ಮಾನವೀಯತೆಯಲ್ಲಿ ನಮಗೆ ವಿಶ್ವಾಸ

Published By : Admin | May 26, 2015 | 15:04 IST

“ ನಮ್ಮಲ್ಲಿ ಒಬ್ಬೊಬ್ಬರ ವೈಯ್ಯಕ್ತಿಕ ಪಾಸ್ ಪೋರ್ಟ್ ಭಿನ್ನವಿರಬಹುದು, ಆದರೆ ಇವುಗಳು ಸಧೃಢ ಮಾನವೀಯತೆಯ ಬಂಧನಕ್ಕಿಂತ ಮಿಗಿಲಾಗದು” – ಇದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯಾವುದೇ ನೈಸರ್ಗಿಕ ಆಪತ್ತಿನ, ಪ್ರಕೃತಿಕ ವಿಪತ್ತಿನ ಸಂದರ್ಭಗಳಲ್ಲೆಲ್ಲ  ಬಹುತೇಕವಾಗಿ ಹೇಳುತ್ತಿದ್ದ ಮುಖ್ಯ ಸಂದೇಶದ ಸಾರಾಂಶ.

ಯಮನ್, ಸಂದಿಗ್ಧತೆಯ ಉಚ್ಛ್ರಾಯ ಸ್ಥಿತಿಯಲ್ಲಿ  ಹಲವು ದೇಶಗಳು ಅಸಹಾಯಕವಾದರೂ, ಭಾರತ ಸಹಾಯ ಹಸ್ತ ನೀಡಿತು.ಯಾವುದೇ ಒಂದು ಪ್ರಕ್ರಿಯೆಯನ್ನೂ ವ್ಯರ್ಥಗೊಳಿಸಸದೆ, ತನ್ನೆಲ್ಲಾ ಸಾಮರ್ಥ್ಯದಿಂದ ಮಾಡಿದ ಸಕಾರಾತ್ಮಕ ಸಹಾಯದ ಪರಿಣಾಮವಾಗಿ, ಮುಂಬರುವ ದಿನಗಳಲ್ಲಿ, ಇಂಥಹ ಸಂದರ್ಭಗಳಲ್ಲಿ ಅನೇಕ ದೇಶಗಳು ಭಾರತದ ಸಹಾಯವನ್ನು ಯಾಚಿಸಿದವು.



ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾದ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಪರಿಹಾರ ಮತ್ತು ಸಹಾಯ ಉಪಕ್ರಮಗಳ ಬಗ್ಗೆ ನಿಕಟ ಸಂಪರ್ಕವಿಟ್ಟು ಗಮನಿಸಿ, ಸೂಚನೆ ನೀಡುತ್ತಿದ್ದರು, ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ವಿ.ಕೆ ಸಿಂಗ್ ಅವರು ಸ್ವತಃ ಯಮನ್ ಮತ್ತು ಜಿಬೊಟಿಗೆ ತೆರಳಿ ಪರಿಹಾರ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅಲ್ಲಿಂದ ಪ್ರತಿಯೊಂದೂ ಚಟುವಟಿಕೆಗಳನ್ನು ಯುದ್ದೋಪಾದಿಯಲ್ಲಿ ಸಮರ್ಪಕವಾಗಿ ನೆರವೇರಿಸಿಕೊಟ್ಟರು.

ನೇಪಾಲದ ಪ್ರಕೃತಿಕ ವಿಪತ್ತು.25ನೇ ಎಪ್ರಿಲ್ 2015ರಂದು ಭಾರತವನ್ನು ತಲ್ಲಣಗೊಳಿಸಿದ ಇನ್ನೊಂದು ಘಟನೆ. ಪ್ರಧಾನಿಯವರ ಅಧ್ಯಕ್ಷತೆಯಲ್ಲಿ, ನೇಪಾಲದ ಸಹೋದರ ಮತ್ತು ಸಹೋದರಿಯರ ಸಹಾಯಕ್ಕಾಗಿ ವಿಶೇಷ ಉನ್ನತ ಮಟ್ಟದ ಸಮಿತಿ ನಿರ್ಮಿಸಿ.  ಭೂಕಂಪನದಿಂದ ಹಾನಿಗೊಳಗಾದ ನೆರೆದೇಶಕ್ಕೆ ಹಿರಿಯಣ್ಣನ ಸ್ಥಾನದಲ್ಲಿ ಆಶ್ರಯದಾಸರೆಯಾಗಿ ಮುಂದೆ ನಿಂತು ಸಹಾಯ-ಪರಿಹಾರ ನೀಡಿ ಅವರ ಕಣ್ಣೀರು ಒರೆಸಲು ಪ್ರಯತ್ನಿಸಿತು.l ,



