ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್.ಡಿ.ಎ ಸರಕಾರ ಮೇ 2014ರಲ್ಲಿ ಆದಕಾರಕ್ಕೆ ಬಂದಾಗ, ದೇಶದಲ್ಲಿ ಕೋಟ್ಯಾಂತರ ಭಾರತೀಯರಲ್ಲಿ ಬ್ಯಾಂಕು ಖಾತೆಗಳಿರಲಿಲ್ಲ. ದೇಶದಲ್ಲಿ ಬ್ಯಾಂಕುಗಳ ರಾಷ್ಟ್ರೀಕೃತಗೊಂಡು ಹಲವು ದಶಕಗಳು ಕಳೆದರೂ, ನಮ್ಮ ದೇಶದಲ್ಲಿ ಕೊಟ್ಯಾಂತರ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಿಸಲು ಯಾವುದೇ ವ್ಯವಸ್ಥೆಗಳಾಗದೆ, ಅವರೆಲ್ಲ ಆರ್ಥಿಕ ವ್ಯವಸ್ಥೆಯಿಂದ ಹೊರಗುಳಿದರು.

ದೇಶದ ಎಲ್ಲರನ್ನೂ, ಅದರಲ್ಲೂ ಗ್ರಾಮೀಣ ಮತ್ತು ಬಡಜನರನ್ನು ಕೂಡಾ ಆರ್ಥಿಕ ವ್ಯವಸ್ಥೆಯೊಳಗಡೆ ತರುವ ಉದ್ದೇಶದಿಂದ ಸರಕಾರ ಜನ್ ಧನ್ ಯೋಜನೆಯನ್ನು ಜಾರಗೆ ತಂದಿತು. ಕೇವಲ ಎರಡು ವರ್ಷಗಳ ಕನಿಷ್ಠ ಅವಧಿಯಲ್ಲಿ 23.93 ಕೋಟಿ ಬ್ಯಾಂಕು ಖಾತೆಗಳನ್ನು ಜನ್ ಧನ್ ಯೋಜನೆಯಡಿ ತೆರೆಯಲಾಯಿತು. ಅಲ್ಲದೆ, ಪ್ರಶಂಸಾರ್ಹ ಸಂಗತಿಯೆಂದರೆ, ಈ ಬಡಜನರ ಬ್ಯಾಂಕು ಖಾತೆಗಳಲ್ಲಿ ಒಟ್ಟು, ರೂ 41,789 ಕೋಟಿ ಠೇವಣಿ ನಿಕ್ಷೇಪಗೊಂಡಿದೆ. ಕೋಟ್ಯಾಂತರ ಜನರು ಬ್ಯಾಂಕು ಖಾತೆಗಳ ಮೂಲಕ ವ್ಯವಹರಿಸುವುದರಿಂದ ಉಳಿತಾಯದ ಹಾದಿ ಸುಗಮವಾಗಿಸಿಕೊಂಡರು ಮತ್ತು ಜೀವನ ಸರಕ್ಷತೆ ಪಡೆಯಿತು. ಲಕ್ಷಗಟ್ಟಲೆ ಜನರಿಗೆ ಅಧಿಕ ಬಡ್ಡಿಯ ಬಡ್ಡಿದಾರರ ಕಪಿಮುಷ್ಠಿಯಿಂದ ಮುಕ್ತಿ ದೊರಕಿತು, ಸಂಸ್ಥೆಗಳ ಸಾಲ ದೊರಕಲು ಹೆಬ್ಬಾಗಿಲಾದವು. ಜನ್ ಧನ್ ಖಾತೆಯಲ್ಲಿ, ಜನ ಸಾಮಾನ್ಯರಿಗೆ ರೂ 5000 ಓವರ್ ಡ್ರಾಫ್ಟ್ , ವಿಮಾ ಸುರಕ್ಷತೆ , ಮುಂತಾದ ಸೌಲಭ್ಯಗಳಿವೆ. ಪ್ರಾರಂಭದಲ್ಲಿ ಜನ್ ಧನ್ ಬ್ಯಾಂಕು ಖಾತೆಗಳೆಲ್ಲ ಶೂನ್ಯ ಹಣ ಇರುವ ಖಾತೆಗಳೆಂದು, ತೆಗಳಿಕೆ-ವಿಮರ್ಷೆಗೊಳಪಟ್ಟಿತ್ತು. ಬರುಬರುತ್ತಾ ದಿನಕಳೆದಂತೆ, ವ್ಯವಹಾರಿಕ ಬ್ಯಾಂಕು ಅಭ್ಯಾಸ ಹೆಚ್ಚಾಯಿತು, ಅಧಿಕ ಸಂಖ್ಯೆಗಳಲ್ಲಿ ಇವುಗಳ ಬಳಕೆಗೆ ಜನ ಒಲವು ವ್ಯಕ್ತ ಪಡಿಸಿದರು.

