ಲೋಕಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ , ಎನ್ ಡಿಎ ಸರ್ಕಾರದ ಗಮನ ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವುದು ಎಂದು ಹೇಳಿದ್ದಾರೆ.ಎನ್ ಡಿಎ ಸರ್ಕಾರದ ಅಡಿಯಲ್ಲಿ ರಸ್ತೆಗಳು ಹೇಗೆ ವೇಗದ ಗತಿಯಲ್ಲಿ ನಿರ್ಮಾಣಗೊಂಡವು ಎಂದು ಪ್ರಧಾನಿ ಮೋದಿ ಮಾತನಾಡಿದರು. ಹಿಂದೆ ಯುಪಿಎ ಸರ್ಕಾರದಡಿಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ಕೇವಲ 69 ಕೀಮೀ ರಸ್ತೆಗಳು ನಿರ್ಮಾಣವಾಗಿತ್ತು . ಆದರೆ ನಾವು ಅಧಿಕಾರ ವಹಿಸಿಕೊಂಡ ನಂತರ , 111 ಕಿಮೀ ರಸ್ತೆಗಳನ್ನು ನಿರ್ಮಿಸಿದೆವು ಮತ್ತು ಅದರ ಮ್ಯಾಪಿಂಗ್ ಮಾಡಲು ಇತ್ತೀಚಿನ ತಂತ್ರಜ್ಞಾನ ಬಳಸಲಾಗುತ್ತದೆ " ಎಂದು ಶ್ರೀ ಮೋದಿ ಹೇಳಿದರು”
Login or Register to add your comment