PM Modi campaigns in Hardoi & Barabanki, urges people to elect a BJP Govt
SP, BSP and the Congress never thought welfare of people and always focused on political gains: PM
What is the reason that Uttar Pradesh tops the chart in the entire nation in crime rates? This must change: PM
Our Govt is committed to empower the poor: PM Modi

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಹರ್ದೋಯಿ ಮತ್ತು ಬಾರಾಬಂಕಿ ಜಿಲ್ಲೆಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ ಚುನಾವಣೆಯಲ್ಲಿ ಮೊದಲ ಎರಡು ಹಂತಗಳಲ್ಲಿ ದಾಖಲೆಯನ್ನು ಬದಲಾಯಿಸಿದಕ್ಕೆ ಜನರಿಗೆ ಧನ್ಯವಾದ ಹೇಳಿದರು . ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯಾದಾಗ ದೇಶ ಪ್ರಗತಿಯ ಪಥದಲ್ಲಿ ಚಲಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು .

ಸಮಾಜವಾದಿ ಪಕ್ಷ , ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಪಕ್ಷವನ್ನು ಉತ್ತರ ಪ್ರದೇಶದಿಂದ ತೆಗೆದು ಹಾಕದೆ , ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ . " ಸಮಾಜವಾದಿ ಪಕ್ಷ , ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಎಂದೂ ಜನರ ಕಲ್ಯಾಣಕ್ಕಾಗಿ ಯೋಚಿಸಿಲ್ಲ ಮತ್ತು ಅವರು ಯಾವಾಗಲೂ ರಾಜಕೀಯ ಲಾಭಕ್ಕಾಗಿ ಗಮನ ನೀಡಿದ್ದಾರೆ . ಇದು ಬದಲಾಗಬೇಕು " ಎಂದು ಶ್ರೀ ಮೋದಿ ಹೇಳಿದರು.”

ಸಮಾಜವಾದಿ ಪಕ್ಷದವನ್ನು ಟೀಕಿಸುತ್ತಾ , ರಾಜ್ಯದಲ್ಲಿ ಅಪರಾಧ ಪ್ರಮಾಣವು ನಿರಂತರವಾಗಿ ಏರುತ್ತಿದೆ ಎಂದು ಮೋದಿ ಹೇಳಿಕೆ ನೀಡಿದರು . " ರಾಜ್ಯ ಸರ್ಕಾರ ಏರುತ್ತಿರುವ ಅಪರಾಧ ಪ್ರಮಾಣ ಬಗ್ಗೆ ಗಮನಹರಿಸಿದೆಯೇ ? ಮಹಿಳೆಯರು ಕತ್ತಲೆಯ ನಂತರ ಮನೆಯಿಂದ ಹೊರಗೆ ಹೋಗುವುದು ಸುರಕ್ಷಿತವೆಂದು ಭಾವಿಸುವುದಿಲ್ಲ . ಪ್ರಾಮಾಣಿಕ ಜನರ ಶೋಷಣೆಯಾಗುತ್ತಿದೆ . ಅಪರಾಧ ದರಗಳ ರಾಷ್ಟ್ರದ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೇಲ್ತುದಿಯಲ್ಲಿದೆ . ಆರ್ಮ್ಸ್ ಆಕ್ಟ್ ಸಂಬಂಧಿಸಿದ ಪ್ರಕರಣಗಳಲ್ಲಿ 50 ಶೇಕಡಾ ಪ್ರಕರಣಗಳು ಕೇವಲ ಉತ್ತರ ಪ್ರದೇಶಕ್ಕೆ ಸಂಬಂಧಿಸಿದೆ " ಎಂದು ಹೇಳಿದರು ”

