PM Modi meets members of the Club des Chefs des Chefs

ಕ್ಲಬ್ ಡೆಸ್ ಚೆಫ್ಸ್ ಡೆಸ್ ಚೆಫ್ಸ್ (ಪ್ರಪಂಚದಾದ್ಯಂತದ ಅಧ್ಯಕ್ಷೀಯ ಬಾಣಸಿಗರ ಕ್ಲಬ್) ಸದಸ್ಯರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.

ಈ ಕ್ಲಬ್ ನಲ್ಲಿ 24 ರಾಷ್ಟ್ರಗಳ ಮುಖ್ಯಸ್ಥರ ಖಾಸಗಿ ಬಾಣಸಿಗರು ಇದ್ದಾರೆ. ಇದನ್ನು ಅನೌಪಚಾರಿಕವಾಗಿ ವಿಶ್ವದ ಅತ್ಯಂತ ವಿಶೇಷ ಪಾಕಶಾಸ್ತ್ರಸಮಾಜ ಎಂದು ಕರೆಯಲಾಗುತ್ತದೆ.

ಪ್ಯಾರಿಸ್ ಮೂಲದ ಈ ಸಂಘಟನೆಯು ಇದೇ ಮೊದಲ ಬಾರಿಗೆ ಪ್ರಸ್ತುತ ಭಾರತದಲ್ಲಿ ತನ್ನ ಸಾಮಾನ್ಯ ಅಧಿವೇಶನವನ್ನು ಹಮ್ಮಿಕೊಂಡಿದೆ. ಬಾಣಸಿಗರು ದೆಹಲಿಯಷ್ಟೇ ಅಲ್ಲದೆ ಆಗ್ರಾ ಮತ್ತು ಜೈಪುರಕ್ಕೂ ಭೇಟಿ ನೀಡಲಿದ್ದಾರೆ.

ಈ ಕ್ಲಬ್ ನ ಸದಸ್ಯರಲ್ಲಿ ಭಾರತದ ರಾಷ್ಟ್ರಪತಿಯವರ ಮುಖ್ಯ ಬಾಣಸಿಗ ಶ್ರೀ ಮಂತು ಸೈನಿ; ಅಮೆರಿಕದ ಅಧ್ಯಕ್ಷರ ಮುಖ್ಯ ಬಾಣಸಿಗರಾದ ಶ್ರೀಮತಿ ಕ್ರಿಸ್ಟೇಟ ಕಮರ್ ಫೋರ್ಡ್; ಮತ್ತು ಯುನೈಟೆಡ್ ಕಿಂಗ್ಡಮ್ ನ ರಾಣಿಯವರ ಮುಖ್ಯ ಬಾಣಸಿಗರಾದ ಶ್ರೀ ಮಾರ್ಕ್ ಫ್ಲಾನಗನ್ ಮತ್ತು ಇತರರು ಸೇರಿದ್ದಾರೆ.

ಈ ಬಾಣಸಿಗರು, ಪ್ರಧಾನಮಂತ್ರಿಯವರೊಂದಿಗೆ ಗ್ರೂಪ್ ಪೋಟೋ ತೆಗೆಸಿಕೊಂಡರು ಮತ್ತು ಅವರಿಗೆ ಸ್ಮರಣಿಕೆ ನೀಡಿದರು.