JAM ಯೋಚನೆ, ಹಲವು ನೂತನ ಯೋಜನೆಗಳಿಗೆ ಉಪಕ್ರಮವಾಗಲಿದೆ, ನನಗಿದು , JAM ಅಂದರೆ, ಗರಿಷ್ಠ ಸಾಧನೆ ಮಾಡುವುದಾಗಿದೆ.

ರೂಪಾಯಿ ವೆಚ್ಚದಲ್ಲಿ ಅತ್ಯಧಿಕ ಮೌಲ್ಯವನ್ನು ಪಡೆಯುದಾಗಿದೆ.
ನಮ್ಮ ಬಡವರನ್ನು ಸಬಲೀಕರಣ ಮೂಲಕ ಅತ್ಯಂತ ಸಶಕ್ತರನ್ನಾಗಿಸುವುದು.
ಸಾಮೂಹಿಕವಾಗಿ ಅತ್ಯಧಿಕ ತಂತ್ರಜ್ಞಾನ ಬಳಸುವುದು
- ಶ್ರೀ ನರೇಂದ್ರ ಮೋದಿ

ದೇಶಕ್ಕೆ ಸ್ವಾತಂತ್ರ್ಯ ದೊರಕಿ 67 ವರ್ಷಗಳ ನಂತರ ವೂ ಬಾರತದ ಅತಿ ದೊಡ್ಡ ಸಂಖ್ಯೆಯ ಜನಸಮೂಹ ಇನ್ನೂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಲ್ಲ. ಇದರ ಅರ್ಥ , ಇವರಲ್ಲಿ ಸರಿಯಾದ ಉಳಿತಾಯ ಪದ್ದತಿಗೆ ಅವಕಾಶವಿಲ್ಲ ಇಥವಾ ಇವರಿಗೆ ಸಮರ್ಪಕ ಸಂಸ್ಥೆ/ ಸಾಂಘಿಕ ಸಾಲದ ವ್ಯವಸ್ಥೆ ದೊರಕುತ್ತಿಲ್ಲ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನಾಮಾನ್ಯರ ಮೂಲಭೂತ ಸಮಸ್ಯೆಯನ್ನು ಮನಗಂಡು ಪರಿಹಾರ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ, ಆಗಸ್ಟು 28ರಂದು, ಪ್ರಧಾನ ಮಂತ್ರಿ ಜನ್ ಧನ್ ಯೋಜನ ಪ್ರಾರಂಭಿಸಿದರು. ಬೆರಳೆಣಿಕೆ ತಿಂಗಳಲ್ಲಿ ಇದು ಜನಸಾಮಾನ್ಯರ ಜೀವನ ಪದ್ದತಿಯಲ್ಲಿ ಬಹಳ ಸಕಾರಾತ್ಮಕ ಪರಿಣಾಮ ಬೀರಿತು. ವರ್ಷದೊಳಗೆ ಒಟ್ಟು 19.72 ಕೋಟಿ ಬ್ಯಾಂಕು ಖಾತೆಗಳು ತೆರೆದವು. ಒಟ್ಟು 16.8 ಕೋಟಿ Rupay ಕಾರ್ಡುಗಳು ವಿತರಣೆಯಾದವು. ಈ ಖಾತೆಗಳಲ್ಲಿ ಸುಮಾರು ರೂ 28699.65 ಕೋಟಿ ಮೊತ್ತ ಠವಣಿ ನಿಕ್ಷೇಪವಾಯಿತು. ಕಾರ್ಯಯೋಜನೆಗೆ ದಾಖಲೆಯ 1,25,697 ಬ್ಯಾಂಕು ಮಿತ್ರ ( ಬ್ಯಾಂಕು ವ್ಯವಹಾರಿಕ ಪ್ರತಿನಿಧಿ) ಗಳ ಸೇರ್ಪಡೆಯಾಯಿತು. ಈ ಯೋಜನೆ, ವಾರ ಒಂದರಲ್ಲೇ ಒಟ್ಟು 1,80,96,130 ಬ್ಯಾಂಕು ಖಾತೆಗಳನ್ನು ತೆರೆದು ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸಿತು.

