ಕ್ರ.ಸಂ

ಒಪ್ಪಂದ/ಎಂಓಯು ಹೆಸರು

ವಿವರ

1.

ಭಾರತ ಗಣರಾಜ್ಯ ಮತ್ತು ಯುಎಇ ನಡುವೆ ಸಮಗ್ರ ಕಾರ್ಯತಂತ್ರಾತ್ಮಕ ಪಾಲುದಾರಿಕೆಯ ಒಪ್ಪಂದ

ಇದೊಂದು ಸಾಮಾನ್ಯ ಚೌಕಟ್ಟು ಒಪ್ಪಂದವಾಗಿದ್ದು ಇದು 2016ರ ಫೆಬ್ರಬರಿ ಮತ್ತು 2015ರ ಆಗಸ್ಟ್ ನಲ್ಲಿ ಉನ್ನತ ಮಟ್ಟದ ಜಂಟಿ ಹೇಳಿಕೆಯಲ್ಲಿ ಬಿಡುಗಡೆ ಮಾಡಲಾದ ಸಮಗ್ರ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಅಡಿಯಲ್ಲಿ ಗುರುತಿಸಲಾದ ದ್ವಿಪಕ್ಷೀಯ ಸಹಕಾರ ಕ್ಷೇತ್ರಗಳನ್ನು ಪ್ರಚುರಪಡಿಸುತ್ತದೆ.

2..

ಭಾರತ ಗಣರಾಜ್ಯದ ಸರ್ಕಾರದ ರಕ್ಷಣಾ ಸಚಿವಾಲಯ ಮತ್ತು ಯುಎಇ ಸರ್ಕಾರದ ರಕ್ಷಣಾ ಸಚಿವಾಲಯದ ನಡುವೆ ರಕ್ಷಣಾ ಕೈಗಾರಿಕಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ಅಧ್ಯಯನ, ಸಂಶೋಧನೆ, ಅಭಿವೃದ್ಧಿ, ನಾವಿನ್ಯತೆ ಮತ್ತು ಎರಡೂ ರಾಷ್ಟ್ರಗಳ ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳ ಸಹಕಾರ ಸೇರಿದಂತೆ ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನದ ಗುರುತಿಸಲಾದ ಕ್ಷೇತ್ರಗಳಲ್ಲಿ ಸಹಕಾರ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಎರಡೂ ಕಡೆಯವರು ಶಸ್ತ್ರಾಸ್ತ್ರ, ರಕ್ಷಣಾ ಕೈಗಾರಿಕೆ ಮತ್ತು ತಂತ್ರಜ್ಞಾನ ವರ್ಗಾವಣೆ ಕ್ಷೇತ್ರದಲ್ಲಿ ಸಹಕಾರ ನೀಡಲಿವೆ

3.

ಭಾರತ ಗಣರಾಜ್ಯದ ಸರ್ಕಾರ ಮತ್ತು ಯುಎಇ ಸರ್ಕಾರದ ನಡುವೆ ಸಾಗರ ಸಾಗಣೆಯ ಸಾಂಸ್ಥಿಕ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ಸಾಗರ ಸಾರಿಗೆ, ಗುತ್ತಿಗೆದಾರರ ನಡುವೆ ಮುಕ್ತ ಹಣ ವರ್ಗಾವಣೆ, ಹಡಗುಗಳ ದಾಖಲೆಗಳನ್ನು ಪರಸ್ಪರ ಗೌರವಿಸುವ ಮೂಲಕ  ಸಾಗರ ವಾಣಿಜ್ಯ ಬಾಂಧವ್ಯದಲ್ಲಿ ಹೆಚ್ಚಿನ  ಚೌಕಟ್ಟು ಒದಗಿಸುತ್ತದೆ.

4.

