ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ನವದೆಹಲಿಯಲ್ಲಿಆಡಳಿತ ಪರವಾದ ಮತ್ತು ಸಕಾಲದಲ್ಲಿ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ನಡೆದಹದಿನಾರನೇಸಂವಾದದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನಮಂತ್ರಿಯವರು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಸಂಬಂಧಿಸಿದ ಇಪಿಎಫ್.ಓ, ಇ.ಎಸ್.ಐ.ಸಿ. ಮತ್ತು ಕಾರ್ಮಿಕ ಆಯುಕ್ತರಿಗೆ ಸಂಬಂಧಿಸಿದ ಕುಂದುಕೊರತೆಗಳ ನಿರ್ವಹಣೆ ಮತ್ತು ಪರಿಹಾರ ಕುರಿತಂತೆ ಪ್ರಗತಿಯ ಪರಾಮರ್ಶೆ ನಡೆಸಿದರು.
ಕಾರ್ಮಿಕ ಇಲಾಖೆಯ ಕಾರ್ಯದರ್ಶಿ, ಆನ್ ಲೈನ್ ಮೂಲಕ ಕ್ಲೇಮ್ ಗಳ ವರ್ಗಾವಣೆ, ವಿದ್ಯುನ್ಮಾನ ಚಲನ್ ಗಳು, ಮೊಬೈಲ್ ಆನ್ವಯಿಕಗಳು ಮತ್ತು ಎಸ್.ಎಂ.ಎಸ್. ಎಚ್ಚರಿಕೆ ಮತ್ತು ಹೆಚ್ಚುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸೇರ್ಪಡೆ ಸೇರಿದಂತೆ ಕುಂದುಕೊರತೆಗಳ ಪರಿಹಾರ ವ್ಯವಸ್ಥೆಯಲ್ಲಿ ತಂದಿರುವ ಸುಧಾರಣೆಗಳನ್ನು ಒತ್ತಿ ಹೇಳಿದರು.
ಕಾರ್ಮಿಕರ ಮತ್ತು ಇ.ಪಿ.ಎಫ್. ಫಲಾನುಭವಿಗಳ ದೊಡ್ಡ ಸಂಖ್ಯೆಯ ಕುಂದುಕೊರತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸರ್ಕಾರ ಕಾರ್ಮಿಕರ ಅಗತ್ಯಗಳಿಗೆ ಸ್ಪಂದನಶೀಲವಾಗಿರಬೇಕು ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಕಾರ್ಮಿಕರು ತಮ್ಮ ಕಾನೂನುಬದ್ಧವಾದ ಬಾಕಿಯನ್ನು ಪಡೆಯಲು ಹೋರಾಟ ಮಾಡಬಾರದು ಎಂದು ಅವರು ಹೇಳಿದರು. ಎಲ್ಲ ನೌಕರರಿಗೆ ನಿವೃತ್ತಿಯ ಲಾಭಗಳು ದೊರಕುವಂತೆ ಮಾಡಲು ನಿವೃತ್ತಿಯಾಗುವ ಒಂದು ವರ್ಷದ ಮುಂಚಿತವಾಗಿಯೇ ಆಖೈರು ಪ್ರಕ್ರಿಯೆಯನ್ನು ಆರಂಭಿಸುವ ವ್ಯವಸ್ಥೆ ತರರುವಂತೆ ಅವರು ತಿಳಿಸಿದರು. ಅಕಾಲಿಕ ಮರಣಕ್ಕೆ ತುತ್ತಾಗುವ ಪ್ರಕರಣಗಳಲ್ಲಿ, ನಿರ್ದಿಷ್ಟ ಸಮಯದೊಳಗೆ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು ಮತ್ತು ಆಗದಿದ್ದಲ್ಲಿ ಅಧಿಕಾರಿಗಳನ್ನು ಇದಕ್ಕೆ ಹೊಣೆ ಮಾಡಬೇಕು ಎಂದರು.