ಕೋಟ್ಯಾಂತರ ಬ್ಯಾಂಕು ಖಾತೆ ತೆರಯುವುದು, ಬಹಳ ದೊಡ್ಡ ಸವಾಲು, ಅದರ ಜೊತೆ ಜನತೆಯಲ್ಲಿ ಈ ಬ್ಯಂಕು ಖಾತೆಗಳನ್ನು ಬಳಸುವ ಹವ್ಯಾಸ ಬೆಳೆಸುವ, ಮನೋಭಾವ, ಸ್ವಭಾವ ಬದಲಾವಣೆ ಮಾಡಿಸುವುದು ಇನ್ನೂ ದೊಡ್ಡ ಸವಾಲಾಗಿತ್ತು. ಶೂನ್ಯ ಕನಿಷ್ಠ ಹಣದ ಖಾತೆಗಳ ಸಂಖ್ಯೆ ಸೆಪ್ಟೆಂಬರ್ 2014ರಲ್ಲಿ 76.8% ಇದ್ದದ್ದು, ಡಿಸೆಂಬರ್ 2015ರಲ್ಲಿ ಇದು ಕೇವಲ 32.4%ರಷ್ಟಕ್ಕೆ ಗಣನೀಯವಾಗಿ ಇಳಿಯಿತು. ಸುಮಾರು 131 ಕೋಟಿ ರೂಪಾಯಿಗಳ ಓವರ್ ಡ್ರಾಫ್ಟ್ ಸೌಲಭ್ಯ ಶೂನ್ಯ ಖಾತೆಯ ಗ್ರಾಹಕರು ಈ ತನಕ ಪಡೆದಿದ್ದಾರೆ.

ಇವುಗಳೆಲ್ಲ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರೇರಣೆ ಮತ್ತು ಪ್ರಚೋದನೆಯಿಂದ ಮತ್ತು ಅವರು ಸಾಮೂಹಿಕವಾಗಿ ವಿಶಾಲ ಜನ ಸಮೂಹ ಅಲ್ಲದೆ ಸಮಗ್ರ ಸರಕಾರ ವ್ಯವಸ್ಥೆ ಸಮರ್ಪಕವಾಗಿ ಸದುಪಯೋಗ ಮೂಲಕ ಬಳಸಿಕೊಂಡದ್ದರಿಂದ ಸಾಧ್ಯವಾಯಿತು. ಈ ಬೃಹತ್ ಕಾರ್ಯಯೋಜನೆ ಉದ್ದೇಶ ಪರಿಪೂರ್ಣತೆಗಾಗಿ ಸರಕಾರ ಮತ್ತು ಸಾರ್ವಜನಿಕರು ಪಾಉದಾರಿಕೆಯಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಯಶಸ್ಸು ಕಂಡಿತು.

ಬ್ಯಾಂಕಿಂಗ್ ವ್ಯವಸ್ಥೆಗೆ ಹಲವು ಮಿಲಿಯ ಭಾರತೀಯರು ಸೇರದ್ದಾರೆಂದರೆ ಅವರು ಭ್ರಷ್ಟಾಚಾರ ನಿಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಅರ್ಥ. ಹಲವಾರು ಸರಕಾರ ಹಣ ವರ್ಗಾವಣೆಗಳು, ಸಾಲ, ಅನುದಾನಗಳು, ಯಾವುದೇ ಸೋರಿಕೆಗಳಿಲ್ಲದೆ ನೇರವಾಗಿ ಖಾತೆಗೆ ವರ್ಗಾವಣೆಯಾಗುತ್ತವೆ, ತಪ್ಪಾದಾಗ ಶಿಕ್ಷೆಗೆ ಸುಲಭ ಸಾಧ್ಯತೆ ಇದರಲ್ಲಿದೆ. ಇತ್ತೇಚಿಗೆ ಪ್ರಾರಂಭವಾದ PAHAL ಯೋಜನಾ ವಿಶ್ವದ ಅತ್ಯಧಿಕ ನೇರ ಹಣ ವರ್ಗಾವಣೆ ವ್ಯವಸ್ಥೆಯಾಗಿ, ಗಿನ್ನಿಸ್ ಪುಸ್ತಕದಲ್ಲಿ ವಿಶ್ವದಾಖಲೆ ಸ್ಥಾನ ಪಡೆಯಿತು ಈ PAHAL ಯೋಜನೆಯಲ್ಲಿ ಅಡುಗೆ ಅನಿಲ ಬಳಕೆದಾರರ ಸರಕಾರದ ರಿಯಾಯಿತಿ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕು ಖಾತೆಗೆ ಸಂದಾಯವಾಗುತ್ತದೆ. ಈ ಯೋಜನೆಯಲ್ಲಿ 14.62 ಕೋಟಿ ಜನತೆ ನಗದು ರಿಯಾಯಿತಿ ನೇರವಾಗಿ ತಮ್ಮ ಖಾತೆಗಳ ಮೂಲಕ ಪಡೆದಿದ್ದಾರೆ. ಈ ವ್ಯವಸ್ಥೆ ಮೂಲಕ ಸುಮಾರು 3.34 ಕೋಟಿ ನಕಲಿ ಮತ್ತು ಸ್ಥಗಿತ ಅಡುಗೆ ಅನಿಲ ಖಾತೆಗಳ ಮಾಹಿತಿ ದೊರಕಿತು, ಅಲ್ಲದೆ ಸಾವಿರಾರು ಕೋಟಿ ರೂಪಾಯಿಗಳ ಉಳಿತಾಯಕ್ಕೆ ಸಹಾಯವಾಯಿತು. ಇಂದು ಸರಕಾರ ಸುಮಾರು 35-40 ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಹಣವನ್ನು ಖಾತೆಯಿಂದ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಮೂಲಕ ಹಣ ಸೋರಿಕೆ ಉಳಿಸುತ್ತಿದೆ. 2015ರ ವರ್ಷವೊಂದರಲ್ಲಿ ರೂ 40,000 ಕೋಟಿ ಯಷ್ಟು ನೇರ ವರ್ಗಾವಣೆ ನಡೆದಿದೆ.