ಭಾರತ ಗಣರಾಜ್ಯದ ಶಿಪ್ಪಿಂಗ್ ಮಹಾ ನಿರ್ದೇಶನಾಲಯ ಮತ್ತು ಯುಎಇಯ ಫೆಡರಲ್ ಸಾರಿಗೆ ಪ್ರಾಧಿಕಾರ- ಭೂ ಮತ್ತು ಸಾಗರದ ನಡುವೆ ತರಬೇತಿಯ ಗುಣಮಟ್ಟ, ಪ್ರಮಾಣೀಕರಣ ಮತ್ತು ವಾಚ್ ಕೀಪಿಂಗ್ ಒಪ್ಪಂದ(ಎಸ್.ಟಿ.ಸಿ.ಡಬ್ಲ್ಯು78) ಮತ್ತು ನಂತರದ ತಿದ್ದುಪಡಿಗಳ ನಿಬಂಧನೆಗಳನ್ವಯ ಸಾಮರ್ಥ್ಯದ ಪ್ರಮಾಣ ಪತ್ರಗಳ ಪರಸ್ಪರ ಮಾನ್ಯ ಮಾಡುವಿಕೆ ಕುರಿತಂತೆ ತಿಳಿವಳಿಕೆ ಒಪ್ಪಂದ.

ಈ ತಿಳಿವಳಿಕೆ ಒಪ್ಪಂದವು, ನೌಕಾ ಅಧಿಕಾರಿಗಳ, ಎಂಜನಿಯರುಗಳ ಮತ್ತು ಸಿಬ್ಬಂದಿಯ ಸಾಮರ್ಥ್ಯದ ಪ್ರಮಾಣ ಪತ್ರಗಳಿಗೆ ಪರಸ್ಪರ ಮಾನ್ಯತೆ ನೀಡುವ ಚೌಕಟ್ಟು ಸ್ಥಾಪಿಸುವ ಮೂಲಕ ಸಾಗರ ಆರ್ಥಿಕ ಚಟುವಟಿಕೆಯನ್ನು ಮತ್ತಷ್ಟು ಆಳಗೊಳಿಸುವ ಗುರಿಯನ್ನು ಹೊಂದಿದೆ.

5.

ಭಾರತ ಗಣರಾಜ್ಯದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಯುಎಇಯ ಫೆಡರಲ್ ಸಾರಿಗೆ ಪ್ರಾಧಿಕಾರ, ಭೂ ಮತ್ತು ಸಾಗರ ನಡುವೆ ಭೂ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿನ ದ್ವಿಪಕ್ಷೀಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ಸರಕು ಸಾಗಣೆಯಲ್ಲಿ ತಂತ್ರಜ್ಞಾನ, ಉತ್ತಮ ಪದ್ಧತಿಗಳು, ಗೋದಾಮು ಮತ್ತು ಹೆಚ್ಚಿನ ಸೇವೆಗಳ ಹಂಚಿಕೆಯೊಂದಿಗೆ  ಹೆದ್ದಾರಿ ಮತ್ತು ರಸ್ತೆ ಸಾರಿಗೆ ಕ್ಷೇತ್ರದಲ್ಲಿ ಸಹಕಾರ ಸ್ಥಾಪಿಸುವ ಗುರಿ ಹೊಂದಿದೆ.

6.

ಭಾರತ ಗಣರಾಜ್ಯದ ಸರ್ಕಾರ ಮತ್ತು ಯುಎಇ ಸರ್ಕಾರದ ನಡುವೆ ಮಾನವ ಕಳ್ಳಸಾಗಣೆ ತಡೆ ಮತ್ತು ಹೋರಾಟದ ಸಹಕಾರಕ್ಕೆ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ಮಾನವ ಕಳ್ಳಸಾಗಣೆ, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ತಡೆಯಲು, ರಕ್ಷಿಸಲು ಮತ್ತು ಅವರ ವಾಪಾಸಾತಿಗೆ ಸಂಬಂಧಿಸಿದ ವಿಚಾರಗಳಲ್ಲಿ ತ್ವರಿತ ಹೆಚ್ಚಿನ ದ್ವಿಪಕ್ಷೀಯ ಸಹಕಾರದ ಗುರಿಯನ್ನು ಹೊಂದಿದೆ.

7.

ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಸ್.ಎಂ.ಇ.ಗಳು) ಮತ್ತು ನಾವಿನ್ಯತೆ ಸಹಕಾರಕ್ಕಾಗಿ ಅರಬ್ ಎಮಿರೇಟ್ಸ್ ನ ಆರ್ಥಿಕ ಸಚಿವಾಲಯ ಮತ್ತು ಭಾರತ ಗಣರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂ.ಓ.ಎಸ್.ಎಂ.ಎಸ್.ಎಂ.ಇ.) ಸಚಿವಾಲಯದ ನಡುವೆ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ಜಂಟಿ ಯೋಜನೆಗಳು, ಆರ್ ಮತ್ತು ಡಿ ಹಾಗೂ ಸಂಬಂಧಿತ ಚಟುವಟಿಕೆಗಳಲ್ಲಿ ಎಂ.ಎಸ್.ಎಂ.ಇ. ವಲಯದಲ್ಲಿ ಸಹಕಾರ ಉತ್ತೇಜಿಸುವ ಗುರಿ ಹೊಂದಿದೆ.

8.

ಭಾರತ ಗಣರಾಜ್ಯದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಯು.ಎ.ಇ.ಯ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲಯ ನಡುವೆ ಕೃಷಿ ಮತ್ತು ಪೂರಕ ವಲಯಗಳಲ್ಲಿ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ಆಹಾರ ಸಂಸ್ಕರಣೆ ಮತ್ತು ಸಾಗುವಳಿ ಪದ್ಧತಿಗಳಲ್ಲಿ ತಂತ್ರಜ್ಞಾನದ ವರ್ಗಾವಣೆ ಸಹಕಾರ ಹೆಚ್ಚಳ ಸೇರಿದಂತೆ ಪರಸ್ಪರ ಹಿತದ ಕೃಷಿಯ ವಿವಿಧ ಕ್ಷೇತ್ರದಲ್ಲಿ ಸಹಕಾರದ ಚೌಕಟ್ಟು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

9.

ಭಾರತ ಗಣರಾಜ್ಯದ ಸರ್ಕಾರ ಮತ್ತು ಯುಎಇ ಸರ್ಕಾರದ ನಡುವೆ ರಾಜತಾಂತ್ರಿಕ, ವಿಶೇಷ ಮತ್ತು ಅಧಿಕೃತ ಪಾಸ್ ಪೋರ್ಟ್ ಹೊಂದಿರುವವರಿಗೆ ಪ್ರವೇಶ ವೀಸಾ ಅಗತ್ಯದ ಪರಸ್ಪರ ವಿನಾಯಿತಿ ಕುರಿತಂತೆ ತಿಳಿವಳಿಕೆ ಒಪ್ಪಂದ.

ಈ ಒಪ್ಪಂದವು ರಾಜತಾಂತ್ರಿಕ, ವಿಶೇಷ ಮತ್ತು ಅಧಿಕೃತ ಪಾಸ್ ಪೋರ್ಟ್ ಹೊಂದಿರುವವರಿಗೆ ಎರಡೂ ರಾಷ್ಟ್ರಗಳ ನಡುವೆ ವೀಸಾ ರಹಿತ ಓಡಾಟಕ್ಕೆ ಅವಕಾಶ ನೀಡುತ್ತದೆ.

10.

ಭಾರತದ ಪ್ರಸಾರ ಭಾರತಿ ಮತ್ತು ಎಮಿರೇಟ್ಸ್ ಸುದ್ದಿ ಸಂಸ್ಥೆ (ಡಬ್ಲ್ಯುಎಎಂ), ಯು.ಎ.ಇ. ನಡುವೆ ಕಾರ್ಯಕ್ರಮ ವಿನಿಮಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

 ಈ ತಿಳಿವಳಿಕೆ ಒಪ್ಪಂದವು ಉತ್ತಮ ಪದ್ಧತಿಗಳು, ಸುದ್ದಿ ಮತ್ತು ಕಾರ್ಯಕ್ರಮಗಳ ಪರಸ್ಪರ ವಿನಿಮಯದ ಪ್ರಸಾರ ಕ್ಷೇತ್ರದ ಸಹಕಾರದ ಮೂಲಕ   ಪ್ರಸಾರ ಭಾರತಿ ಮತ್ತು ಎಮಿರೇಟ್ಸ್ ಸುದ್ದಿ ಸಂಸ್ಥೆ (ಡಬ್ಲ್ಯುಎಎಂ) ಯುಎಇ ನಡುವೆ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

11.

