ನರೇಂದ್ರ ಮೋದಿ ಅವರು ಕೆಲಸದ ವಿಷಯದಲ್ಲಿ ಕಠಿಣರು ಹಾಗೂ ತಮ್ಮ ತಂಡವು ಸಂಪೂರ್ಣ ಸಾಮಥ್ರ್ಯವನ್ನು ಮುಟ್ಟುವಂತೆ ಮುಂದೊತ್ತುತ್ತಾರೆ ಹಾಗೂ ಗುರಿಯನ್ನು ಮೀರುವಂತೆ ಉತ್ತೇಜಿಸುತ್ತಾರೆ ಎಂಬ ಅಭಿಪ್ರಾಯವಿದೆ. ತಂಡ ವಿಫಲವಾದಾಗ ಅವರು ಸಿಟ್ಟಿಗೇಳುವುದಿಲ್ಲವೇ? ಮೋದಿ ಒರಟು ಪ್ರವೃತ್ತಿಯವರೇ?

2012ರ ಆಗಸ್ಟ್ 31ರಲ್ಲಿ ನಡೆದ ಘಟನೆಯೊಂದು ಇಂಥ ಸನ್ನಿವೇಶದಲ್ಲಿ ಮೋದಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಬಗ್ಗೆ ಒಳನೋಟಗಳನ್ನು ಕೊಡು ತ್ತದೆ. ಅದು ದೇಶಿ ರಾಜಕೀಯ ಮುಖಂಡರೊಬ್ಬರ ಮೊದಲ ಗೂಗಲ್ ಹ್ಯಾಂಗ್ಔಟ್ ಸಂದರ್ಭ. ಇದರಲ್ಲಿ ಜಾಗತಿಕ ಆಸಕ್ತಿ ಎಷ್ಟು ಇದ್ದಿತೆಂದರೆ, ಕಾರ್ಯಕ್ರಮ ಪ್ರಸರಣಗೊಳ್ಳಬೇಕಾದ ಸಮಯದಲ್ಲೇ ಗೂಗಲ್ನ ಸರ್ವರ್ಗಳು ಕುಸಿದವು ಮತ್ತು ಯು ಟ್ಯೂಬ್ನಲ್ಲಿ ನೇರ ಪ್ರಸಾರ 45 ನಿಮಿಷಗಳ ನಂತರ ಆರಂಭ ವಾಯಿತು. ಪ್ರಸರಣ ಮುಗಿದ ಬಳಿಕ ಗೂಗಲ್ ತಂಡವನ್ನು ಪ್ರಧಾನಿಯವರ ಕೋಣೆಗೆ ಸೌಜನ್ಯದ ಮಾತುಕತೆಗೆಂದು ಕರೆಯಲಾಯಿತು. ಕೆಲಸ ಪರಿಪೂರ್ಣವಾಗಿರಬೇಕು ಎಂಬ ಮೋದಿ ಅವರ ನಿಲುವಿನ ಬಗ್ಗೆ ಅರಿವು ಹಾಗೂ ಇಂಥ ಸನ್ನಿವೇಶದಲ್ಲಿ ರಾಜಕಾರಣಿಗಳು ಹೇಗೆ ವತರ್ಿಸುತ್ತಾರೆ ಎಂದು ಗೊತ್ತಿದ್ದ ಗೂಗಲ್ ತಂಡ ಬೈಗುಳ ಕೇಳಲು ಸಿದ್ಧವಾಗಿಯೇ ಮೋದಿ ಅವರ ಕೋಣೆಯನ್ನು ಪ್ರವೇಶಿಸಿತು. ಆಶ್ಚರ್ಯ ಹುಟ್ಟಿಸುವಂತೆ ಕಂಡಿದ್ದು, ನಸು ನಗುತ್ತಿದ್ದ ಮೋದಿ. ತಂಡದ ಮುಂದಿನ ಯೋಜನೆಗಳೇನು ಹಾಗೂ ಮುಂದೆ ಇಂಥ ಘಟನೆ ನಡೆಯದಂತೆ ಯಾವ ರೀತಿ ತಾಂತ್ರಿಕ ಕ್ರಮ ತೆಗೆದುಕೊಳ್ಳಬೇಕು ಎಂದಷ್ಟೆ ಚಚರ್ೆ ನಡೆಯಿತು.

ಇದು ಇಂಥ ಒಂದು ಪ್ರಕರಣವಷ್ಟೆ. ಎಂಥ ಕಠಿಣ ಸನ್ನಿವೇಶದಲ್ಲೂ ತಾಳ್ಮೆ ಕಳೆದುಕೊಳ್ಳದ ಅವರ ಪ್ರವೃತ್ತಿಯನ್ನು ಅವರ ಜತೆ ಒಡನಾಡಿದವರು ದೃಢೀಕರಿ ಸುತ್ತಾರೆ. ವೈಯಕ್ತಿಕವಾಗಿ ಅವರು ಒರಟು ಮನಸ್ಥಿತಿಯವರಲ್ಲ. ಒಂದು ವೇಳೆ ವ್ಯಕ್ತಿ ಇಲ್ಲವೇ ತಂಡಗಳು ತಮ್ಮ ಕೆಲಸವನ್ನು ಯಶಸ್ವಿಯಾಗಿ ಪೂರೈಸಲು ವಿಫಲವಾದಲ್ಲಿ, ಈ ಅನುಭವದಿಂದ ಕಲಿತುಕೊಳ್ಳಿ ಹಾಗೂ ಮುಂದಿನ ಸಲ ಇಂಥದ್ದು ಆಗದಂತೆ ವಿಸ್ತೃತ ಯೋಜನೆ ಸಿದ್ಧಗೊಳಿಸಿ ಎಂದು ಅವರು ಹೇಳು ತ್ತಾರೆ. ಎಲ್ಲಿಯವರೆಗೆ ಕಲಿಯುವ ಮನಸ್ಥಿತಿ ಇರುವುದೋ ಅಲ್ಲಿಯವರೆಗೆ ಮೋದಿ ಅವರ ಬೆಂಬಲ ನಿಮಗೆ ಇರಲಿದೆ.