What do you think NDA Govt’s move of banning old Rs. 500 & Rs. 1000 currency notes? Take a survey & submit your views on the NM App

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೇಂದ್ರ ಸರ್ಕಾರ ರೂ. 500 ಮತ್ತು 1000 ನೋಟುಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೈಗೊಂಡ ನಿರ್ಧಾರದ ಬಗ್ಗೆ ಜನರಿಂದ ಅಭಿಪ್ರಾಯವನ್ನು ಕೇಳಿದ್ದಾರೆ.

ಜನರು ತಮ್ಮ ಅಭಿಪ್ರಾಯಗಳನ್ನು 10 ಪ್ರಶ್ನೆಗಳ ಸಮೀಕ್ಷೆಯ ಮೂಲಕ ಸಲ್ಲಿಸಬಹುದಾಗಿದ್ದು, ಇದು ನರೇಂದ್ರ ಮೋದಿ ಅವರ ಆಪ್ ನಲ್ಲಿ ಲಭ್ಯವಿದೆ. ಈ ಸಮೀಕ್ಷೆಗೆ ಸಂಪರ್ಕವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಯವರು, ಈ ನಿರ್ಧಾರ ಕುರಿತಂತೆ ತಾವು ಜನರಿಂದ ನೇರ ಅಭಿಪ್ರಾಯವನ್ನು ತಿಳಿಯ ಬಯಸುವುದಾಗಿ ಟ್ವೀಟ್ ಮಾಡಿದ್ದಾರೆ.

ಸಮೀಕ್ಷೆಯಲ್ಲಿರುವ ಹತ್ತು ಪ್ರಶ್ನೆಗಳು ಈ ಕೆಳಗಿನಂತಿವೆ:

1.ಭಾರತದಲ್ಲಿ ಕಪ್ಪು ಹಣ ಇದೆ ಎಂದು ನಾವು ಭಾವಿಸುತ್ತೀರಾ? ಎ.ಹೌದುಬಿ. ಇಲ್ಲ

2. ಭ್ರಷ್ಟಾಚಾರ ಮತ್ತು ಕಪ್ಪು ಹಣವೆಂಬ ಪಿಡುಗಿನ ವಿರುದ್ಧ ಹೋರಾಟ ಮಾಡಿ, ನಿರ್ಮೂಲನ ಮಾಡುವ ಅಗತ್ಯ ಇದೆ ಎಂದು ನಿಮಗೆ ಅನಿಸುತ್ತದೆಯೇ? ಎ.ಹೌದುಬಿ. ಇಲ್ಲ

3. ಒಟ್ಟಾರೆಯಾಗಿ, ಕಪ್ಪು ಹಣ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಿಮಗೇನನಿಸುತ್ತದೆ?

4. ಈವರೆಗೆ ಮೋದಿ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ನಿಮಗೇನನಿಸುತ್ತದೆ? 1 ರಿಂದ 5ರವರೆಗಿನ ಶ್ರೇಣಿ – ಅದ್ಭುತ, ಅತಿ ಉತ್ತಮ, ಉತ್ತಮ, ಓಕೆ, ನಿಷ್ಪ್ರಯೋಜಕ.

5. 500 ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಮಾಡಿದ ಮೋದಿ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎ. ಸರಿಯಾದ ದಿಕ್ಕಿನಲ್ಲಿ ಶ್ರೇಷ್ಠ ನಡೆ, ಬಿ. ಉತ್ತಮ ನಡೆ, ಸಿ. ಇದರಿಂದ ಏನೂ ಬದಲಾವಣೆ ಆಗಲ್ಲ.

6. ನೋಟು ರದ್ದತಿಯು ಕಪ್ಪುಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಹತ್ತಿಕ್ಕಲು ನೆರವಾಗುತ್ತದೆ ಎಂದು ನಿಮಗನಿಸುತ್ತದೆಯೇ? ಎ. ಇದು ತತ್ ಕ್ಷಣಕ್ಕೇ ಪ್ರಭಾವ ಬೀರುತ್ತದೆ, ಬಿ. ಮಧ್ಯಮ ಮತ್ತು ದೀರ್ಘಕಾಲೀನ ಪ್ರಭಾವವನ್ನು ಇದು ಹೊಂದಿದೆ. ಸಿ. ಕನಿಷ್ಠ ಪ್ರಭಾವ, ಸಿ. ಗೊತ್ತಿಲ್ಲ.

