PM Modi lays Foundation Stone for Super Speciality Hospitals, Cancer Centre
PM Modi inaugurates new Trade Facilitation Centre and Crafts Museum
Blessings of the people are like the blessings of Almighty: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ವಾರಾಣಸಿಗೆ ಭೇಟಿ ನೀಡಿದ್ದರು. ಅವರು ಮಹಾಮನ ಪಂಡಿತ್ ಮದನ್ ಮೋಹನ ಮಾಳವೀಯ ಕ್ಯಾನ್ಸರ್ ಕೇಂದ್ರಕ್ಕೆ ಮತ್ತು ಶತಮಾನೋತ್ಸವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಿಎಚ್.ಯು.ನಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ವೈದ್ಯಕೀಯ ವಿಜ್ಞಾನದಲ್ಲಿ ತಂತ್ರಜ್ಞಾನದ ಪಾತ್ರ ಹೆಚ್ಚಾಗುತ್ತಿದೆ ಮತ್ತು ಕೇಂದ್ರ ಸರ್ಕಾರ ಭಾರತದಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವತ್ತ ಹೆಜ್ಜೆ ಇಟ್ಟಿದೆ ಎಂದರು.

ಭಾರತದ ಜನತೆಗೆ ಅದರಲ್ಲೂ ಬಡಜನರಿಗೆ ಕೈಗೆಟಕುವ ದರದ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಈ ಹೊತ್ತಿನ ಅಗತ್ಯವಾಗಿದೆ ಎಂದು ತಿಳಿಸಿದರು.

ಭಾರತದ 125 ಕೋಟಿ ಜನತೆಯ ಬಲದಲ್ಲಿ ತಮಗೆ ನಂಬಿಕೆ ಇದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಭಾರತದ ಜನರು ನಿಸ್ವಾರ್ಥಿಗಳು ಮತ್ತು ಜನತೆಯ ಆಶೀರ್ವಾದ ಭಗವಂತನ ಆಶೀರ್ವಾದದಂತೆ ಎಂದು ಹೇಳಿದರು.

 ಆನ್ ಲೈನ್ ಬ್ಯಾಂಕಿಂಗ್ ನತ್ತ ಸಾಗುವಂತೆ ಯುವಜನತೆಗೆ ಅವರು ಕರೆ ನೀಡಿದರು. ಪ್ರಧಾನಮಂತ್ರಿಯವರು ಐಪಿಡಿಎಸ್ ಮತ್ತು ಎಚ್.ಆರ್.ಐ.ಡಿ.ಎ.ವೈ. (ಹೃದಯ್) ಯೋಜನೆಗಳ ಅಡಿಯಲ್ಲಿ ಅಂತರ್ಗತ ಕೇಬಲ್ ಅಳವಡಿಕೆ ಮತ್ತು ಪಾರಂಪರಿಕ ದೀಪಾಲಂಕಾರದ ಪ್ರಗತಿಯನ್ನು ನೋಡಲು ವಾರಾಣಾಸಿಯ ಕಬೀರ್ ನಗರ ಬಡಾವಣೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಬಳಿಕ, ಡಿಎಲ್.ಡಬ್ಲ್ಯು ಮೈದಾನದಲ್ಲಿ ಪ್ರಧಾನಮಂತ್ರಿಯವರು ಇ.ಎಸ್.ಐ.ಸಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. ಹೊಸ ವಾಣಿಜ್ಯ ಸೌಲಭ್ಯ ಕೇಂದ್ರ ಮತ್ತು ಕಲಾ ವಸ್ತುಪ್ರದರ್ಶನವನ್ನೂ ಅವರು ಉದ್ಘಾಟಿಸಿದರು.