ವಿಶ್ವಸಂಸ್ಥೆ ಪ್ರಶಂಸಿಸಿತು. ಭಾರತದ ಉಪಕಾರದ ಮನೋಭಾವವನ್ನು, ಮಾನವೀಯತೆಯ ನಡೆಯನ್ನು ಯು.ಎಸ್.ಎ ಶ್ಲಾಘಿಸಿತು. ಬಹುತೇಕ ಇಡೀ ವಿಶ್ವವೇ ಹೊಗಳಿತು ಅನ್ನಬಹುದು.

ಅಫ್ಘಾನ್ ಉಗ್ರರು 8 ತಿಂಗಳ ಕಾಲ ಬಂಧಿಸಿಟ್ಟಿದ್ದ ಫಾದರ್ ಅಲೆಕ್ಸ್ ಪ್ರೇಮ್ ಕುಮಾರ್ ಅವರನ್ನು ಯಶಸ್ವಿಯಾಗಿ ಬಂಧಮುಕ್ತಗೊಳಿಸಿ  2015ರ ಫೆಬ್ರವರಿಯಲ್ಲಿ ತಾಯ್ನಾಡಿಗೆ ಕೆರೆತರಲಾಯಿತು. ಅವರ ಕುಟುಂಬದ ಸಮ್ಮಿಳನ, ಕಟುಂಬದ ಆನಂದ ಮತ್ತು ಕುಟುಂಬದ ನೆಮ್ಮದಿಯ ನಿಟ್ಟುಸಿರು.ಕೇಂದ್ರ ಸರಕಾರಕ್ಕೆ ಅದರಲ್ಲೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪಾಲಿಗೆ ಬಹುದೊಡ್ಡ ಯಶಸ್ಸಿನ ಮುಕುಟಗರಿಯಾಗಿದೆ.

ಮಧ್ಯಪ್ರಾಚ್ಯ ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ಮಂದಿ ಕೇಂದ್ರ ಸರಕಾರದ ಕಾರ್ಯಪಡೆಯಿಂದ ಸುರಕ್ಷಿತವಾಗಿ ತಾಯಿನಾಡು ಸೇರಿದರು ಅದರಲ್ಲೂ ಇರಾಕ್ ನಲ್ಲಿ ಉದ್ಯೋಗದ ಮೋಸಕ್ಕೆ ಬಲಿಯಾಗಿ, ದೌರ್ಜನ್ಯಕ್ಕೊಳಗಾದ ಕೇರಳ ಮೂಲದ ನರ್ಸ್ ಗಳನ್ನು ಬಂಧನದಿಂದ ರಕ್ಷಿಸಿ, ಸುರಕ್ಷಿತವಾಗಿ ಮನೆಗೆ ತಲುಪಿಸಿಕೊಟ್ಟರು. ಇದರ ಗಂಭೀರತೆಗೆ ಮತ್ತು ತ್ವರಿತ ಪರಿಹಾರದ ಯಶಸ್ಸಿಗೆ, ಅಂದಿನ ಕೇರಳ ಮುಖ್ಯಮಂತ್ರಿ ಶ್ರೀ ಉಮ್ಮನ್ ಚಾಂಡಿ ಅವರು ಸ್ವತಃ ನೀಡಿದ ಧನ್ಯವಾದ ಪತ್ರವೇ ಸಾಕ್ಷಿ.