ಭಾರತದ ಗಣರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆರ್ಥಿಕ ಸಚಿವಾಲಯ ವಾಣಿಜ್ಯ ಪರಿಹಾರ ಕ್ರಮಗಳ ನಡುವೆ ಪರಸ್ಪರ ಹಿತದ ಕ್ಷೇತ್ರಗಳಲ್ಲಿ ಸಹಕಾರ ಉತ್ತೇಜನಕ್ಕೆ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ವಾಣಿಜ್ಯ ಪರಿಹಾರ ಕ್ರಮಗಳಿಗೆ ಸಂಬಂಧಿಸಿದಂತೆ ಪರಸ್ಪರರು ಗುರುತಿಸಿದ ಕ್ಷೇತ್ರಗಳಲ್ಲಿ ಮಾಹಿತಿಯ ವಿನಿಮಯ, ಸಾಮರ್ಥ್ಯವರ್ಧನೆ, ವಿಚಾರಗೋಷ್ಠಿ ಮತ್ತು ತರಬೇತಿ ಮೂಲಕ ಆಂಟಿ ಡಂಪಿಂಗ್ ಮತ್ತು ಅದಕ್ಕೆ ಪೂರಕ ಕರ್ತವ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರದ ಗುರಿ ಹೊಂದಿದೆ.

12.

ತೈಲ ದಾಸ್ತಾನು ಮತ್ತು ನಿರ್ವಹಣೆಗಾಗಿ ಭಾರತೀಯ ಕಾರ್ಯತಂತ್ರಾತ್ಮಕ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ ಮತ್ತು ಅಬು ದಾಬಿ ರಾಷ್ಟ್ರೀಯ ತೈಲ ಕಂಪನಿ ನಡುವೆ ಒಪ್ಪಂದ

ಈ ಒಪ್ಪಂದವು ಅಬುದಾಬಿ ರಾಷ್ಟ್ರೀಯ ತೈಲ ಕಂಪನಿಯಿಂದ ಭಾರತದಲ್ಲಿ ಕಚ್ಚಾ ತೈಲ ದಾಸ್ತಾನು ಮಾಡಲು ಮತ್ತು ಎರಡೂ ರಾಷ್ಟ್ರಗಳ ನಡುವೆ ಇಂಧನ ಕ್ಷೇತ್ರದಲ್ಲಿ ಕಾರ್ಯತಂತ್ರಾತ್ಮಕ ಬಾಂಧವ್ಯ ವರ್ಧನೆಗಾಗಿ ಚೌಕಟ್ಟು ರೂಪಿಸುವ ಗುರಿ ಹೊಂದಿದೆ.

13.

ರಾಷ್ಟ್ರೀಯ ಉತ್ಪಾದಕತೆ ಮಂಡಳಿ ಮತ್ತು ಅಲ್ ಎತಿಹಾದ್ ಇಂಧನ ಸೇವೆ ಕೋ. ಎಲ್.ಎಲ್.ಸಿ. ನಡುವೆ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ಇಂಧನ ದಕ್ಷತೆ ಸೇವೆಯ ಸಹಕಾರ ಕುರಿತಾದ್ದಾಗಿದೆ

14.

ಭಾರತೀಯ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಯು.ಎ.ಇ.ಯ ವಿದ್ಯುನ್ಮಾನ ಭದ್ರತೆ ಪ್ರಾಧಿಕಾರದ ನಡುವೆ ಎಂ.ಓ.ಯು.

ಈ ತಿಳಿವಳಿಕೆ ಒಪ್ಪಂದವು ತಂತ್ರಜ್ಞಾನ ಅಭಿವೃದ್ಧಿ ಮತ್ತು ಸೈಬರ್ ಪ್ರದೇಶ ಸಹಕಾರ ಕುರಿತದ್ದಾಗಿದೆ.