ವಿಯಟ್ನಾಂ ರಕ್ಷಣಾ ಸಚಿವ ಜನರಲ್ ಎನ್ಜಿಒ ಕ್ಸುವಾನ್ ಲಿಚ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
2016ರ ಸೆಪ್ಟೆಂಬರ್ ನಲ್ಲಿ ತಾವು ವಿಯೆಟ್ನಾಂಗೆ ಭೇಟಿ ನೀಡಿದ್ದನ್ನು, ಆ ಸಂದರ್ಭದಲ್ಲಿ ದ್ವಿಪಕ್ಷೀಯ ಬಾಂಧವ್ಯ ಸಮಗ್ರ ಕಾರ್ಯತಂತ್ರಾತ್ಮಕ ಪಾಲುದಾರಿಕೆಯಾಗಿ ಮೇಲ್ದರ್ಜೆಗೇರಿದ್ದನ್ನು ಪ್ರಧಾನಮಂತ್ರಿಯವರು ಹೆಮ್ಮೆಯಿಂದ ಸ್ಮರಿಸಿದರು. ಭಾರತದ ಪೂರ್ವದತ್ತ ಕ್ರಮ ನೀತಿಯಲ್ಲಿ ವಿಯಟ್ನಾಂ ಪ್ರಧಾನ ಆಧಾರಸ್ತಂಭವಾಗಿದೆ ಎಂದು ಅವರು ಹೇಳಿದರು.
ಜನರಲ್ ಎನ್ಜಿಒ ಕ್ಸುವಾನ್ ಲಿಚ್ ಅವರು ದ್ವಿಪಕ್ಷೀಯ ರಕ್ಷಣಾ ಸಹಕಾರದಲ್ಲಿ ಆಗಿರುವ ಸಾಧನೆಗಳ ಪ್ರಗತಿಯನ್ನು ವಿವರಿಸಿದರು. ಭಾರತ ಮತ್ತು ವಿಯಟ್ನಾಂ ಎರಡೂ ದೀರ್ಘಕಾಲೀನ ಮತ್ತು ಪರಸ್ಪರರಿಗೆ ಉಪಯುಕ್ತವಾದ ಬಾಂಧವ್ಯವನ್ನು ರಕ್ಷಣಾ ಕ್ಷೇತ್ರದಲ್ಲಿ ಹೊಂದಿದೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರು ಮತ್ತು ರಕ್ಷಣಾ ಬಾಂಧವ್ಯವನ್ನು ಬಲಪಡಿಸುವ ಸಂಕಲ್ಪದೊಂದಿಗೆ ಮುಂದುವರಿಸಲಿದೆ ಎಂಬುದನ್ನು ಪುನರುಚ್ಚರಿಸಿದರು.
ಭಾರತ ಮತ್ತು ವಿಯಟ್ನಾಂ ನಡುವಿನ ಎಲ್ಲ ಕ್ಷೇತ್ರಗಳಲ್ಲಿ ಆತ್ಮೀಯವಾದ ಸಹಕಾರವು ಇಡೀ ವಲಯದ ಪ್ರಗತಿ, ಸುರಕ್ಷತೆ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.