ಭಾರತಪ್ರಧಾನ ಮಂತ್ರಿ ಏನು ತಿನ್ನಲು ಇಷ್ಟ ಪಡುತ್ತಾರೆ? ಅವರು ಭಾವನೆಗಳನ್ನೇ ಆಸ್ವಾಧಿಸುತ್ತಾರಾ? ಅನ್ನುವ ಪ್ರಶ್ನೆ ಬರುವುದು ಸಹಜ.

 

ಇದರ ಬಗ್ಗೆ ಖುದ್ದು  ನರೇಂದ್ರ ಮೋದಿಯವರೇ ಒಂದು ಒಳ ನೋಟ ಬೀರಿದ್ದಾರೆ.

 

ಅವರು ಹೇಳುವ ಪ್ರಕಾರ ” ಸಾರ್ವಜನಿಕ ಜೀವನದಲ್ಲಿರೋ ವ್ಯಕ್ತಿಗಳ ಕೆಲಸ, ಜೀವನ ವ್ಯವಸ್ಥಿತವಾಗಿರುವುದಿಲ್ಲ. ಯಾರು ಸಾರ್ವಜನಿಕರಾಗಿ ಸಕ್ರಿಯವಾಗಿರಲು ಬಯಸುತ್ತಾರೋ ಅವರಿಗೆ ಗಟ್ಟಿ ಹೊಟ್ಟೆ ಅಗತ್ಯವಿರುತ್ತದೆ.

 

35 ವರ್ಷಗಳ ಕಾಲ, ಹಲವು ಸಂಘಟನಾತ್ಮಕ ವಿಭಾಗದಲ್ಲಿಯೂ ಕೆಲಸ ಮಾಡಿದ್ದೇನೆ. ಆಗ ನಾನು ರಾಷ್ಟ್ರದೆಲ್ಲೆಡೆ ಪ್ರಯಾಣ ಮಾಡಬೇಕಾಗುತ್ತಿತ್ತು. ಅಲ್ಲಿ ನನಗೆ ಯಾವ ಆಹಾರ ಸಿಗುತ್ತದೆಯೋ, ಆ ಆಹಾರವನ್ನೇ ತಿನ್ನಬೇಕಾಗಿತ್ತು. ಹೀಗಾಗಿ ನಾನು ಯಾರ ಬಳಿಯೂ ವಿಶೇಷವಾಗಿದ್ದನ್ನು  ಮಾಡಿಕೊಡಿ ಅಂತ ಕೇಳುತ್ತಿರಲಿಲ್ಲ.

 

ನಾನು ಕಿಚಡಿಯನ್ನು ತುಂಬಾ ಇಷ್ಟಪಡುತ್ತೇನೆ. ಆದ್ರೆ ತಿನ್ನುವಾಗ ಯಾವುದು ಲಭ್ಯವಾಗುವುದೋ ಅದನ್ನೇ ಸ್ವೀಕರಿಸುತ್ತೇನೆ.

 

ಅವರ ಪ್ರಕಾರ “ ನನ್ನ ಆರೋಗ್ಯವನ್ನುದೇಶದ ಒಂದು ಹೊರೆಯನ್ನಾಗಿಸಲು ಬಯಸಲ್ಲ. ಕೊನೆಯ ಉಸಿರಿರುವವರೆಗೆ ನಾನು ಆರೋಗ್ಯಕರ ಮನುಷ್ಯನಾಗಿ ಉಳಿಯಲು ಬಯಸುತ್ತೇನೆ’ಎಂದು ಹೇಳುತ್ತಾರೆ.

 

ಪ್ರಧಾನಿ ಪಾತ್ರ ನಿರ್ವಹಿಸುವವರು ಸಾಕಷ್ಟು  ಪ್ರಯಾಣವನ್ನು  ಮಾಡಬೇಕಾಗುತ್ತದೆ, ಜೊತೆಗೆ ಔತಣ ಕೂಟದಲ್ಲಿಯೂ ಭಾಗಿಯಾಗಬೇಕು. ಮೋದಿ ಪ್ರತಿ ಔತಣಕೂಟದಲ್ಲಿ ಭಾಗಿಯಾದಾಗಲೂ ಸ್ಥಳೀಯ ಸಸ್ಯಾಹಾರಿ ಖಾಧ್ಯಗಳನ್ನೇ ಇಷ್ಟಪಡುತ್ತಾರೆ. ಯಾವುದೇ ದುರಭ್ಯಾಸಗಳಿಲ್ಲದ ಪ್ರಧಾನಿಯವರ ಗ್ಲಾಸ್ ನಲ್ಲಿ ನೀರು ಬಿಟ್ಟರೆ ತಂಪುಪಾನೀಯವಿರುತ್ತೆ, ಹೊರತು ಮದ್ಯವಲ್ಲ.