ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಾಟ್ನಾದಲ್ಲಿ ಶ್ರೀ ಗುರು ಗೋವಿಂದ ಸಿಂಗ್ ಜೀ ಮಹಾರಾಜ್ ಅವರ 350ನೇ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳು, ಶ್ರೀ ಗುರು ಗೋವಿಂದ ಸಿಂಗ್ ಜೀ ಅವರು ಹೇಗೆ ಹಲವಾರು ಜನರಿಗೆ ಸ್ಫೂರ್ತಿ ತುಂಬಿದರು ಎಂಬುದನ್ನು ಜಗತ್ತಿ ತಿಳಿಯಬೇಕು ಎಂದರು. ಗುರು ಗೋವಿಂದ ಸಿಂಗ್ ಜೀ ಅವರು ತಮ್ಮ ಚಿಂತನೆಗಳು ಮತ್ತು ಆದರ್ಶಗಳ ಮೂಲಕ ಹಲವು ಜನರಿಗೆ ಸ್ಫೂರ್ತಿ ತುಂಬಿದರು ಮತ್ತು ಅವರ ಬೋಧನೆಗಳಲ್ಲಿ ಜ್ಞಾನದ ಔನ್ನತ್ಯವಿರುತ್ತಿತ್ತು ಎಂದರು. ಗುರು ಗೋವಿಂದ ಸಿಂಗ್ ಜೀ ಅವರ ಶೌರ್ಯದ ಜೊತೆಗೆ ಅವರ ವ್ಯಕ್ತಿತ್ವದ ಹಲವು ಇತರ ಅಂಶಗಳು ಕೂಡ ಶ್ಲಾಘನಾರ್ಹವಾದವು ಎಂದು ಪ್ರಧಾನಿ ತಿಳಿಸಿದರು. ಗುರುಗೋವಿಂದ ಸಿಂಗ್ ಜೀ ಅವರು ಸಮಾಜದ ಯಾವುದೇ ಸ್ವರೂಪದ ತಾರತಮ್ಯವನ್ನು ನಂಬುತ್ತಿರಲಿಲ್ಲ ಮತ್ತು ಅವರು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದರು.
ಮುಂದಿನ ಪೀಳಿಗೆಯನ್ನು ಮದ್ಯವ್ಯಸನದಿಂದ ಪಾರು ಮಾಡಲು ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರು ಕೈಗೊಂಡಿರುವ ಕ್ರಮಗಳನ್ನು ಪ್ರಶಂಸಿಸಿ ಪ್ರಧಾನಿ ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಬಿಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದೂ ಪ್ರಧಾನಿ ಪ್ರತಿಪಾದಿಸಿದರು.
Met a group of secretaries, who presented their ideas on the agriculture and related sectors.
— Narendra Modi (@narendramodi) January 5, 2017