ಬಿಜೆಪಿ ಅಧಿಕಾರಕ್ಕೆ ಬಂದರೆ , ಸಣ್ಣ ವ್ಯಾಪಾರಿಗಳ ಪ್ರಯೋಜನಕ್ಕಾಗಿ ವಿಶ್ವಕರ್ಮ ಶ್ರಮ ಸಮ್ಮಾನ ಯೋಜನೆಯನ್ನು ಪ್ರಾರಂಭಿಸುತ್ತದೆ ಮತ್ತು ವ್ಯಾಪಾರ ಕಲ್ಯಾಣ ಯೋಜನೆ ಬಗ್ಗೆ ಶ್ರೀ ಮೋದಿ ಮಾತನಾಡಿದರು . ಹಿಂದಿನ ಸರ್ಕಾರ ರಸಗೊಬ್ಬರಗಳ ದರವನ್ನು ಕಡಿಮೆ ಮಾಡಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ . ಚೌಧರಿ ಚರಣ್ ಸಿಂಗ್ ಜಿ ಇದ್ದಾಗ , ಅವರು ಗೊಬ್ಬರಗಳ ಬೆಳೆಯನ್ನು ಕಡಿಮೆ ಮಾಡಿದ್ದರು . ಅವರಿಂದ ಸ್ಫೂರ್ತಿಗೊಂಡು ಮತ್ತು ರೈತರ ಕಲ್ಯಾಣಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ, ನಾವು ರಸಗೊಬ್ಬರಗಳ ದರವನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದ್ದೇವೆ . ಯಾವುದೇ ಇತರ ಪಕ್ಷ ಇಂತಹ ಕ್ರಮಗಳನ್ನು ಕೈಗೊಂಡಿಲ್ಲ " ಎಂದು ಒತ್ತಿ ಹೇಳಿದರು”

ಯೂರಿಯಾ ನೀಮ್ ಕೋಟಿಂಗ್ ಮೂಲಕ ಹೇಗೆ ಹಲವಾರು ಗೋಧಿ ಬೆಳೆಸುವ ರೈತರಿಗೆ ಪ್ರಯೋಜನವಾಯಿತು ಎಂದು ಶ್ರೀ ಮೋದಿ ಸುದೀರ್ಘವಾಗಿ ಮಾತನಾಡಿದರು . ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಿವಿಧ ಅಂಶಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು . ಇದು ಅತ್ಯಂತ ಸಮಗ್ರ ಬೆಳೆ ವಿಮಾ ಯೋಜನೆಯಾಗಿದೆ ಎಂದೂ ಹೇಳಿದರು.

ಯೂರಿಯಾ ನೀಮ್ ಕೋಟಿಂಗ್ ಮೂಲಕ ಹೇಗೆ ಹಲವಾರು ಗೋಧಿ ಬೆಳೆಸುವ ರೈತರಿಗೆ ಪ್ರಯೋಜನವಾಯಿತು ಎಂದು ಶ್ರೀ ಮೋದಿ ಸುದೀರ್ಘವಾಗಿ ಮಾತನಾಡಿದರು . ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಿವಿಧ ಅಂಶಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು . ಇದು ಅತ್ಯಂತ ಸಮಗ್ರ ಬೆಳೆ ವಿಮಾ ಯೋಜನೆಯಾಗಿದೆ ಎಂದೂ ಹೇಳಿದರು”

ಬಡವರ ಸಬಲೀಕರಣಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು ." ಸಮಾಜದಿಂದ ಭ್ರಷ್ಟಾಚಾರವನ್ನು ತೆಗೆದುಹಾಕಿದಾಗ ಮಾತ್ರ ಬಡವರ ಸಬಲೀಕರಣ ಸಾಧ್ಯ ". ಎಂದು ಶ್ರೀ ಮೋದಿ ಹೇಳಿಕೆ ನೀಡಿದರು . " ಕೇಂದ್ರ ಸರ್ಕಾರ ಸ್ಟೆಂಟ್ ದರವನ್ನು ಕಡಿಮೆ ಮಾಡಿದೆ , ಇದು ನೇರವಾಗಿ ಜನರ ಚಿಕಿತ್ಸೆ ಬೆಳೆಯನ್ನು ಕಡಿಮೆ ಮಾಡಲಿದೆ " ಎಂದು ಪ್ರಧಾನ ಮಂತ್ರಿ ಹೇಳಿದರು.

ಶ್ರೀ ಮೋದಿ ಬಿಜೆಪಿಗಾಗಿ ಮತ ನೀಡಲು ಹೇಳಿದರು ಮತ್ತು ಈ ಚುನಾವಣೆ ಉತ್ತರ ಪ್ರದೇಶದ ಅದೃಷ್ಟವನ್ನು ಬದಲಾಯಿಸಲಿದೆ ಎಂದು ಹೇಳಿದರು . ಪಕ್ಷದ ಹಲವಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು .

ಹರ್ದೋಯಿ ಭಾಷಣದ  ಪೂರ್ಣ ಪಠ್ಯ ವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