ಭಾರತ ಅಪಾರವಾದ ಸುಪ್ತ ಉದ್ಯಮಶೀಲತೆಯನ್ನು ಹೊಂದಿದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಇದನ್ನು ಬಳಸಿಕೊಂಡರೆ ನಾವು ಉದ್ಯೋಗ ಕೊಡುವ ದೇಶವಾಗುತ್ತೇವೆ, ಉದ್ಯೋಗ ಬೇಡುವ ದೇಶವಲ್ಲ.
-ನರೇಂದ್ರ ಮೋದಿ
ಎನ್ಡಿಎ ಸರ್ಕಾರವು ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ. ದೇಶದಲ್ಲಿ ಉದ್ಯಮವನ್ನು ಪ್ರೋತ್ಸಾಹಿಸಲು ಆರಂಭಿಸಿದ "ಮೇಕ್ ಇನ್ ಇಂಡಿಯಾ' ಉಪಕ್ರಮವು 4 ಆಧಾರ ಸ್ಥಂಭಗಳನ್ನು ಆಧರಿಸಿದ್ದು, ಉತ್ಪಾದನೆ ಮಾತ್ರವಲ್ಲದೆ ಬೇರೆ ವಿಭಾಗಗಳನ್ನೂ ಪ್ರೋತ್ಸಾಹಿಸುವ ಗುರಿ ಹೊಂದಿದೆ.
ಹೊಸ ಪ್ರಕ್ರಿಯೆಗಳು: "ಮೇಕ್ ಇನ್ ಇಂಡಿಯಾ'ದಲ್ಲಿ "ನಿಶ್ಚಿಂತೆಯಿಂದ ವಹಿವಾಟು ನಡೆಸಲು ಅನುವು ಮಾಡಿಕೊಡುವುದು' ಉದ್ಯಮಶೀಲತೆಯನ್ನು ಉತ್ತೇಜಿಸಲು ಬೇಕಾದ ಅತಿ ಪ್ರಮುಖವಾದ ಏಕೈಕ ಅಂಶ ಎಂದು ಪರಿಗಣಿಸಲಾಗಿದೆ.
ನೂತನ ಮೂಲಸೌಲಭ್ಯ :ಉದ್ಯಮಗಳು ಬೆಳೆಯಲು ಆಧುನಿಕ ಹಾಗೂ ಸೂಕ್ತ ಮೂಲಸೌಲಭ್ಯಗಳು ಬಹು ಮುಖ್ಯವಾದ ಅಗತ್ಯಗಳಾಗಿವೆ. ಅತ್ಯುತ್ತಮ ತಂತ್ರಜ್ಞಾನ, ತೀವ್ರ ವೇಗದ ಸಂವಹನ ಸೌಲಭ್ಯ ಹಾಗೂ ಸಾಗಣೆ ವ್ಯವಸ್ಥೆಯಿರುವ ಸ್ಮಾರ್ಟ್ ನಗರಗಳು ಹಾಗೂ ಉದ್ಯಮ ಕಾರಿಡಾರ್ಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಉದ್ದೇಶಿಸಿದೆ.
ನೂತನ ವಲಯಗಳು:"ಮೇಕ್ ಇನ್ ಇಂಡಿಯಾ'ದಲ್ಲಿ ಉತ್ಪಾದನೆ, ಮೂಲಸೌಲಭ್ಯ ಮತ್ತು ಸೇವಾ ಕ್ಷೇತ್ರದ 25 ವಲಯಗಳನ್ನು ಗುರುತಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರೊಂದಿಗೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಮನಸ್ಥಿತಿ ಬದಲಿಸುವಿಕೆ:ಸರ್ಕಾರ ನಿಯಂತ್ರಕನಂತೆ ಕಾರ್ಯ ನಿರ್ವಹಿಸುವುದು ಉದ್ಯಮಕ್ಕೆ ಅಭ್ಯಾಸವಾಗಿ ಬಿಟ್ಟಿದೆ."ಮೇಕ್ ಇನ್ ಇಂಡಿಯಾ' ಈ ಮನಸ್ಥಿತಿಯನ್ನು ಬದಲಿಸಲು ಉದ್ದೇ ಶಿಸಿದ್ದು, ಉದ್ಯಮದೊಡನೆ ಸರ್ಕಾರ ವ್ಯವಹರಿಸುವ ರೀತಿಯಲ್ಲಿ ಮೂಲಭೂತ ಪರಿವರ್ತನೆ ತರಲು ನಿರ್ಧರಿಸಿದೆ. ಸರ್ಕಾರದ ಮಧ್ಯವರ್ತಿ ಯಂತೆ ಕೆಲಸ ಮಾಡಲಿದೆಯೇ ಹೊರತು ನಿಯಂತ್ರಕನಂತೆ ಅಲ್ಲ.
ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರ 3 ಆಯಾಮದ ಕಾರ್ಯನೀತಿಯನ್ನು ರೂಪಿಸಿದೆ: ಈ 3 "ಸಿ' ಮಾದರಿಯು "ಅನುಮತಿ, ಬಂಡವಾಳ ಮತ್ತು ಒಪ್ಪಂದ ಜಾರಿ'ಯನ್ನು ಆಧರಿಸಿದೆ.
ಅನುಮತಿ:
ವಿಶ್ವ ಬ್ಯಾಂಕ್ನ ""ನಿಶ್ಚಿಂತೆಯಿಂದ ವಹಿವಾಟು ನಡೆಸಲು ಅನುವು' ಪಟ್ಟಿಯಲ್ಲಿ ದೇಶ 130ನೇ ಸ್ಥಾನ ಪಡೆದುಕೊಂಡಿದ್ದು, ತೀವ್ರ ವೇಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೊಸ ಉದ್ಯಮವೊಂದನ್ನು ಸ್ಥಾಪಿಸುವುದು ಎಂದಿನಿಂತ ಇಂದು ಸುಲಭವಾಗಿದೆ. ಅನಗತ್ಯವಾದ ಅಡೆತಡೆಗಳನ್ನು ತೆಗೆದು ಹಾಕಿದ್ದು, ಆನ್ಲೈನ್ನಲ್ಲಿ ಹಲವು ಅನುಮತಿಗಳನ್ನು ಪಡೆಯಬಹುದಾಗಿದೆ.
ಉದ್ಯೋಗ ಪರವಾನಗಿ(ಐಎಲ್) ಹಾಗೂ ಔದ್ಯೋಗಿಕ ಉದ್ಯಮ ಒಪ್ಪಂದ(ಐಇಎಂ)ಕ್ಕೆ ಅರ್ಜಿಯನ್ನು ಆನ್ಲೈನ್ನಲ್ಲೇ ಸಲ್ಲಿಸಬಹುದಾಗಿದ್ದು,ಈ ವ್ಯವಸ್ಥೆ ದಿನದ 24 ಗಂಟೆಯೂ ಲಭ್ಯವಿರಲಿದೆ. ಅಂದಾಜು 20 ಸೇವೆಗಳನ್ನು ಒಂದಾಗಿಸಿದ್ದು, ಸರ್ಕಾರದ ನಾನಾ ಏಜೆನ್ಸಿಗಳಿಂದ ಏಕ ಗವಾಕ್ಷಿ ಮೂಲಕ ಅನುಮತಿ ಪಡೆಯಬಹುದಾಗಿದೆ.
ವಿಶ್ವ ಬ್ಯಾಂಕ್ ಮತ್ತು ಕೆಪಿಎಂಜಿ ನೆರವಿನಿಂದ ಭಾರತ ಸರ್ಕಾರವು ರಾಜ್ಯ ಸರ್ಕಾರಗಳು ವ್ಯಾಪಾರ ಕ್ಷೇತ್ರದಲ್ಲಿ ಮಾಡಿರುವ ಸುಧಾರಣೆಗಳ ಮೌಲ್ಯಮಾಪನ ಮಾಡಿದ್ದು, ರ್ಯಾಂಕ್ ನೀಡಿದೆ. ಇದರಿಂದ ಬಂಡವಾಳ ಹೂಡಿಕೆ ಎಲ್ಲಿ ಮಾಡಬಹುದು ಎನ್ನುವುದನ್ನು ನಿರ್ಧರಿಸಲು ಹಾಗೂ ರಾಜ್ಯಗಳು ಪರಸ್ಪರ ನೋಡಿ ಕಲಿಯಬಹುದಾಗಿದೆ.ಜತೆಗೆ, ಯಶಸ್ಸಿನ ಪಾಠಗಳನ್ನು ಅನುಸರಿಸಬಹುದಾಗಿದೆ. ದೇಶ ವ್ಯಾಪ್ತಿಯಲ್ಲಿ ನಿಯಂತ್ರಣ ವ್ಯವಸ್ಥೆಯನ್ನು ಸುಧಾರಿಸಿ, ಸುಧಾರಣೆಯನ್ನು ತೀವ್ರಗೊಳಿಸಬಹುದಾಗಿದೆ.
