ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಾನು 2016ರ ನವೆಂಬರ್ 10-12ರವರೆಗೆ ಜಪಾನ್ ಗೆ ಭೇಟಿ ನೀಡುತ್ತಿದ್ದೇನೆ. ಪ್ರಧಾನಮಂತ್ರಿಯಾಗಿ ಜಪಾನ್ ಗೆ ಇದು ನನ್ನ ಎರಡನೇ ಭೇಟಿಯಾಗಿದೆ.
ಜಪಾನ್ ನೊಂದಿಗಿನ ನಮ್ಮ ಪಾಲುದಾರಿಕೆಯು ವಿಶೇಷ ಕಾರ್ಯತಂತ್ರಾತ್ಮಕ ಮತ್ತು ಜಾಗತಿಕ ಪಾಲುದಾರಿಕೆ ಎಂದು ಚಿತ್ರಿಸಲಾಗಿದೆ. ಭಾರತ ಮತ್ತು ಜಪಾನ್ ಗಳು ಪರಸ್ಪರರನ್ನು ವಿನಿಮಯಿತ ಬೌದ್ಧ ಪರಂಪರೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮುಕ್ತ, ಸಮಗ್ರ ಮತ್ತು ನಿಯಮ ಆಧಾರಿತ ಜಾಗತಿಕ ಕ್ರಮದ ಬದ್ದತೆಯ ಸಮತಲೀಯ ಸದೃಶದ (ಪ್ರಿಸಂ) ಮೂಲಕ ನೋಡುತ್ತವೆ.
ಇಂದು, ಜಪಾನ್ ಭಾರತದಲ್ಲಿ ಅಗ್ರ ಹೂಡಿಕೆದಾರರಲ್ಲಿ ಒಂದಾಗಿದೆ. ಆದರೆ, ಹಲವು ಜಪಾನಿ ಕಂಪನಿಗಳು ಭಾರತದಲ್ಲಿ ಮನೆ ಮಾತಾಗಿದ್ದು, ಹಲವು ದಶಕಗಳಿಂದ ಭಾರತದ ಆರ್ಥಿಕ ಸಾಮರ್ಥ್ಯಕ್ಕೆ ಬದ್ಧವಾಗಿವೆ. ಟೋಕಿಯೋದಲ್ಲಿ, ನಾನು ನಮ್ಮ ವಾಣಿಜ್ಯ ಮತ್ತು ಹೂಡಿಕೆಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳಿಗಾಗಿ ಭಾರತ ಮತ್ತ ಜಪಾನ್ ನ ಉನ್ನತ ವಾಣಿಜ್ಯ ನಾಯಕರೊಂದಿಗೆ ಸವಿಸ್ತಾರವಾದ ಮಾತುಕತೆ ನಡೆಸಲಿದ್ದೇನೆ.
ಈ ಭೇಟಿಯ ವೇಳೆ, ಹಿಸ್ ಮೆಜೆಸ್ಟಿ ಚಕ್ರವರ್ತಿಯವರನ್ನು ಭೇಟಿ ಮಾಡುವ ಅವಕಾಶವನ್ನೂ ಪಡೆದಿದ್ದೇನೆ. ಮತ್ತು ಅಲ್ಲದೆ ನಾನು ನವೆಂಬರ್ 11ರಂದು ಪ್ರಧಾನಮಂತ್ರಿ ಶಿಂಜೋ ಅಬೆ ಅವರನ್ನು ಭೇಟಿ ಮಾಡುವಾಗ ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯ ಸಂಪೂರ್ಣ ಆಯಾಮಗಳ ಪರಾಮರ್ಶೆಯನ್ನೂ ಎದಿರು ನೋಡುತ್ತಿದ್ದೇನೆ.
ಮುಂಬೈ-ಅಹಮದಾಬಾದ್ ನಡುವೆ ನಿಯೋಜನೆಗೊಳ್ಳಲಿರುವ ಹೈ ಸ್ಪೀಡ್ ರೈಲ್ವೆ ತಂತ್ರಜ್ಞಾನದ ಪ್ರಸಿದ್ಧ ಶಿಂಕಾನ್ಸೆನ್ ನಲ್ಲಿ ನವೆಂಬರ್ 12ರಂದು, ಪ್ರಧಾನಮಂತ್ರಿ ಅಬೆ ಮತ್ತು ನಾನು ಕೋಬೆಗೆ ಪ್ರಯಾಣ ಮಾಡಲಿದ್ದೇವೆ. ನಾವಿಬ್ಬರೂ ತ್ವರಿತ ವೇಗದ ರೈಲುಗಳು ಉತ್ಪಾದನೆ ಆಗುವ ಕೋಬೆನಲ್ಲಿ ಕವಸಾಕಿ ಬೃಹತ್ ಕೈಗಾರಿಕೆಗೂ ಭೇಟಿ ನೀಡಲಿದ್ದೇನೆ.
ನಮ್ಮ ಸಹಕಾರ ಬಲಗೊಂಡಿರುವುದಕ್ಕೆ ಭಾರತ ಮತ್ತು ಜಪಾನ್ ನಡುವಿನ ಹೈಸ್ಪೀಡ್ ರೈಲ್ವೆ ಸಹಕಾರ ಒಂದು ಪ್ರಜ್ವಲ ಉದಾಹರಣೆಯಾಗಿದೆ. ಇದು ಕೇವಲ ನಮ್ಮ ವಾಣಿಜ್ಯ ಮತ್ತು ಹೂಡಿಕೆಯ ಬಾಂಧವ್ಯಗಳನ್ನಷ್ಟೇ ಉತ್ತೇಜಿಸುವುದಿಲ್ಲ, ಜೊತೆಗೆ ಭಾರತದಲ್ಲಿ ಇದು ಕೌಶಲದ ಉದ್ಯೋಗ ಸೃಷ್ಟಿಸುತ್ತದೆ ಹಾಗೂ ನಮ್ಮ ಮೂಲಸೌಕರ್ಯವನ್ನೂ ಸುಧಾರಣೆ ಮಾಡಲಿದೆ ಮತ್ತು ನಮ್ಮ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಸಹ ಚೈತನ್ಯ ತುಂಬಲಿದೆ.