್ತೀರಿ.