ಅತ್ಯಂತ ವೇಗವಾಗಿ ಜನ್ ಧನ್ ಖಾತೆ ತೆರಯುವ ಯೋಜನೆ ಯಶಸ್ವಿಯಾದಂತೆ, ಎನ್.ಡಿ.ಎ. ಸರಕಾರದ ಜನ್ ಧನ್ – ಆಧಾರ್ –ಮೊಬೈಲ್ (JAM) ವ್ಯವಸ್ಥೆಯ ಪ್ರಕ್ರಿಯೆ ಮತ್ತು ಉಪಕ್ರಮಗಳು ಸಾಕಾರಗೊಳ್ಳತೊಡಗಿದವು. ಸರಕಾರದ ಆಧಾರ್ ನೋದಣಿ ಪ್ರಕ್ರಿಯೆಯಲ್ಲಿ ತೀವ್ರತೆ ಮತ್ತು ಶೀಘ್ರತೆ ಪಡೆಯಿತು. ಮೇ 2014ರ ತನಕ ಒಟ್ಟು 65 ಕೋಟಿ ಆಧಾರ್ ನೋಂದಣಿಯಾಗಿದ್ದು, ಆನಂತರ, ಸರಕಾರ ಪ್ರಯತ್ನದಿಂದ 35 ಕೋಟಿ ಆಧಾರ್ ನೋಂದಣಿ ನಡೆಯಿತು. ಇಂದು ಒಟ್ಟು 105 ಕೋಟಿ ಭಾರತೀಯರಲ್ಲಿ ಆಧಾರ್ ಸಂಖ್ಯೆಯಿದೆ. ಸಾಮಾನ್ಯ ಲೆಕ್ಕಾಚಾರದಂತೆ, ಇಂದು ಬಹುತೇಕ ಎಲ್ಲ ಭಾರತೀಯರಲ್ಲೂ ಮೊಬೈಲು ಫೋನ್ ಇದೆ. ಇವುಗಳನ್ನು ಒಂದಕ್ಕೊಂದು ಜೋಡಿಸಿ, ಸರಕಾರಿ ರಿಯಾಯಿತಿಗಳನ್ನು, ಅನುದಾನಗಳನ್ನು, ಫಲಾನುಭವಿಗಳ ಪ್ರಯೋಜನಗಳನ್ನು ಯಾವುದೇ ಮಧ್ಯವರ್ತಿ ದಲ್ಲಾಳಿಗಳಿಲ್ಲದೆ ಹಣವರ್ಗಾವಣೆ ಯನ್ನು, ಫಲಾನುಭವಿಗಳನ್ನು ಗುರುತಿಸಿ, ವಿಳಂಬವಾಗದ ರೀತಿಯಲ್ಲಿ ಸಕಾಲಿಕವಾಗಿ ನೇರವಾಗಿ ಅವರುಗಳ ಖಾತೆಗೆ ತುಂಬಲು ಸಾಧ್ಯವಾಯಿತು. ಈ ಮೂಲಕ ಕೋಟಿಗಟ್ಟಲೆ ಫಲಾನುಭವಿಗಳಿಗೆ, ನೇರ ವರ್ಗಾವಣೆಯಿಂದ ಕೋಟಿಗಟ್ಟಲೆ ಹಣ ವರ್ಗಾಯಿಸಲಾಗಿದೆ. ಇದರಿಂದಾಗಿ ಸಾಕಷ್ಟು ಹಣ ಕಳೆದ ಎರಡು ವರ್ಷಗಳಲ್ಲಿ ಉಳಿದದೆ. ಕಳೆದ ಎರಡು ವರ್ಷಗಳಲ್ಲಿ 31 ಕೋಟಿ ಫಲಾನುಭವಿಗಳಿಗೆ ರೂ61,822 ಕೋಟಿ ಮೊತ್ತವನ್ನು ವರ್ಗಾಯಿಸಲಾಗಿದೆ, ಹಲವು ವಿಧದ ಯೋಜನೆಗಳ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆಯಲ್ಲಿ, ಕಳೆದ ಎರಡು ವರ್ಷಗಳಲ್ಲಿ, ರೂ 36,500 ಕೋಟಿ ಯಷ್ಟು ಸೋರಿಕೆ ತಡೆಗಟ್ಟಲಾಗಿದೆ ಮತ್ತು ಉಳಿತಾಯವಾಗಿದೆ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಿಕೋಧ್ಯಮಿ ಗಳು ನಮ್ಮ ದೇಶದಲ್ಲಿ ಬಹಳ ಮ್ರಮುಖ ಪಾತ್ರವಹಿಸುತ್ತಾರೆ. ಅವರುಗಳು ಮಿಲಿಯಗಟ್ಟಲೆ ಉದ್ಯೋಗ ಅವಕಾಶ ನೀಡುತ್ತಾರೆ ಅಲ್ಲದೆ ದೇಶದ ಆರ್ಥಿಕತೆಯಲ್ಲೂ ಇವರ ಪಾತ್ರ ಪ್ರಮುಖವಾಗಿದೆ. ಆದರೆ, ಇವರಲ್ಲಿ ಕೇವಲ ಸಣ್ಣ ಪ್ರಮಾಣದ ಉದ್ಯಮಿಗಳಿಗೆ ಮಾತ್ರ ಸಂಸ್ಥೆಗಳ/ಸಾಂಘಿಕ ಸಾಲ ಪಡೆಯುತ್ತಾರೆ. ಅಲ್ಲದೆ, ಅಧೀಕ ಸಂಖ್ಯೆಯ ಮಂದಿ ಬಡ್ಡಿಗೆ ಹಣ ನೀಡುವವರ ಅಧಿಕ ಬಡ್ಡಿಯ ಸಾಲ ಪಡೆಯಲು ಬಲವಂತ ಮಾಡುವ ಪರಿಸ್ಥಿತಿ ದೇಶದಲ್ಲಿದೆ.

