ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ನೀಮ್ರಾನ್ ಸಮಾವೇಶ 2016ರಲ್ಲಿ ಭಾಗವಹಿಸಿರುವ ವಿದ್ವಾಂಸರು ಮತ್ತು ಆರ್ಥಿಕ ತಜ್ಞರ ಜೊತೆ ಸಂವಾದ ನಡೆಸಿದರು.
ಜಾಗತಿಕ ಸಂಶೋಧನೆಯ ಕಲ್ಪನೆಗಳೊಂದಿಗೆ ವಿಸ್ತೃತ ಆರ್ಥಿಕ ವ್ಯವಸ್ಥೆ, ವಾಣಿಜ್ಯ, ಹಣಕಾಸು ನೀತಿ, ಸ್ಪರ್ಧಾತ್ಮಕತೆ, ಉತ್ಪಾದಕತೆ ಮತ್ತು ಇಂಧನದಂಥ ಕ್ಷೇತ್ರಗಳ ಮೇಲೆ ಚರ್ಚೆ ಗಮನಹರಿಸಲಾಗಿತ್ತು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ವಿವೇಕಯುತ ಬೃಹತ್-ಆರ್ಥಿಕ ನೀತಿ, ನಿಯಮ ಆಧಾರಿತಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ, ಜವಾಬ್ದಾರಿಯುತ ಹವಾಮಾನ ನೀತಿ ಮತ್ತು ಉದ್ಯೋಗವನ್ನು ಸೃಷ್ಟಿಸುವ ಮತ್ತು ಬಡತನ ಕಡಿಮೆ ಮಾಡುವ ಭಾರತದ ಬದ್ಧತೆಯನ್ನು ಒತ್ತಿ ಹೇಳಿದರು.
ಕೃಷಿ ಉತ್ಪಾದಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಹಾಗೂ ಪುನರ್ ನವೀಕರಿಸಬಹುದಾದ ಇಂಧನದ ಮೇಲೆ ಹರಿಸಲಾಗಿರುವ ಗಮನವನ್ನು ವಿವರವಾಗಿ ಪ್ರಧಾನಿ ಪ್ರಸ್ತಾಪಿಸಿದರು.