There will be detailed discussion on the Budget and I am sure the level of debate and discussion will be of good quality: PM
Matters that will benefit the poor will be discussed during this session: PM Modi

ಗೆಳೆಯರೇ ಸ್ವಾಗತ,

ಸಂಸತ್ತಿನ ಬಜೆಟ್ ಅಧಿವೇಶನದ ಅವಧಿಯಲ್ಲಿ ಬಿಡುವಿನ ಬಳಿಕ ಮತ್ತೆ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಬಜೆಟ್ ಬಗ್ಗೆ ಸವಿಸ್ತಾರವಾಗಿ ಚರ್ಚೆ ಆಗಬೇಕು ಮತ್ತು ಈ ಚರ್ಚೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ ಎಂದು ಖಚಿತವಾಗಿ ನನಗನಿಸುತ್ತದೆ. ಇದು ಬಡವರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಗಮನ ಹರಿಸಲಿದೆ. ನಾವು ಜಿ.ಎಸ್.ಟಿ.ಯಲ್ಲಿ ಮಹತ್ವದ ತಿರುವು ಕಾಣುತ್ತೇವೆ ಎಂಬ ವಿಶ್ವಾಸ ನನಗಿದೆ. ನಮ್ಮ ಈ ಆಶಾವಾದಕ್ಕೆ ಒಂದು ಕಾರಣ ಎಂದರೆ, ಎಲ್ಲ ರಾಜ್ಯಗಳೂ ಧನಾತ್ಮಕವಾಗಿ ಇದಕ್ಕೆ ಸಹಕಾರ ನೀಡಿವೆ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಸ್ಪಂದನೆಯಲ್ಲಿ ಅತ್ಯಂತ ಧನಾತ್ಮಕವಾಗಿವೆ ಮತ್ತು ಸಹಕಾರಾತ್ಮಕವಾಗಿವೆ. ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಈ ವಿಚಾರದ ಬಗ್ಗೆ ಸವಿಸ್ತಾರವಾಗಿ ಚರ್ಚೆ ಆದ ಬಳಿಕ ಚರ್ಚೆಯ ನಂತರ ಒಮ್ಮತ ಮೂಡಿದ ತರುವಾಯವಷ್ಟೇ ನಾವು ಈ ದಿಕ್ಕಿನಲ್ಲಿ ಮುಂದೆ ಸಾಗಲು ಇಡಲು ಸಾಧ್ಯ. ಈ ಅಧಿವೇಶದಲ್ಲಿ ಜಿ.ಎಸ್.ಟಿ. ಈ ಅಧಿವೇಶನದಲ್ಲೇ ಅನುಷ್ಠಾನಗೊಳಿಸುವುದನ್ನು ಖಾತ್ರಿ ಪಡಿಸಲು ಎಲ್ಲ ಪ್ರಯ್ನಗಳೂ ನಡೆದಿವೆ. ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಅತೀವ ಧನ್ಯವಾದಗಳನ್ನು ಅರ್ಪಿಸುತ್ತೇನೆ.