ಒಮ್ಮೆ ಜನಸಾಮಾನ್ಯರಿಗೆ, ಬ್ಯಾಂಕಿಂಗ್ ವ್ಯವಸ್ಥೆಯ ಮೂಲ ಸೌಕರ್ಯ ದೊರಕಿದಾಗ, ಎನ್.ಡಿ.ಎ ಸರಕಾರ ಪ್ರಜೆಗಳ ವಿಮೆ ಮತ್ತು ನಿವೃತ್ತಿವೇತನ ವನ್ನೂ ಕೂಡಾ ಖಾತೆಗಳ ಮೂಲಕ ಪೂರೈಕೆ ಮಾಡಲು ಯೋಜನೆ ಪ್ರರಂಭಿಸಿತು. ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ, ವಾರ್ಷಿಕ ಕೇವಲ ರೂ 12 ಮಾತ್ರ ಪಾವತಿಸಿ ರೂ 2 ಲಕ್ಷ ಅಪಘಾತ ವಿಮೆ ಪಡೆಯಬಹುದು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ, ರೂ 330 ವಾರ್ಷಿಕ ಪಾವತಿಯಲ್ಲಿ ಜೀವ ವಿಮೆ ಲಭ್ಯ. ಅಟಲ್ ಪೆನ್ಶನ್ ಯೋಜನಾ ನಿಮ್ಮ ವಾರ್ಷಿಕ ಹೂಡಿಕೆ ಆದಾರದಲ್ಲಿ, ಗರಿಷ್ಠ ರೂ 5000 ತನಕದ ನಿವೃತ್ತಿ ವೇತನ ನೀಡುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ, 9.2 ಕೋಟಿಗೂ ಅಧಿಕ ಮಂದಿ ಸದುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ, 3 ಕೋಟಿ ಜನತೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಇದರ ಲಾಭ ಪಡೆದುಕೊಂಡಿದ್ದಾರೆ. ಸರಿ ಸುಮಾರು, 15.85 ಲಕ್ಷ ಜನತೆ ಅಟಲ್ ಪೆನ್ಶನ್ ಯೋಜನಾ ದಲ್ಲಿ ಸೇರಿದ್ದಾರೆ.
.

Explore More
PM Modi's reply to Motion of thanks to President’s Address in Lok Sabha

Popular Speeches

PM Modi's reply to Motion of thanks to President’s Address in Lok Sabha
Modi govt's next transformative idea, 80mn connections under Ujjwala in 100 days

Media Coverage

Modi govt's next transformative idea, 80mn connections under Ujjwala in 100 days
NM on the go

Nm on the go

Always be the first to hear from the PM. Get the App Now!
...
Prime Minister also visited the Shaheed Sthal
March 15, 2019

Prime Minister also visited the Shaheed Sthal