ಎನ್.ಡಿ.ಎ ಸರಕಾರ ಅತ್ಯಂತ ಕನಿಷ್ಠ ದರದಲ್ಲಿ, ಇಂತಹ ಸಣ್ಣ ವ್ಯವಹಾರಿಕೋದ್ಯಮಿಗಳಿಗೆ ಯಾವುದೇ ಬಧ್ರತೆ ಇಲ್ಲದೆ ಸಾಲ ನೀಡುವ ಮುದ್ರ ಯೋಜನೆ ಜಾರಿಗೊಳಿಸಿದೆ. 2015-16ರಲ್ಲಿ, ಗುರಿ ಹೊಂದಿದ್ದ ರೂ 1,22,188 ಕೋಟಿಗೆ ಬದಲಾಗಿ, ರೂ 1,32954.73 ಕೋಟಿ ರೂಪಾಯಿಯನ್ನು ಈ ಯೋಜನೆ ಅಡಿಯಲ್ಲಿ ವಿತರಿಸಲಾಗಿದೆ. ಒಟ್ಟು 3.48 ಕೋಟಿ ವ್ಯವಹಾರಿಕೋದ್ಯಮಿಗಳು ಕಡಿಮೆ ಬಡ್ಡಿಯ ಆರ್ಥಿಕ ಸಹಾಯದ ಸಾಲ ಪಡೆದಿದ್ದಾರೆ. ಇದರಲ್ಲಿ 5 ಕೋಟಿ ಹೊಸ ಉದ್ಯಮಿಗಳು ಒಟ್ಟು ರೂ 58,908 ಕೋಟಿ ಸಾಲದ ಸಹಾಯ ಪಡೆದಿದ್ದಾರೆ. ಇದರಲ್ಲೂ, 79% ಮಹಿಳೆಯರಾಗಿದ್ದಾರೆ. ಅವರುಗಳು ಒಟ್ಟು ರೂ 63,190 ಕೋಟಿ ಸಾಲದ ಸಹಾಯ ಪಡೆದಿದ್ದಾರೆ. ಇದೇ ರೀತಿ ಮುದ್ರ ಯೋಜನೆಯ ಸಾಲದ ಮೊತ್ತ 2016-17ರಲ್ಲಿ ಹಿಂದಿನ ವರ್ಷಕ್ಕಿಂತ 50% ಹೆಚ್ಚಳ ಕಾಣಲಿದ್ದು, ರೂ 1,80,000 ಖೋಟಿಯ ಗುರಿ ತಲಉಪಲಿದೆ.