7. ನೋಟು ರದ್ದತಿಯು ರಿಯಲ್ ಎಸ್ಟೇಟ್, ಉನ್ನತ ಶಿಕ್ಷಣ, ಆರೋಗ್ಯ ಸೇವೆ ಶ್ರೀಸಾಮಾನ್ಯನ ಕೈಗೆಟಕುವಂತೆ ಮಾಡುತ್ತದೆ. ಎ) ಸಂಪೂರ್ಣ ಒಪ್ಪುತ್ತೇನೆ ಬಿ. ಭಾಗಶಃ ಒಪ್ಪುತ್ತೇನೆ, ಸಿ. ಏನೂ ಹೇಳಲ್ಲ.

8. ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ ಮತ್ತು ಖೋಟಾ ನೋಟು ಚಲಾವಣೆ ಹತ್ತಿಕ್ಕುವ ನಮ್ಮ ಹೋರಾಟದಿಂದ ತಮಗಾದ ತೊಂದರೆಗೆ ಬೇಸತ್ತಿದ್ದೀರಾ? ಅ. ಖಂಡಿತಾ ಇಲ್ಲ., ಬಿ. ಸ್ವಲ್ಪ ಮಾತ್ರ, ಆದರೂ ಇದು ಮೌಲ್ಯಯುತ, ಸಿ. ಹೌದು.

9. ಕೆಲವು ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರು ಈಗ ನಿಜವಾಗಿ ಕಪ್ಪುಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ? ಎ. ಹೌದು, ಬಿ. ಇಲ್ಲ.

10. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನೀವು ನಿಮ್ಮ ಸಲಹೆ, ಕಲ್ಪನೆ, ಒಳನೋಟವನ್ನು ಹಂಚಿಕೊಳ್ಳಲು ಬಯಸುತ್ತೀರಾ?

ಈ ಸಮೀಕ್ಷೆಯು ಪ್ರಮುಖ ನೀತಿಗಳು ಮತ್ತು ಜಾರಿ ವಿಚಾರಗಳಲ್ಲಿ ಭಾರತದ ಜನತೆಯ ಅಭಿಪ್ರಾಯವನ್ನು ನೇರವಾಗಿ ಕೇಳುವ ಮತ್ತು ಜನತೆಯೇ ಪಾಲ್ಗೊಳ್ಳುವ ಆಡಳಿತ ಕುರಿತ ಪ್ರಧಾನಮಂತ್ರಿಯವರ ನೋಟಕ್ಕೆ ಪೂರಕವಾಗಿದೆ.

ಪ್ರಧಾನಮಂತ್ರಿಯವರು 500 ಮತ್ತು 1000 ರೂಪಾಯಿ ನೋಟುಗಳ ಅಧಿಕೃತ ಚಲಾವಣೆಯನ್ನು ರದ್ದು ಮಾಡಿದ ನಿರ್ಧಾರದಿಂದಾದ ನೇರ ಪರಿಣಾಮ ವಿಚಾರಗಳ ಬಗ್ಗೆ ಜನರಿಂದ ಉತ್ತರ ಕೇಳಿದ್ದಾರೆ. ಇದರ ಜಾರಿಯನ್ನು ಬಲವಾಗಿ ಹೇಗೆ ಮಾಡಬೇಕು ಎಂಬ ಬಗ್ಗೆಯೂ ಜನರಿಂದ ಪ್ರತಿಕ್ರಿಯೆ ಕೇಳಿದ್ದಾರೆ.
ಈ ಸಮೀಕ್ಷೆಯಲ್ಲಿ ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದುವ ಪ್ರಧಾನಮಂತ್ರಿಯವರ ಪ್ರಮುಖ ನಂಬಿಕೆ ಮತ್ತೊಮ್ಮೆ ಪ್ರದರ್ಶಿತವಾಗಿದೆ.