ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಪ್ರವಾಸಿ ಭಾರತೀಯ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಥ ಕಾರ್ಯಕ್ರಮದ ಆಯೋಜನೆಗೆ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಮಂತ್ರಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮ ಜಯಂತಿಯ ಈ ದಿನ ಅತ್ಯಂತ ಸೂಕ್ತ ಎಂದು ಹೇಳಿದರು. ಮಹಾತ್ಮಾ ಗಾಂಧಿ ಅವರು ಭಾರತವನ್ನು ಬಿಟ್ಟು ಹೋಗಿದ್ದರು, ಆದರೆ, ದೇಶದ ಕರೆ ಅವರನ್ನು ಮತ್ತೆ ಮರಳಿ ಕರೆತಂತು ಎಂದರು.
ವಿದೇಶಗಳಲ್ಲಿರುವ ಭಾರತೀಯ ಸಮುದಾಯ ಕೇವಲ ತನ್ನ ಸಂಖ್ಯೆಯಿಂದ ಮಾತ್ರ ನೋಡಬಾರದು, ಬದಲಾಗಿ ಅದರ ಶಕ್ತಿಯಿಂದ ನೋಡಬೇಕು ಎಂದರು. ಹಲವು ವರುಷಗಳಿಂದ‘ಪ್ರತಿಭಾ ಪಲಾಯನ’ಎಂಬ ವಾಡಿಕೆ ಇದೆ. ಆದರೆ, ವಿದೇಶದಲ್ಲಿರುವ ಸಮುದಾಯದ ನಮ್ಮ ಶಕ್ತಿಯನ್ನು ನೋಡಿದರೆ ನಾವು ಇದನ್ನು‘ಪ್ರತಿಭಾ ಗಳಿಕೆ’(ಬ್ರೈನ್ ಗೈನ್) ಎಂದು ಪರಿವರ್ತಿಸಬಹುದು ಎಂದರು.
ಒಂದು ಕಾಲದಲ್ಲಿ ವಿಶ್ವ ಭಾರತದೊಂದಿಗೆ‘ಅಪರಿಚಿತ ಎಂಬ ಭೀತಿ’ಯಿಂದ ವ್ಯವಹರಿಸುತ್ತಿತ್ತು, ಇದು ದೊಡ್ಡ ಅಡ್ಡಿಯೂ ಆಗಿತ್ತು, ಇದರಿಂದ ಹೊರಬರಲು ಭಾರತೀಯ ಸಮುದಾಯ ನೆರವಾಯಿತು ಎಂದರು.
ಭಾರತೀಯ ಸಮುದಾಯದೊಂದಿಗೆ ನಂಟು ಹೊಂದುವ ಮಹತ್ವವನ್ನು ಪ್ರತಿಪಾದಿಸಿದ ಅವರು, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರವಾಸಿ ಭಾರತೀಯ ದಿವಸ್ ಎಂಬ ಕಲ್ಪನೆಯನ್ನು ಹುಟ್ಟು ಹಾಕಿದರು, ಅದನ್ನು ನಂತರದ ಸರ್ಕಾರಗಳು ಮುಂದುವರಿಸಿಕೊಂಡು ಬಂದಿವೆ ಎಂದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ ಅದರಲ್ಲೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಣನೀಯ ಮಾನವೀಯ ಕಾರ್ಯ ಮಾಡಿದೆ ಎಂದು ಪ್ರಧಾನಿ ಹೇಳಿದರು. ಸಂಘರ್ಷ ಮತ್ತು ಪ್ರಕೋಪದ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನಷ್ಟೇ ಅಲ್ಲ, ಹಲವು ಇತರ ರಾಷ್ಟ್ರಗಳ ಪ್ರಜೆಗಳನ್ನೂ ರಕ್ಷಿಸಲಾಗಿದೆ ಎಂದರು.
ಭಾರತವು ಎಂದಿಗೂ ಅನ್ಯ ರಾಷ್ಟ್ರದ ಮೇಲೆ ದಾಳಿ ಮಾಡಿಲ್ಲ ಎಂದು ಪ್ರಧಾನಿ ತಿಳಿಸಿದರು. ಎರಡು ವಿಶ್ವ ಯುದ್ಧಗಳ ಸಂದರ್ಭದಲ್ಲಿ ಭಾರತೀಯ ಯೋಧರು ವಿದೇಶೀ ನೆಲವನ್ನು ರಕ್ಷಿಸಲು ಮಾಡಿದ ತ್ಯಾಗವನ್ನು ಅವರು ಸ್ಮರಿಸಿದರು ಮತ್ತು ವಿಶ್ವ ಈ ತ್ಯಾಗ ಬಲಿದಾನವನ್ನು ಗುರುತಿಸಬೇಕು ಎಂದರು.
ಈ ಸಂದರ್ಭದಲ್ಲಿ,“ಗಾಂಧಿ – ಒಬ್ಬ ಪ್ರವಾಸಿ’ಎಂಬ ವಸ್ತು ಪ್ರದರ್ಶನಕ್ಕೂ ಪ್ರಧಾನಿ ಭೇಟಿ ನೀಡಿದರು. ಮಧುಮೇಹದ ನಿಯಂತ್ರಣಕ್ಕೆ ಯೋಗ ಶಿಷ್ಟಾಚಾರ (Yoga Protocol for Diabetes control) ಎಂಬ ಕೈಪಿಡಿಯನ್ನೂ ಅವರು ಬಿಡುಗಡೆ ಮಾಡಿದರು ಮತ್ತು‘ಭಾರತ ಅರಿಯಿರಿ’ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನೂ ವಿತರಿಸಿದರು.
We are inaugurating this Kendra on a significant day- 2nd October. Gandhi JI had left India but the call of the nation brought him back: PM
— PMO India (@PMOIndia) October 2, 2016
Let us view our diaspora not only in terms of 'Sankhya' but let us see it as 'Shakti.' : PM @narendramodi
— PMO India (@PMOIndia) October 2, 2016
World's keenness to engage with India has risen. In such times 'fear of unknown' can be an obstacle. Our diaspora can help overcome this: PM
— PMO India (@PMOIndia) October 2, 2016
Connecting with the diaspora is essential. Atal Ji started idea of PBD and it has been continued thereafter: PM @narendramodi
— PMO India (@PMOIndia) October 2, 2016
PM: In the last two years you have seen how the Government has rescued people from conflict situations, not just Indians but also foreigners
— Vikas Swarup (@MEAIndia) October 2, 2016
Through Yoga, can we overcome diabetes? Or control diabetes. Had spoken about it during the 2016 Yoga Day also: PM @narendramodi
— PMO India (@PMOIndia) October 2, 2016