ಗುಜರಾತಿನ ಮೆಹ್ಸಾನ ಜಿಲ್ಲೆಯ ವಡ್ನಗರ್ ಎಂಬ ಸಣ್ಣ ಹಳ್ಳಿ ಯಿಂದ ಶ್ರೀ ನರೇಂದ್ರ ಮೋದಿ ಅವರ ಜೀವನ ಪಯಣ ಪ್ರಾರಂಭ. 17ನೇ ಸೆಪ್ಟೆಂಬರ್ 1950ರಂದು, ದಾಮೋದರ್ ದಾಸ ಮೋದಿ ಮತ್ತು ಹೀರಾಮೋದಿ ಅವರುಗಳ 6 ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿ ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಡ್ನಗರ್ ಹಲವು ಇತಿಹಾಸಕ್ಕೆ ಹೆಸರಾಗಿದೆ.  ಚೀನಾದ ಪ್ರವಾಸಿ ಹ್ಯೂಯೆನ್ ಸಾಂಗ್ ವಡ್ನಗರ ಭೇಟಿಮಾಡಿದ್ದರು. ಶತಮಾನಗಳ ಹಿಂದೆ 10000 ಬೌದ್ಧ ಸನ್ಯಾಸಿಗಳು ಇಲ್ಲಿ ವಾಸವಾಗಿದ್ದರು.

vad1


Vadnagar station, where Narendra Modi's father owned a tea stall and where Narendra Modi also sold tea

ಬಡತನದ ಕುಟುಂಬ. ಹಿಂದುಳಿದ ಸಮಾಜದ ವಸತಿ ಪ್ರದೇಶದಲ್ಲಿ ಏಕಕೊಠಡಿಯ ಪುಟ್ಟ ಮನೆ.  ಇವರ ತಂದೆ ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಸಣ್ಣ ಚಹಾ ಅಂಗಡಿಯಿಟ್ಟು ಪಯಣಿಗರಿಗೆ ಚಹಾ ಮಾರಿ ಕುಟುಂಬ ಜೀವನ ಸಾಗಿಸುತ್ತಿದ್ದರು. ಬಾಲ್ಯದಲ್ಲಿ ತಂದೆಗೆ ಸಹಾಯಕನಾಗಿ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು

ಬಾಲ್ಯದಲ್ಲಿ ಶಿಕ್ಷಣ ಜೊತೆ ತಂದೆಯೊಂದಿಗೆ ಚಹಾ ವ್ಯಾಪಾರ, ದುಡಿಮೆ ಜೊತೆಯಾಗಿ ಸಾಗಿಸಲು ಇವರಿಗೆ ಬಡತನ ಅನಿವಾರ್ಯವಾಗಿಸಿತ್ತು. ಇವರ ವಿದ್ವತ್ತಿಗೆ ಸಹಪಾಠಿಗಳು ಇವರ ಜೊತೆ ವಾದ ಚರ್ಚೆಗಾಗಿ ಚಹಾ ಅಂಗಡಿಗೆ ಬರುತ್ತಿದ್ದರು. ಈಜು ಇವರ ಹವ್ಯಾಸವಾಗಿತ್ತು. ಇವರು ಹಿಂದು ಮತ್ತು ಮುಸ್ಲಿಮ್ ಹಬ್ಬಗಳೆರಡನ್ನೂ ಬಾಲ್ಯದಲ್ಲಿ ಆಚರಿಸುತ್ತಿದ್ದರು. ಇವರ ಗಳೆಯರ ಸಾಲಿನಲ್ಲಿ ನೆರೆಕೆರೆಯ ಮುಸಲ್ಮಾನರೇ ಅಧಿಕಸಂಖ್ಯೆಯಲ್ಲಿದ್ದರು

Humble Beginnings: The Early Years
As a child Narendra Modi dreamt of serving in the Army but destiny had other plans…