ಹೀಗೆ ಅನೇಕ ಬಾರಿ, ವಿವಿಧ ಸಂದರ್ಭಗಳಲ್ಲಿ, ಪಾಸ್ ಪೊರ್ಟಿನ ಬಣ್ಣಕ್ಕಿಂತ ಮಾನವೀಯತೆಯ ಸಂಬಂಧಗಳು ಮುಖ್ಯವೆಂದು ಪುನರಪಿ ತೋರಿಸಿಕೊಟ್ಟ ಕೇಂದ್ರ ಸರಕಾರದ ಸಾಮಾಜಿಕ ಕಾಳಜಿಯ ಘಟನೆಗಳಲ್ಲಿ ಕೇವಲ ಉದಾಹರಣೆಗಳು ಮಾತ್ರ.

Explore More
PM Modi's reply to Motion of thanks to President’s Address in Lok Sabha

Popular Speeches

PM Modi's reply to Motion of thanks to President’s Address in Lok Sabha
Modi govt's next transformative idea, 80mn connections under Ujjwala in 100 days

Media Coverage

Modi govt's next transformative idea, 80mn connections under Ujjwala in 100 days
NM on the go

Nm on the go

Always be the first to hear from the PM. Get the App Now!
...

ಮೇ 26, 2014ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ನೆರೆಕೆರೆ ದೇಶಗಳ ಜೊತೆ ಸೇಹಸೌಹಾರ್ದತೆಹೆಚ್ಚಾಗ ಬೇಕು, ವಿದೇಶಿಗಳು ಹೆಚ್ಚುಹೆಚ್ಚು ಭಾರತಕ್ಕೆ ಬರಬೇಕು, ಅಧಿಕಸಂಖ್ಯೆಯಲ್ಲಿ ಹೂಡಿಕೆಗಾರರು ಭಾರತವನ್ನು ಬಂಡವಾಳಕ್ಕಾಗಿ ತಮ್ಮ ತಾಣವನ್ನಾಗಿಸಬೇಕು, ಇದಕ್ಕಾಗಿ ಅತ್ಯಾಕರ್ಷಕ ವಿದೇಶ ನೀತಿ ಜಾರಿಯಾಗಬೇಕು. ಇದು ಶ್ರೀ ನರೇಂದ್ರ ಮೋದಿಯವರ ದೀರ್ಘಕಾಲ ಅಗ್ರಹಕೂಡಾ ಆಗಿತ್ತು.

 

ಸಾರಕ್ ಮೂಲಕ ನೆರೆಕೆರೆ ದೇಶಗಳನ್ನು ಆಹ್ವಾನಿಸಿ ಅತಿಥಿಗಳಾಗಿ ಸ್ವೀಕಾರನೀಡಿ ಸ್ನೇಹ ಗಳಿಸಿದರು. ವಿದೇಶ ಪ್ರವಾಸಮೂಲಕ ಅವರು ಅದನ್ನು ಸಧೃಡಗೊಳಿಸಿದರು.ಐತಿಹಾಸಿಕ ಬಾಂಗ್ಲಾ ಗಡಿ ವಿವಾದಕ್ಕೆ 2015ರಲ್ಲಿ ಪರಿಹಾರ ತೋರಿದರು. ಇವರ ಮಾಲ್ದೀವ್ಸ್ ದ್ವಿಪಕ್ಷೀಯ ಸಂಬಂಧಕ್ಕೆ 2015 ಸಾಕ್ಷಿಯಾಯಿತು. ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನ ಇನ್ನೊಂದು ಐತಿಹಾಸಿಕ ಘಟನೆಗೆ ಮುಹೂರ್ತವಾಯಿತು. ಬ್ರಿಕ್ಸ್ ಬ್ಯಾಂಕು ಸೃಷ್ಠಿಯಾಯಿತು, ಅದರ ಅಧ್ಯಕ್ಷತೆ ಭಾರತದ ಪಾಲಾಯಿತು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಶ್ವ ಸಂಸ್ಥೆಯ ಭಾಷಣದಲ್ಲಿ ಮಾಡಿದ ಮನವಿಯನ್ನು, ವಿಶ್ವ ಸಂಸ್ಥೆಯ 177 ಸದಸ್ಯ ರಾಷ್ಟ್ರಗಳು ಅನುಮೋದಿಸಿದವು, ಅಂತರ್ ರಾಷ್ಟ್ರೀಯ ಯೋಗದಿನವಾಗಿ ಅಂಗೀಕರಿಸಿದವು, ವಿಶ್ವದಾಧ್ಯಂತ ಪ್ರತಿ ವರ್ಷ ಜೂನ್ 21ರಂದು ಆಚರಿಸಿ ಸಂಭ್ರಮಿಸಲು ಡಿಸೆಂಬರ್ 2014ರಂದು ಒಕ್ಕೊರಳಿಂದ ನಿಶ್ಚಯಿಸಲಾಯಿತು. ಇದು ಭಾರತದ ಪ್ರತಿಷ್ಠೆಗೆ ಸಿಕ್ಕ ಮತ್ತೊಂದು ಹೆಗ್ಗಳಿಕೆಯ ಗರಿಮೆ.  

