PM Narendra Modi inaugurates National Youth Festival at Rohtak via video conferencing
Swami Vivekananda shows what one can achieve at a young age: PM
The work that the youth are doing today will impact the future of the nation: PM
Need of the hour is collectivity, connectivity, and creativity: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಸಂವಾದದ ಮೂಲಕ ರೋಹ್ಟಕ್ ನಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು.

ಸ್ವಾಮಿ ವಿವೇಕಾನಂದರ ಬದುಕು, ಯುವ ವಯಸ್ಸಿನಲ್ಲಿ ಯಾರು ಏನೆಲ್ಲಾ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು. ಇಂದು ಯುವಕರು ಮಾಡುತ್ತಿರುವ ಕಾರ್ಯದ ಪರಿಣಾಮ ದೇಶದ ಭವಿಷ್ಯದ ಮೇಲೆ ಆಗುತ್ತದೆ ಎಂದು ತಿಳಿಸಿದರು.

ಡಿಜಿಟಲ್ ಭಾರತಕ್ಕೆ ಯುವಜನರು ಎಂಬ ಈ ಬಾರಿಯ ಧ್ಯೇಯವಾಕ್ಯದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ನಗದುರಹಿತ ವಹಿವಾಟಿಗೆ ತಮ್ಮ ಸುತ್ತಲ ಜನರಿಗೆ ಮಾರ್ಗದರ್ಶನ ಮಾಡುವಂತೆ ಯುವಜನರಿಗೆ ಅವರು ಕರೆ ನೀಡಿದರು. ದೇಶದ ಪ್ರಗತಿಗೆ ಕಪ್ಪುಹಣ ಮತ್ತು ಭ್ರಷ್ಟಾಚಾರ ಪ್ರತೀಕೂಲ ಪರಿಣಾಮ ಬೀರುತ್ತದೆ ಎಂದೂ ಅವರು ಹೇಳಿದರು.

ತಂತ್ರಜ್ಞಾನದ ಪ್ರಭಾವದಿಂದ ಕಾಲ ಬದಲಾಗುತ್ತಿದೆ ಮತ್ತು ಸಂಪರ್ಕ, ಒಟ್ಟಿಗೆ ಸೇರುವುದು ಮತ್ತು ರಚನಾತ್ಮಕತೆ ಈ ಹೊತ್ತಿನ ಅಗತ್ಯವಾಗಿದೆ ಎಂದು ತಿಳಿಸಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಯುವಜನರು ನೀಡಿದ ಬೆಂಬಲ ತಮಗೆ ತೃಪ್ತಿ ನೀಡಿತು, ಇದರಿಂದ ದೇಶದಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯವಾಯಿತು ಎಂದರು.

Click here to read full text speech