ಮೋದಿ ಕುರ್ತಾ ಅವರದ ಸರಳತೆಯಿಂದಲೇ ಜನಪ್ರಿಯತೆಯನ್ನು ಗಳಿಸಿದೆ. ಜೊತೆಗೆ ಜನರ ಹೊಸ ಶ್ಟೈಲ್ ಆಗಿ ಕೂಡಾ ಮಾರ್ಪಟ್ಟಿದೆ.

 

ಮೋದಿ ಕುರ್ತಾದ  ಹುಟ್ಟಿನ ಕಥೆಯನ್ನು ಖುದ್ದು ಪ್ರಧಾನಮಂತ್ರಿಯವರೇ ಬಿಚ್ಚಿಟ್ಟಿದ್ದಾರೆ. “ ಆರ್ ಎಸ್ ಎಸ್ ಹಾಗೂ ಬಿಜೆಪಿ ಜೊತೆಗಿನ ನನ್ನ ಕೆಲಸ ದಲ್ಲಿ ಬರೀ ಸುತ್ತಾಟಗಳಿರಲಿಲ್ಲ. ಬದಲಾಗಿ ಅದರಲ್ಲಿ ಅನಿಶ್ಚಿತ ಹಾಗೂಒತ್ತಡದ ವೇಳಾಪಟ್ಟಿ ಇತ್ತು. ಇದು ತಾನೇ ಬಟ್ಟೆ ಒಗೆಯಬಲ್ಲ  ವ್ಯಕ್ತಿಗೆ ಕಷ್ಟವಾಗುವುದಂತು ಖಂಡಿತ .  ಉದ್ದ ಕೈಯುಳ್ಳ ಕುರ್ತಾವನ್ನು ಒಗೆಯುವುದಕ್ಕೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು. ಜೊತೆಗೆ ಕಡಿಮೆ ಸಮಯದಲ್ಲಿ ಒಗೆಯುವುದು ಕಠಿಣವಾಗಿತ್ತು .ಹೀಗಾಗಿ ನಾನು ಅರ್ಧ ತೋಳಿನ ಕುರ್ತಾಗಳನ್ನು ಬಳಸಲು ನಿರ್ಧರಿಸಿದೆ”. ಹೀಗೆ ಹುಟ್ಟಿದ್ದು ಮೋದಿ ಕುರ್ತಾ.

 

ಇತ್ತೀಚಿನ ಕೆಲ ವರ್ಷಗಳಿಂದ ಮೋದಿಯವರ ಈ ಸರಳ ಕುರ್ತಾಗಳು ವಿಶ್ವವ್ಯಾಪಿ ಜನಪ್ರಿಯತೆಯನ್ನುಗಳಿಸುತ್ತಿದೆ. ಇನ್ನು ಇದರ ಜೊತೆಯಲ್ಲಿ ಮೋದಿ ಮುಖವಾಡಗಳು, ಟೋಪಿಗಳು, ಟಿ-ಶರ್ಟ್,ಬ್ಯಾಡ್ಜ್  ಜೊತೆಗೆ ಚಾಕೊಲೇಟ್ ಗಳು ಕೂಡಾ ಮಾರುಕಟ್ಟೆಯಲ್ಲಿ  ಕಾಣಿಸಿಕೊಂಡಿವೆ. ಆದ್ರೆ ಮೋದಿ ಕುರ್ತಾದಷ್ಟು ಜನಪ್ರಿಯತೆಯನ್ನು ಗಳಿಸಿಲ್ಲ. ಕುರ್ತಾಗಳು ಅದರ ಬಣ್ಣ, ಸೊಗಸು , ಹಾಗು ಸರಳತೆಯಿಂದ ಜನ ಮೆಚ್ಚುಗೆ ಗಳಿಸಿದೆ.