ಜಿ20 ರಾಷ್ಟ್ರಗಳ , 2014ರ ಆಸ್ಟ್ರೇಲಿಯ ಮತ್ತು 2105ರ ಟರ್ಕಿ ಸಭೆಯಲ್ಲಿ ಭಾರತ ಪಾಲ್ಗೊಂಡು ಸಂಬಂಧ ವೃದ್ಧಿಸಿತು. ಕಾಳಧನ ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿ ತಮ್ಮ ಭಾಷಣದಲ್ಲಿ ಪ್ರಭಲವಾಗಿ ಪ್ರತಿಪಾದಿಸಿದರು.

ಅಸೀನ್ ರಾಷ್ಟ್ರಗಳ ಸಮಾರಂಭಗಳಲ್ಲಿ, ಮೈನ್ಮಾರ್ (2104) ಮತ್ತು 2015( ಕೌಲಾ ಲಾಂಪುರ್) ಸಭೆಗಳಲ್ಲಿ, ಏಷ್ಯಾದ ಸಹರಾಷ್ಟ್ರಗಳ ಒಟನಾಟ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೆಚ್ಚಿಸಿಕೊಂಡರು. ಎನ್.ಡಿ.ಎ. ಸರಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಪ್ರಚಾರ,  ಯಶಸ್ಸು ಮಾತ್ರ ಇವರ ಭಾಷಣದ ಮುಖ್ಯ ಲಕ್ಷ್ಯವಾಗಿತ್ತು.

ಪ್ಯಾರಿಸ್ ನಲ್ಲಿ ನಡೆದ  ಕೋಪ್ 21ರ ಸಮಾರಂಭದಲ್ಲಿ ಜಗತ್ತನ ವಿವಿಧ ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಸಿರು ಜಗತ್ತನ್ನು ಮುಂದಿನ ಪೀಳಿಗೆಗೆ ನೀಡಲು, ಸೂರ್ಯಕಿರಣದಿಂದ ಸೌರಶಕ್ತಿ ಬಳಕೆಯ ಸದುಪಯೋಗಕ್ಕಾಗಿ ಅವಕಾಶ ಬಳಸಿಕೊಳ್ಳಲು , ವಾತಾವರಣ ಬದಲಾವಣೆಯ ಕುರಿತು ಎಲ್ಲರೂ ಒಟ್ಟಾಗಿ ನಿರ್ಣಯ ತೆಗೆದುಕೊಳ್ಳುವ ಸಾವಕಾಶ ಪಡೆದರು. ಅಧ್ಯಕ್ಷ ಹೊಲ್ಲಂಡೆ ಜೊತೆ ಪ್ರಧಾನಿ ಶ್ರೀ ಮೋದಿ ಅಂತರ್ ರಾಷ್ಟ್ರೀಯ ಸೌರಶಕ್ತಿ ಅಲಯನ್ಸ್ ನಿಯಮಾವಳಿ ಒಪ್ಪಂದ ಬಿಡುಗಡೆ ಮಾಡಿದರು. 2016ರಲ್ಲಿ, ಅಮೇರಿಕಾ ಅಧ್ಯಕ್ಷರ ಬರಾಕ್ ಒಬಾಮಾ ಅವರ ಆತಿಥ್ಯದಲ್ಲಿ ನಡೆದ ನ್ಯೂಕ್ಲಿಯರ್ ಸುರಕ್ಷಾ ಸಭೆಯಲ್ಲಿ ಪಾಲ್ಗೊಂಡು ನ್ಯೂಕ್ಲಿಯರ್ ಮತ್ತು ಶಾಂತಿಯ ಸಂದೇಶದ ಅಂಗವಾದರು.