ಈ ಮೇಲಿನ ಬ್ಯಾಂಕಿಂಗ್ ಪ್ರಕ್ರಿಯೆಗಳ ಫಲಿತಾಂಶಗಳು ಭಾರತೀಯರ ಜೀವನದಲ್ಲಿ ಮಹತ್ತರ ಬದಲಾವಣೆಯ ಪರಿಣಾಮವನ್ನು ತಂದವು. ಯಾವುದೇ ಸಾಮಾನ್ಯ ಬ್ಯಾಂಕು ಖಾತೆಯಂತಹ ಸೌಕರ್ಯಗಳನ್ನೂ ಹೊಂದಿಲ್ಲದ, ಬಡ ಜನ ಸಾಮಾನ್ಯ ಭಾರತೀಯರಲ್ಲಿ, 2014ರ ನಂತರ ಹಲವು ಸವಲತ್ತು, ಸೌಕರ್ಯಗಳ ಖಾತೆ, ಬಧ್ರತೆರಹಿತ ಸಾಲ, ಅಲ್ಲದೆ ಹಲವಾರು ಸಕಾರಾತ್ಮಕ ಗುಣವತ್ತಾದ ಮಹತ್ತರ ಬದಲಾವಣೆಗಳನ್ನು ಜೀವನದಲ್ಲಿ ತಂದವು. ಖಾತೆಯ ಸೌಕರ್ಯಗಳು ಇನ್ನು ಮುಂದೆ ಕೇವಲ ಮಧ್ಯಮ ವರ್ಗದ ಜನಸಮುದಾಯಗಳ ಮಾತ್ರ ಹಕ್ಕಲ್ಲ, ಅನುದಾನಗಳು, ಮತ್ತು ಇತರ ಪ್ರಯೋಜನಗಳಿಗಾಗಿ ಯಾವುದೇ ಮಧ್ಯವರ್ತಿಗಳ, ದಲ್ಲಾಳಿಗಳ ಆವಶ್ಯವಿಲ್ಲ ಹಾಗೂ ಹಲವು ಬಾರಿ ಸರಕಾರ ಕಚೇರಿಗಳನ್ನು ಅಲದಾಡ ಬೇಕಾಗಿಲ್ಲ, ನಿಮ್ಮ ಹಣ ನಿಮ್ಮ ಖಾತೆಗೆ ನೇರ ಖಾತೆಯಲ್ಲಿ ಪಡೆಯಬಲ್ಲ ಅವಕಾಶ ಜನಸಾಮಾನ್ಯ ಕೂಡಾ ಜನ್ ಧನ್ ಖಾತೆ ಮೂಲಕ ಪಡೆದ. ದೇಶದಾಧ್ಯಂತ ನೇರ ಹಣ ವರ್ಗಾವಣೆ ( DBT) ವ್ಯವಸ್ಥೆ & ಜನ್ ಧನ್ – ಆಧಾರ್ –ಮೊಬೈಲ್ (JAM) ವ್ಯವಸ್ಥೆಗಳು ಜನಸಾಮಾನ್ಯರ ಹಣಕಾಸು ವ್ಯವಹಾರ ಮತ್ತು ಪ್ರಯೋಜನಗಳನ್ನು ಸುಲಭ, ಸಮರ್ಪಕ, ಸಮರ್ಥವಾಗಿ ಮತ್ತು ಅತ್ಯಂತ ಪಾರದರ್ಶಕ ರೀತಿಯಲ್ಲಿ ಅವರ ಖಾಸಗಿ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತವೆ.

 

 

 

Explore More
PM Modi's reply to Motion of thanks to President’s Address in Lok Sabha

Popular Speeches

PM Modi's reply to Motion of thanks to President’s Address in Lok Sabha
Modi govt's next transformative idea, 80mn connections under Ujjwala in 100 days

Media Coverage

Modi govt's next transformative idea, 80mn connections under Ujjwala in 100 days
NM on the go

Nm on the go

Always be the first to hear from the PM. Get the App Now!
...
Prime Minister also visited the Shaheed Sthal
March 15, 2019

Prime Minister also visited the Shaheed Sthal