ಇದಲ್ಲದೆ, ದೇಶದಲ್ಲಿ ನೇರ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರ ಹಲವು ಕ್ಷೇತ್ರಗಳಲ್ಲಿ ಎಫ್ಡಿಐ ನಿಯಮಗಳನ್ನು ಸಡಿಲಗೊಳಿಸಿದೆ.
ಬಂಡವಾಳ:
ದೇಶದಲ್ಲಿರುವ 58 ದಶ ಲಕ್ಷ ಕಾಪರ್ೊರೇಟ್ ಅಲ್ಲದ ಉದ್ಯಮಗಳು 128 ದಶ ಲಕ್ಷ ಮಂದಿಗೆ ಉದ್ಯೋಗ ನೀಡಿವೆ. ಇದರಲ್ಲಿ ಶೇ 40 ರಷ್ಟು ಉದ್ಯಮ ಗಳು ಹಿಂದುಳಿದ ವರ್ಗ ಹಾಗೂ ಶೇ 15ರಷ್ಟು ಪರಿಶಿಷ್ಟ ಜಾತಿ-ವರ್ಗದ ಮಾಲೀಕತ್ವದವು. ಈ ಉದ್ಯಮಗಳಿಗೆ ನೀಡಲಾದ ಬ್ಯಾಂಕ್ ಸಾಲ ಕನಿಷ್ಠ ಪ್ರಮಾಣ ದ್ದಾಗಿದೆ. ಬಹುತೇಕವು ಎಂದಿಗೂ ಬ್ಯಾಂಕ್ ಸಾಲ ಪಡೆಯುವ ಸಾಧ್ಯತೆಯೇ ಇಲ್ಲ ಎನ್ನಬಹುದು. ಇದರರ್ಥ-ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮ ಗಳಿಗೆ ಕನಿಷ್ಠ ಪ್ರಮಾಣದಲ್ಲಿ ಸಾಲ ಸಿಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಿಸಲು, ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಹಾಗೂ ಮುದ್ರಾ ಬ್ಯಾಂಕ್ನ್ನು ಸ್ಥಾಪಿಸಿದೆ.
ಲೇವಾದೇವಿದಾರರಿಗೆ ಗರಿಷ್ಠ ಬಡ್ಡಿ ನೀಡಿ ಸಾಲ ಪಡೆಯುವ ಸಣ್ಣ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು ಯೋಜನೆ ಹಾಗೂ ಬ್ಯಾಂಕ್ನ ಉದ್ದೇಶ. ಪ್ರಾರಂಭವಾದ ಬಳಿಕ ಕಡಿಮೆ ಅವಧಿಯಲ್ಲೇ 1.18 ಕೋಟಿ ಜನರಿಗೆ 65,000 ಕೋಟಿ ರೂ. ಸಾಲ ನೀಡಲಾಗಿದೆ. 50,000 ರೂ.ಗಿಂತ ಕಡಿಮೆ ಸಾಲ ಪಡೆಯುವವರ ಸಂಖ್ಯೆ ಏಪ್ರಿಲ್-ಸೆಪ್ಟೆಂಬರ್ 2015ರಲ್ಲಿ ಶೇ 555 ರಷ್ಟು ಹೆಚ್ಚಳ ಗೊಂಡಿದೆ.
ಒಪ್ಪಂದ ಜಾರಿ:
ಒಪ್ಪಂದ ಜಾರಿಯನ್ನು ಸುಲಭಗೊಳಿಸಲು ವಿವಾದ ಬಗೆಹರಿಸುವಿಕೆ ಕಾನೂನನ್ನು ಬದಲಿಸಿದ್ದು, ವಿವಾದವನ್ನು ಶೀಘ್ರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಬಗೆ ಹರಿಸಲಾಗುತ್ತಿದೆ. ಪ್ರಕರಣಗಳನ್ನು ಬಗೆಹರಿಸಲು ಕಾಲ ಮಿತಿಯನ್ನು ವಿಧಿಸಲಾಗಿದ್ದು, ನ್ಯಾಯಾಧಿಕರಣಕ್ಕೆ ನಿರ್ಧಾರಗಳನ್ನು ಜಾರಿಗೊಳಿಸುವ ಅಧಿಕಾರವನ್ನು ನೀಡಲಾಗಿದೆ. ಸರ್ಕಾರ ನೂತನ ದಿವಾಳಿ ಕಾನೂನನ್ನು ರೂಪಿಸಿದ್ದು, ವ್ಯವಹಾರವನ್ನು ಸರಳ ಗೊಳಿಸಿದೆ.