ಭಾರತ ಮತ್ತು ಮೊರೀಷಿಯಸ್ ವಾಣಿಜ್ಯ, ವ್ಯವಹಾರಿಕ ಮತ್ತು ದ್ವಿಪಕ್ಷೀಯ ಒಪ್ಪಂದಗಳ ಸುಧಾರಣೆ ಹಿಂದೂ ಮಹಾಸಾಗರ ಹಾಗೂ ಶಾಂತಮಹಾಸಾಗರಗಳ ಇತರ ರಾಷ್ಟ್ರಗಳ ಜೊತೆ ತನ್ನ ವಿದೇಶಿ ನೀತಿಯ ಸುಧಾರಣೆಗೆ ಸಹಾಯ  ಮಾಡಿದವು.

2015ಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಬೇಟಿ ಮಾಡಿದರು. ಅವರು ಉತ್ತಮ ಸಹಕಾರಕ್ಕಾಗಿ, ಯುರೋಪ್ ಮತ್ತು ಕೆನಡಾ ಭೇಟಿ ಮಾಡಿದರು. ನ್ಯೂಕ್ಲಿಯರ್ ಶಕ್ತಿ ಮತ್ತು ರಕ್ಷಣಾ ಕ್ಷೇತ್ರ ಸೇರಿದಂತೆ 17 ಒಪ್ಪಂದ ದಾಖಲೆಗಳಿಗೆ, ಸಹಿ ಹಾಕಿದರು. ಭಾರತದ ಪ್ರಧಾನ ಮಂತ್ರಿಯೊಬ್ಬರು 42 ವರ್ಷಗಳ ನಂತರ ಕೆನಡಾ ಸಂದರ್ಶಿಸಿದ ಹೆಗ್ಗಳಿಕೆ ಶ್ರೀ ನರೇಂದ್ರ ಮೋದಿ ಅವರದು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾ , ಮಂಗೋಲಿಯಾ , ಜಪಾನ್ ಭೇಟಿ ಬೌದ್ಧರ ರಾಷ್ಟ್ರಗಳಲ್ಲಿ ಭಾರತದ ಇನ್ನೊಂದು ಹೊಸ ಇತಿಹಾಸ ಬೆರೆಯಿತು. ಬೌದ್ಧರ ಕಲೆ ಸಂಸ್ಕೃತಿಯ ನಾಡಲ್ಲಿ ಸಾಂಸ್ಕೃತಿಕವಾಗಿ, ವ್ಯವಹಾರಿಕವಾಗಿ ಹೂಡಿಕೆಯ ಹೊಸೆ ಶಕೆ ಪ್ರಾರಂಭವಾಯಿತು.

 

2015ರಲ್ಲಿ, ಮಧ್ಯ ಏಷ್ಯಾ ಐದು ರಾಷ್ಟ್ರಗಳಾದ ಉಜೆಕಿಸ್ತಾನ್, ಕಜಖಸ್ತಾನ್ , ತುರ್ಕ್ಮೇನಿಸ್ತಾನ್ ಮತ್ತು ಕಿರ್ಜಿಸ್ತಾನ್ ಗಳನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂದರ್ಶಿಸಿದರು. ಈ ಪ್ರದೇಶದ ರಾಷ್ಟ್ರಗಳ ಪರಸ್ಪರ ಸಂಬಂಧ, ಅದರಲ್ಲೂ ಭಾರತದ ಪಾತ್ರ, ಇಂಧನ ಸಾಂಸ್ಕೃತಿಕವಾಗಿ ಆರ್ಥಿಕರೂಪದಲ್ಲಿ ಇನ್ನೂ ಬಲಿಷ್ಠವಾಗಲು ಸಹಕಾರಿಯಾಯಿತು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಯು.ಎ.ಇ. , ಸೌದಿ ಅರೇಬಿಯಾ ಐತಿಹಾಸಿಕ ಬೇಟಿ, ಭಾರತಕ್ಕೆ ಪರಸ್ಪರ ಹಲವು ವ್ಯವಹಾರಿಕ ಒಪ್ಪಂದಗಳಿಗೆ ಪೂರಕವಾಯಿತು. ಯು.ಎ.ಇ. ಯಲ್ಲಿನ ಭಾರತೀಯ ಲೇಬರ್ ಕ್ಯಾಂಪ್ ಬೇಟಿಮಾಡಿ, ಅವರ ಜೊತೆ ತಿಂಡಿ ತಿಂದರು. ಈ ಮೂಲಕ ವಿದೇಶದಲ್ಲಿರುವ ಭಾರತೀಯ ಕಾರ್ಮಿಕ ವರ್ಗಕ್ಕೆ ನಿಮ್ಮ ಜೊತೆ ಭಾರತ ಸರಕಾರವಿದೆ ಎಂಬ ಸಂದೇಶ ತಿಳಿಸಿದರು.

