ಮತ ಎಣಿಕೆ ದಿನ ಒಬ್ಬ ರಾಜಕೀಯ ನಾಯಕ(ರಾಜಕಾರಣಿ)ನ ಬದುಕಿನಲ್ಲಿ ಅತ್ಯಂತ ಮಹತ್ವದ ದಿನ. ಅಂದು ತೀರ್ಪಿನ ದಿನ. ಅದು ಆ ನಾಯಕನ ಮತ್ತು ಆ ನಿರ್ದಿಷ್ಟ ಪಕ್ಷದ ಐದು ವರ್ಷದ ಗೊತ್ತು-ಗುರಿಯನ್ನು ನಿರ್ಧರಿಸುವ ದಿನ.
ಸಾಮಾನ್ಯವಾಗಿ ಅಂದು ಯಾವುದೇ ನಾಯಕ ಸಿಕ್ಕಾಪಟ್ಟೆ ಒತ್ತಡದಲ್ಲಿರುತ್ತಾನೆ. ಜತೆಗೆ ನಿರಂತರ ಚಟುವಟಿಕೆಯಲ್ಲಿ ತೊಡಗಿರುತ್ತಾನೆ. ಟಿವಿ ಸ್ಕೀನ್ ಗೆ ಅಂಟಿಕೊಂಡು, ಕಾರ್ಯಕರ್ತರು ತರುವ ಇತ್ತೀಚಿನ ಫಲಿತಾಂಶದ ಟ್ರೆಂಡ್ ನ ಸುದ್ದಿಗೇ ಕಾಯುತ್ತಿರುತ್ತಾರೆ. ಒಂದೆಡೆ ಸಮಾಧಾನ-ಆತಂಕ ಎರಡೂ ಮನೆ ಮಾಡಿರುತ್ತದೆ.
ಆದರೆ ಇದಕ್ಕೆ ಶ್ರೀ ನರೇಂದ್ರ ಮೋದಿ ಸಂಪೂರ್ಣ ಆಪವಾದ. ಅವರು ಅಂದು ಟಿವಿ ಮುಂದೆ ಕುಳಿತಿದ್ದರೆ ? ಇಲ್ಲ. ಅಥವಾ ಕಾರ್ಯಕರ್ತರು ಮತ್ತು ಆಪ್ತರು ತುಂಬಿಕೊಂಡು ಕೋಣೆಯಲ್ಲಿ ಕುಳಿತು ಟ್ರೆಂಡ್ ಕುರಿತು ಚರ್ಚಿಸುತ್ತಿದ್ದರೇ? ಅದೂ ಇಲ್ಲ.
ಹಾಗಾದರೆ ಏನು ಮಾಡುತ್ತಿದ್ದರು?
ಅಂದೂ ಸಹ ಎಂದಿನಂತೆ ಮತ್ತೊಂದು ದಿನವಷ್ಟೇ. ಅವರ ನಿತ್ಯದ ದಿನಚರಿಗೆ ಆ ಬೆಳವಣಿಗೆ ಏನೂ ಬದಲಾವಣೆ ಮಾಡಲಿಲ್ಲ.
೨೦೧೪ ರ ಮೇ ೧೪ ರಂದು, ಇಡೀ ವಿಶ್ವವೇ ಭಾರತದ ಚುನಾವಣೆಯ ಫಲಿತಾಂಶವನ್ನು ಎದುರು ನೋಡುತ್ತಾ ಕುಳಿತಿದ್ದರೆ, ಗೆಲ್ಲುವ ಪಕ್ಷದ ಪ್ರಧಾನಿ ಅಭ್ಯರ್ಥಿ ಹಾಗೂ ಇಡೀ ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಿದ್ದ ಶ್ರೀ ಮೋದಿಯವರು ತಮ್ಮ ನಿತ್ಯದ ಚಟುವಟಿಕೆಯಲ್ಲಿ ಮಗ್ನರಾಗಿದ್ದರು. ಶ್ರೀ ರಾಜನಾಥ ಸಿಂಗ್ ಅವರಿಂದ ಬಂದ ಮೊದಲ ಕರೆಗೆ ಉತ್ತರಿಸಿ, ತಮ್ಮ ತಾಯಿ ಮತ್ತು ಶ್ರೀ ಕೇಶುಭಾಯಿ ಪಟೇಲ್ ಅವರನ್ನು ಭೇಟಿ ಮಾಡಿ ಅರ್ಶೀವಾದ ಪಡೆಯಲು ಹೊರಟರು.
ಇದೇ ರೀತಿ ೨೦೦೨, ೨೦೦೭ ಹಾಗೂ ೨೦೧೨ ರಲ್ಲೂ ಇದ್ದರು.
ಯಾರು ಉನ್ನತ ಹುದ್ದೆ ಮತ್ತು ಅಧಿಕಾರವನ್ನೇ ತಮ್ಮ ಬದುಕಿನ ಪರಮ ಗುರಿಯೆಂದು ಭಾವಿಸಿರುವುದಿಲ್ಲವೋ, ಅವರಿಗೆ ಆ ಚುನಾವಣೆಯ ಫಲಿತಾಂಶದ ದಿನವೂ ಮತ್ತೊಂದು ದಿನವಷ್ಟೇ. ಸಾರ್ವಜನಿಕರು ಯಾವ ರೀತಿಯಲ್ಲಿ ಅನುಗ್ರಹಿಸಿದ್ದರೂ ಅದನ್ನು ಸೌಜನ್ಯದಿಂದಲೇ ಸ್ವೀಕರಿಸುವ ಮನಸ್ಥಿತಿ ಆತನದ್ದು.