ಇ-ನಾಮ್ ಉಪಕ್ರಮದ ಪ್ರಗತಿಯ ಪರಿಶೀಲನೆಯ ವೇಳೆ, ಅಧಿಕಾರಿಗಳು 2016ರ ಏಪ್ರಿಲ್ ನಲ್ಲಿ 8 ರಾಜ್ಯಗಳಲ್ಲಿ 21 ಮಂಡಿಗಳೊಂದಿಗೆ ಆರಂಭವಾದ ಇ-ನಾಮ್, ಈಗ 10 ರಾಜ್ಯಗಳಲ್ಲಿ 250 ಮಂಡಿಗಳನ್ನು ಹೊಂದಿದೆ ಎಂದು ತಿಳಿಸಿದರು. 13 ರಾಜ್ಯಗಳು ಎ.ಪಿ.ಎಂ.ಸಿ. ಕಾಯಿದೆ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಳಿಸಿವೆ ಎಂದರು. ಪ್ರಧಾನಮಂತ್ರಿಯವರು ದೇಶದಾದ್ಯಂತ ಇ-ನಾಮ್ ಜಾರಿಗೆ ತರಲು ಅನುವಾಗುವಂತೆ ಉಳಿದ ರಾಜ್ಯಗಳೂ ತ್ವರಿತವಾಗಿ ಎಂ.ಪಿ.ಎಂ.ಸಿ. ಕಾಯಿದೆಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು. ಗುಣಮಟ್ಟ ಮತ್ತು ಶ್ರೇಣೀಕರಣದ ಸೌಲಭ್ಯ ದೊರಕುವಂತೆ ಮಾಡಿದಾಗ ರೈತರಿಗೆ ಲಾಭವಾಗುತ್ತದೆ ಎಂದ ಪ್ರಧಾನಿ, ಹೀಗಾದಾಗ ರೈತರು ತಮ್ಮ ಉತ್ಪನ್ನಗಳು ದೇಶದಾದ್ಯಂತ ಇರುವ ಮಂಡಿಗಳಲ್ಲಿ ಮಾರಾಟ ಮಾಡಬಹುದು ಎಂದರು. ಇ-ನಾಮ್ ಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಧಾನಿ ಆಹ್ವಾನ ನೀಡಿದರು.
ತೆಲಂಗಾಣ, ಒಡಿಶಾ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ರೈಲ್ವೆ, ರಸ್ತೆ, ಇಂಧನ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿದರು. ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವ ಮಹತ್ವವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಅದರಿಂದ ವೆಚ್ಚದ ಹೆಚ್ಚಳ ತಪ್ಪಿಸಬಹುದು ಮತ್ತು ಅಂದುಕೊಂಡಂತೆ ಯೋಜನೆಯ ಲಾಭ ಶೀಘ್ರ ಜನತೆಗೆ ತಲುಪುತ್ತದೆ ಎಂದರು. ಇಂದು ಪರಿಶೀಲಿಸಲಾದ ಯೋಜನೆಗಳು: ಹೈದ್ರಾಬಾದ್ ಮತ್ತು ಸಿಕಂದರಾಬಾದ್ ನ ಬಹು ಮಾದರಿ ಸಾರಿಗೆ ವ್ಯವಸ್ಥೆ ಹಂತ – II; ಅಂಗಮಲೆ-ಶಬರಿಮಲೆ ರೈಲ್ವೆ ಮಾರ್ಗ; ದೆಹಲಿ –ಮೀರಟ್ ಎಕ್ಸ್ ಪ್ರೆಸ್ ಮಾರ್ಗ; ಸಿಕ್ಕಿಂನಲ್ಲಿ ರೆನೋಕ್ – ಪಾಕ್ ಯಂಗ್ ರಸ್ತೆ ಯೋಜನೆ; ಮತ್ತು ಈಶಾನ್ಯ ಭಾರತದಲ್ಲಿ ವಿದ್ಯುತ್ ಮೂಲಸೌಕರ್ಯ ಬಲಪಡಿಸುವ ಯೋಜನೆಯ 5ನೇ ಹಂತ ಸೇರಿತ್ತು. ಉತ್ತರ ಪ್ರದೇಶದ ಪುಲ್ಪುರ್ – ಹಾಲ್ಡಿಯಾ ಅನಿಲ ಕೊಳವೆ ಮಾರ್ಗ ಯೋಜನೆಯನ್ನು ಸಹ ಪರಿಶೀಲಿಸಲಾಯಿತು.
ಪ್ರಧಾನಮಂತ್ರಿಯವರು ಅಟಲ್‌ನಗರ ಪುನರುತ್ಥಾನಹಾಗೂನಗರಪರಿವರ್ತನಾ ಯೋಜನೆ(ಅಮೃತ್) ಕುರಿತೂ ಪರಿಶೀಲನೆ ನಡೆಸಿದರು. ಅಮೃತ್ ಯೋಜನೆ ಅಡಿ ಬರುವ ಎಲ್ಲ 500 ಪಟ್ಟಣಗಳಲ್ಲಿ ಎಲ್ಲ ನಿವಾಸಿಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆಯ ಖಾತ್ರಿ ಪಡಿಸಿಕೊಳ್ಳುವಂತೆ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು. "ನಗರ" ಎಂಬ ಪದವನ್ನು ಹಿಂದಿಯಲ್ಲಿ "ನಲ್" (ಕುಡಿಯುವ ನೀರು), ಗಟರ್ (ಒಳಚರಂಡಿ) ಮತ್ತು ರಸ್ತಾ (ರೋಡ್) ಎಂದು ತೆಗೆದುಕೊಳ್ಳಬಹುದು ಎಂದರು. ಅಮೃತ್ ನಾಗರಿಕ ಕೇಂದ್ರಿತ ಸುಧಾರಣೆಗೆ ಗಮನ ಹರಿಸಬೇಕು ಎಂದರು.
