ಸದಾ ಕೆಲಸದ ಒತ್ತಡ ಮತ್ತು ಆಗಾಗ ಪ್ರವಾಸ ಮಾಡಲೇಬೇಕಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಸಿನೆಮಾ ವೀಕ್ಷಣೆಗೆ ಸಮಯ ಸಿಗುವ ಸಾಧ್ಯತೆ ಇರುವುದಿಲ್ಲ. ಸಂದರ್ಶನವೊಂದರಲ್ಲಿ ಅವರು ವಿವರಿಸಿದಂತೆ,"ನನಗೆ ಸಿನೆಮಾ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ. ಆದರೆ,ಯೌವನದಲ್ಲಿ ಸಹಜ ಕುತೂಹಲದಿಂದ ಸಿನೆಮಾ ನೋಡಿದ್ದೇನೆ. ಆಗ ಕೂಡ ಮನರಂಜನೆಗೆ ಮಾತ್ರವೇ ಸಿನೆಮಾ ನೋಡಿದ್ದಿಲ್ಲ. ಸಿನೆಮಾದಲ್ಲಿ ಬಿಂಬಿತವಾದ ಕಥೆಯಲ್ಲಿ ಜೀವನ ಪಾಠಗಳೇನಾದರೂ ಇವೆಯೇ ಎಂದು ಹುಡುಕುತ್ತಿದ್ದೆ. ನನಗೆ ನೆನಪಿರುವಂತೆ, ಆರ್ ಕೆ ನಾರಾಯಣ್ ಅವರ ಕಾದಂಬರಿಯನ್ನು ಆಧರಿಸಿದ "ಗೈಡ್' ಚಿತ್ರವನ್ನು ಗೆಳೆಯರು ಮತ್ತು ಶಿಕ್ಷಕರ ಜೊತೆಗೆ ನೋಡಲು ಹೋಗಿದ್ದೆ. ಸಿನೆಮಾ ವೀಕ್ಷಣೆ ಬಳಿಕ ಜೊತೆಗಾರರೊಂದಿಗೆ ತೀವ್ರ ಚಚರ್ೆ ನಡೆಸಿದೆ. ಎಲ್ಲರನ್ನೂ ಮುನ್ನಡೆಸುವುದು ಆತ್ಮಸಾಕ್ಷಿ ಎಂಬುದೇ ಚಿತ್ರದ ಕೇಂದ್ರ ಬಿಂದು ಎನ್ನುವುದು ನನ್ನ ನಿಲುವಾಗಿತ್ತು. ಆದರೆ, ನಾನು ಎಳೆಯನಾಗಿದ್ದರಿಂದ ಯಾರೂ ನನ್ನ ಮಾತನ್ನು ಗಂಭೀ ರವಾಗಿ ಪರಿಗಣಿಸಲಿಲ್ಲ'.

"ಗೈಡ್' ಚಿತ್ರ ಅವರ ಮೇಲೆ ಪರಿಣಾಮ ಬೀರಲು ಇನ್ನೂ ಒಂದು ಕಾರಣವಿತ್ತು. ಅದು ಚಿತ್ರದಲ್ಲಿ ಬಿಂಬಿತವಾಗಿದ್ದ ಬರದ ಕಟು ವಾಸ್ತವ ಮತ್ತು ನೀರಿನ ಕೊರತೆಯಿಂದ ರೈತರು ಅನುಭವಿಸುವ ಅಸಹಾಯಕತೆಯ ಬಗೆಗಿನ ಚಿತ್ರಣ. ಬಳಿಕ ಅವಕಾಶ ಸಿಕ್ಕಿದಾಗ, ಗುಜರಾತ್ನಲ್ಲಿ ತಮ್ಮ ಅಧಿಕಾರಾವಧಿಯ ಹೆಚ್ಚು  ಸಮಯವನ್ನು ಜಲ ಸಂರಕ್ಷಣೆಗೆ ಅಗತ್ಯವಾದ ಸಾಂಸ್ಥಿಕ ಕೆಲಸಗಳನ್ನು ಮಾಡಲು ಅವರು ಉತ್ತೇಜಿಸಿದರು. ಇದೇ ಯೋಜನೆಯನ್ನು ಪ್ರಧಾನಿ ಆದ ಬಳಿಕ ಅವರು ರಾಷ್ಟ್ರ ಮಟ್ಟದಲ್ಲೂ ಮಾಡುತ್ತಿದ್ದಾರೆ.

ಮೋದಿ ಅವರು ಪ್ರಧಾನಿ ಆದ ಬಳಿಕ ಆಡಳಿತ ನಿರ್ವಹಣೆ ಅವರ ಆದ್ಯತೆ ಆದ್ದರಿಂದ ಸಿನೆಮಾ ವೀಕ್ಷಣೆಗೆ ಸಮಯ ಸಿಗುವುದು ಸಾಧ್ಯವೇ ಇರಲಿಲ್ಲ. ಆದರೆ, ಅವರು ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಜೊತೆಗೆ ನಿತಂತರ ಸಂಪರ್ಕ ಇರಿಸಿಕೊಂಡಿದ್ದಾರೆ. ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗೆ ಕಲಾವಿದರ ಕೊಡುಗೆ ಬಗ್ಗೆ ಅಪಾರ ಗೌರವ ಇರಿಸಿ ಕೊಂಡಿರುವ ಅವರು, ಗುಜರಾತ್ನಲ್ಲಿ ಗಾಳಿಪಟ ಉತ್ಸವ ಹಾಗೂ ಇತ್ತೀಚೆಗೆ ದಿಲ್ಲಿಯ ಇಂಡಿಯಾ ಗೇಟ್ನ ರಾಜ್ಪಥ್ನಲ್ಲಿ ಭಾರತ್ ಪವರ್್ನಂಥ ಕಾರ್ಯಕ್ರಮಗಳನ್ನು ಆಯೋಜಿಸಿದರು.

ಅವರಿಗೆ ಇಷ್ಟವಾದ ಹಾಡು ಯಾವುದು? 1961ರಲ್ಲಿ ಲತಾ ಮಂಗೇಷ್ಕರ್ ಅವರು "ಜೈ ಚಿತ್ತೋರ್'ಚಲನಚಿತ್ರಕ್ಕೆ ಹಾಡಿರುವ "ಹೇ ಪವರ್್ ವೇಗ್ಸೆ ಉಡ್ನೇ ವಾಲೆ'. ಭರತ್ ವ್ಯಾಸ್ ಅವರಿಂದ ಸ್ಫೂತರ್ಿ ಪಡೆದು ಎಸ್ ಎನ್ ತ್ರಿಪಾಠಿ ರಚಿಸಿದ "ತೇರೆ ಕಂಧೋ ಆಜ್ ಭರ್ ಹೈ ಮೇವಾಡ್ ಕಾ, ಕರ್ನಾ ಪಡೇಗಾ ಸಾಮ್ನಾ ಪಹಾಡ್ ಕಾ' ಅವರು ಎಂದೆಂದೂ ಮೆಚ್ಚುವ ಗೀತೆಗಳಾಗಿವೆ.