ವಿದೇಶದ ದಿಗ್ಗಜ ರಾಷ್ಟ್ರಗಳ ನಾಯಕರನ್ನು ಭಾರತ ಆಹ್ವಾನಿಸಿ, ಸತ್ಕರಿಸಿತು. ಅವರುಗಳೊಂದಿಗೆ, ವ್ಯವಹಾರಿಕ ಚೌಕಟ್ಟು ಯಶಸ್ಸಾಯಿತು. ಅಮೇರಿಕಾ ಅಧ್ಯಕ್ಷ ಬರಾಕ್ ಓಬಾಮ, ಗಣರಾಜ್ಯೋತ್ಸವ ದಿನಾಚರಣೆಗೆ ಅಧಿಕೃತ ವಿಶೇಷ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜಗತ್ತನ್ನೇ ಬೆರಗುಗೊಳಿಸಿದರು.

ಯುಏಇ, ಸೌದಿ ಅರೇಬಿಯಾ ಮುಂತಾದ ಅರಬ್ ರಾಷ್ಟ್ರ ನಾಯಕರು, ಆಫ್ರಿಕಾ ದೇಶಗಳ, ಫಿಜಿ, ಚೀನಾ, ಅಮೇರಿಕಾ ದೇಶಗಳ ನಾಯಕರು ಭಾರತದತ್ತ ಮುಖಮಾಡಿದರು. ಪ್ರತಿಯೊಂದೂ ವಿದೇಶ ಪ್ರವಾಸದಲ್ಲೂ ಅವರು, ಪ್ರತಿಕ್ಷಣವನ್ನೂ ಮಾತುಕತೆ, ಚರ್ಚೆ, ಸಂವಾದ, ಭೇಟಿಗಳಿಗಾಗಿ ಪೂರ್ತಿಯಾಗಿ ಮೀಸಲಿಡುತ್ತಿದ್ದರು.

ತಾಯಿನಾಡಿನಲ್ಲಿ, ಮೂಲಸೌಕರ್ಯ, ಕೌಶಲ್ಯ ಅಭಿವೃದ್ದಿ, ಇಂಧನ, ಉತ್ಪಾದನೆ, ಕೈಗಾರಿಕೆ , ಹೂಡಿಕೆ ಮುಂತಾದವುಗಳ ಬಗ್ಗೆ ಮಾತ್ರ ಅವರು ಸದಾ ಯೋಚಿಸುತ್ತಿದ್ದರು. ತಾಯನಾಡಿನ ಜನತೆಯ ಮುಖದಲ್ಲಿ ಸಂತಸದ ಬಾಳು ಕಾಣಲು ಅಗತ್ಯದ ಹೆಜ್ಜೆಗಳ ಬಗ್ಗೆ ಸದಾ ಚಿಂತಿಸುತ್ತಿದ್ದರು, ವಿದೇಶದ ಭಾರತೀಯ ಸಮುದಾಯ ಕೂಡಾ ಪ್ರಧಾನ ಮಂತ್ರಿ ಜೊತೆ ತಮ್ಮ ಚಿಂತನೆಯನ್ನು ಹಂಚಿಕೊಳ್ಳವಲ್ಲಿ , ಸಹಮತಸೂಚಿಸುವಲ್ಲಿ ಮತ್ತು ಪಾಲ್ಗೊಳ್ಳುವಲ್ಲಿ ಯಶಸ್ಸು ಕಂಡಿದೆ.