ಸಂಬಂಧಿತ ವಿಷಯಗಳನ್ನು ಒಗ್ಗೂಡಿಸಿದ ಪ್ರಧಾನಮಂತ್ರಿಯವರು, ಇಂಥ ಸುಧಾರಣೆಗಳು ಸರ್ಕಾರದ ಎಲ್ಲ ಇಲಾಖೆಗಳಿಗೂ ವಿಸ್ತರಿಸಬೇಕು ಎಂದರು. ಸುಲಭವಾಗಿ ವಾಣಿಜ್ಯ ನಡೆಸುವ ಕುರಿತ ವಿಶ್ವ ಬ್ಯಾಂಕ್ ನ ಇತ್ತೀಚಿನ ವರದಿಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈ ವರದಿಯನ್ನು ಅಧ್ಯಯನ ಮಾಡುವಂತೆ ಮತ್ತು ತಮ್ಮ ರಾಜ್ಯ ಹಾಗೂ ಇಲಾಖೆಯಲ್ಲಿ ಸುಧಾರಣೆ ತರಲು ಇರುವ ಅವಕಾಶವನ್ನು ಮತ್ತು ಸಾಮರ್ಥ್ಯ ಪ್ರದೇಶ ವಿಶ್ಲೇಷಿಸುವಂತೆ ಎಲ್ಲ ಮುಖ್ಯ ಕಾರ್ಯದರ್ಶಿಗಳು ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಗಳಿಗೆ ಸೂಚಿಸಿದರು. ಈ ನಿಟ್ಟಿನಲ್ಲಿ ಒಂದು ತಿಂಗಳುಗಳ ಒಳಗೆ ವರದಿಯನ್ನು ನೀಡುವಂತೆ ಎಲ್ಲ ಸಂಬಂಧಿತರಿಗೆ ಸೂಚಿಸಿದರು ಮತ್ತು ಆ ನಂತರ ಅದನ್ನು ಪರಿಶೀಲಿಸುವಂತೆ ಸಂಪುಟ ಕಾರ್ಯದರ್ಶಿಯವರಿಗೆ ತಿಳಿಸಿದರು.
ಯೋಜನೆಗಳು ಮತ್ತು ಕಾರ್ಯಕ್ರಮಗಳು ತ್ವರಿತವಾಗಿ ಅನುಷ್ಠಾನವಾಗಲಿ ಎಂಬ ಖಾತ್ರಿಗಾಗಿ ಕೇಂದ್ರ ಬಜೆಟ್ ಮಂಡನೆಯನ್ನು ಒಂದು ತಿಂಗಳು ಮುಂಚಿತಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಬಜೆಟ್ ಮುಂಚಿತವಾಗಿಯೇ ಮಂಡನೆಯಾಗುವುದಕ್ಕೆ ಅನುಗುಣವಾಗಿ ತಮ್ಮ ಯೋಜನೆಗಳನ್ನು ಹೊಂದಿಸಿಕೊಳ್ಳುವಂತೆ ಅವರು ಎಲ್ಲ ರಾಜ್ಯಗಳಿಗೆ ಮನವಿ ಮಾಡಿದರು, ಇದರಿಂದ ಅವರು ಹೆಚ್ಚಿನ ಉಪಯೋಗ ಪಡೆಯಬಹುದು ಎಂದರು.
ಮುಂಬರುವ ಸರ್ದಾರ್ ಪಟೇಲ್ ಜಯಂತಿಯ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳು ಮತ್ತು ಸಂಸ್ಥೆಗಳ ಪೈಕಿ ಕನಿಷ್ಠ ಒಂದು ಅಂತರ್ಜಾಲ ತಾಣ ಎಲ್ಲ ಮಾನ್ಯತೆ ಪಡೆದ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಖಾತ್ರಿ ಪಡಿಸಿಕೊಳ್ಳುವಂತೆ ತಿಳಿಸಿದರು.