ಮಾಧವರಾವ್‌ ಸಿಂಧಿಯಾರಿದ್ದ ವಿಮಾನ ದುರಂತಕ್ಕೀಡಾಗಿ ಹಿರಿಯ ಛಾಯಾಗ್ರಾಹಕ ಗೋಪಾಲ್‌ ಬಿಸ್ತ್‌ ಸೇರಿದಂತೆ ಪತ್ರಕರ್ತರು ನಿಧನಹೊಂದಿದ್ದರು. ಶ್ರೀ ಗೋಪಾಲ್‌ ಬಿಸ್ತ್‌ ಅವರ ಅಂತ್ಯಕ್ರಿಯೆಯಲ್ಲಿ ಶ್ರೀ ನರೇಂದ್ರ ಮೋದಿಯವರಿದ್ದಾಗ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ದೂರವಾಣಿ ಕರೆ ಬಂದಿತು.

`ಎಲ್ಲಿದ್ದೀಯಾ?’ ಎಂದು ಕೇಳಿದರ ಅಟಲ್‌ಜಿ.

‘ನಾನೊಂದು ಅಂತ್ಯಕ್ರಿಯೆಯಲ್ಲಿದ್ದೇನೆ’ ಎಂದರು ಮೋದಿ. `ಸರಿ, ನಾನು ಅಂತ್ಯಕ್ರಿಯೆಯಲ್ಲಿರುವಾಗ ಮಾತನಾಡಲಾರೆ. ಸಂಜೆ ವೇಳೆಗೆ ಮನೆಗೆ ಬಾ’ ಎಂದು ಅಟಲ್‌ ಜಿ ಮಾತು ಮುಗಿಸಿದರು.

ಆ ಸಂಜೆ ಮೋದಿಯವರು ಅಟಲ್‌ ಜಿ ಯವರನ್ನು ಭೇಟಿ ಮಾಡಿದಾಗ, ‘ದಿಲ್ಲಿ ನಿನ್ನನ್ನು ಬಹಳ ದಪ್ಪಗಾಗಿಸಿದೆ. ನೀನು ವಾಪಸ್‌ ಗುಜರಾತ್‌ ಗೆ ಹೋಗು’ ಎಂದರು ಅವರು.  ಅ ಸಂದೇಶವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡ ಮೋದಿಯವರು ಅಚ್ಚರಿಗೊಂಡರು. ಶಾಸಕನಾಗಿಯೂ ಸೇವೆ ಸಲ್ಲಿಸದ ಮೋದಿಯವರ ಮೇಲೆ ದೊಡ್ಡ ಹೊಣೆಯನ್ನು ಹೊರಿಸಲಾಗಿತ್ತು. ಅಷ್ಟೇ ಅಲ್ಲ. ಪಕ್ಷವು ವಿಶ್ವಾಸದ ಮೂಟೆಯನ್ನೇ ಹೊರಿಸಿತ್ತು. ಆದರೆ ದೇಶದ ಪ್ರಧಾನಿಯ ಸೂಚನೆಯನ್ನು ಧಿಕ್ಕರಿಸಲು ಸಾಧ್ಯವೇ? ಇಲ್ಲವೆನ್ನುವುದಾದರೂ ಹೇಗೆ?

ಶ್ರೀ ಮೋದಿಯವರ ಮಾತಿನಲ್ಲೇ ಕೇಳುವುದಾದರೆ, ‘ಬಹಳ ವರ್ಷಗಳಿಂದ ಗುಜರಾತ್‌ ನಲ್ಲೇ ಇರಲಿಲ್ಲ. ನನ್ನ ಪಕ್ಷದ ಸಹೋದ್ಯೋಗಿಗಳನ್ನು ಕರೆದು ಕೇಳಿದೆ. ನೀವು ನನ್ನನ್ನು ನಿಮ್ಮಲ್ಲಿಗೆ ಕರೆಯುತ್ತಿದ್ದೀರಿ. ಆದರೆ ನನಗೆ ಮನೆಯೆ ಇಲ್ಲ ಅಲ್ಲಿ. ಹೋಗುವುದಾದರೂ ಎಲ್ಲಿಗೆ?. ಅದಕ್ಕೆ ಅವರು, ನಿಮಗೆ ಸರ್ಕ್ಯೂಟ್‌ ಹೌಸ್‌ ನಲ್ಲಿ ಕೋಣೆಯನ್ನು ಕಾದಿರಿಸುವೆವು’ ಎಂದರು. ಅದಕ್ಕೆ `ನಾನು ಶಾಸಕನಲ್ಲ. ಅದರ ಬಾಡಿಗೆಯನ್ನು ನಾನೇ ಪಾವತಿಸುವೆ. ಹಾಗಾದರೆ ಮಾತ್ರ ಬರುವೆ’ ಎಂದೆ.

ಹಾಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಶ್ರೀ ಮೋದಿಯವರ ಇನ್ನಿಂಗ್ಸ್‌ ಆರಂಭವಾಯಿತು. ಅವರು ರಾಜ್ಯದ ಅತಿ ಹೆಚ್ಚು ಅವಧಿ ಅಂದರೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಾಖಲೆ ನಿರ್ಮಿಸಿದರು.