ಇವರ ಜನಜೀವನ ಸಹವಾಸಗಳು ಸಾಮಾನ್ಯರ ಮನಸ್ಥಿತಿಗೆ ಬದಲಾಗಿ ಸಮಾಜ ಪರಿವರ್ತನೆಗೆ ಮನ ಹಾತೊರೆಯುವಂತೆ ಮಾಡಿದವು. ಜನರ ಕಣ್ಣೀರು ನೋಡಲಾರದೆ, ಅದನ್ನು ತಡೆಯಲಾರದೆ ಬಹಳಷ್ಟು ವ್ಯಥೆಪಟ್ಟರು. ಉಪ್ಪು, ಮೆಣಸು, ಎಣ್ಣೆ ಮತ್ತು ಬೆಲ್ಲ ತ್ಯಜಿಸಿ ಸೇವಿಸುವುದನ್ನು ಬಿಟ್ಟೇಬಿಟ್ಟರು. ಸ್ವಾಮಿ ವಿವೇಕಾನಂದರ ಪುಸ್ತಕಗಳ ಪ್ರತಿಪುಟದ ಪ್ರತಿ ವಾಕ್ಯ ಪುನಃಪುನಃ ಓದಿ ಕರಗತಮಾಡಿಕೊಂಡರು. ವಿವೇಕಾನಂದರ ಜಗದ್ ಗುರು ಭಾರತ ಕನಸು ನನಸಾಗಲು ಪ್ರಯತ್ನಿಸಿದರು.

ಇವರಲ್ಲಿ ತಮ್ಮ ಮುಂದಿನ ಜೀವತಾವಧಿಗೆ ಉಳಿದ ಸಂದೇಶವೆಂದರೆ ಅದು ಸೇವೆ ಮಾತ್ರ. ಸೈನಿಕರು, ತಾಯಿನಾಡು ಇವರ ಪಾಲಿಗೆ ಸದಾ ಅಪಾರಗೌರವ ಹೊಂದಿದ್ದಿತರರು. ಬಾಲ್ಯದಲ್ಲಿದ್ದ ಈ ಅಸೆ ನೆರವೇರಲು ಸೇನೆ ಸೇರಬಯಸಿದರು . ಇವರ ಸಮಕಾಲೀನ ಯುವಕರಿಗೆ ದೇಶಸೇವೆಗೆ ಸೈನ್ಯ ಸೇರುವುದು ಮೊದಲ ಆಧ್ಯತೆ ಮತ್ತು ಕೊನೆಯ ಮಾತಾಗಿತ್ತು. ಇವರ ಮನೆಯವರು ಅದನ್ನು ವಿರೋಧಿಸಿದರು, ಪಕ್ಕದ ಜಮ್ನಾ ನಗರ್ ಸೈನಿಕಶಾಲೆಯಲ್ಲಿ ಶಿಕ್ಷಣಕ್ಕೆ ಅವಕಾಶ ಸಿಕ್ಕಿದರೂ ಶುಲ್ಕ ನೀಡುವ ಅವಧಿಬಂದಾಗ ಇವರ ಮನೆಯಲ್ಲಿ ನೀಡಲು ಹಣವಿರಲಿಲ್ಲ. ಅತ್ಯಂತ ಬೇಸರ ಪಟ್ಟರು. ಅಸಹಾಯಕರಾದು.  

ಆದರೆ ವಿಧಿ ಅದರದ್ದೇ ನಿರ್ಧಾರ ತೆಗೆದುಕೊಳ್ಳುತ್ತದೆ, ಸೈನಿಕರ ಉಡುಪುಧರಿಸುವ ಅರ್ಹತೆ ನೀಡಿಲ್ಲ.  ಅದರೆ ಅವರದ್ದೇ ಹಾದಿ ಹಿಡಿದರು ಅವರದ್ದೇ ಅದ ವಿಶಾಲ ದೃಷ್ಠಿಕೋನ ಹೊಂದಿದ್ದರು.

vad4


Seeking the blessings of his Mother