Yoga is a code to connect people with life, and to reconnect mankind with nature: PM Modi
By practicing Yoga, a spirit of oneness is created – oneness of the mind, body and the intellect: PM
Yoga makes the individual a better person in thought, action, knowledge and devotion: Shri Modi
There is ample evidence that practicing yoga helps combat stress and chronic lifestyle-related conditions: PM Modi
Through Yoga, we will create a new Yuga – a Yuga of togetherness and harmony: PM Modi
Yoga is not about what one can get out of it. It is rather about what one can give up, what one can get rid of: PM
Through the Swachh Bharat Mission, we are attempting to establish the link between community hygiene and personal health: PM

ಸ್ವಾಮಿ ಚಿದಾನಂದ ಸರಸ್ವತಿ ಜೀ,

ಶಂಕರಾಚಾರ್ಯ ದಿವ್ಯಾನಂದ ತೀರ್ಥ ಜೀ ಮಹಾರಾಜ್,

ಸ್ವಾಮಿ ಅಸಂಗನಂದ ಸರಸ್ವತಿ ಜೀ,

ಸಾಧ್ವಿ ಭಗವತಿ ಸರಸ್ವತಿ ಜೀ,

ಶ್ರೀಗಳೇ, ಆಚಾರ್ಯರೇ, ಸ್ನೇಹಿತರೇ,

ನಾನು ಅಂತಾರಾಷ್ಟ್ರೀಯ ಯೋಗ ಉತ್ಸವದಲ್ಲಿ ವಿಡಿಯೋ ಸಂವಾದದ ಮೂಲಕ ಇಂದು ನಿಮ್ಮೊಂದಿಗೆ ಸೇರುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ.

ನಾನು ಮಾತು ಆರಂಭಿಸುವ ಮುನ್ನ, ನಾನು ಭಾರತದಲ್ಲಿ ನಮ್ಮ ವಿಜ್ಞಾನಿಗಳು ಮಾಡಿದ ಅದ್ಭುತವಾದ ಇತ್ತೀಚಿನ ಕೆಲವು ಸಾಧನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಕಳೆದ ತಿಂಗಳು, ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಒಂದು ವಿಶಿಷ್ಟ ದಾಖಲೆಯನ್ನೇ ಮಾಡಿದ್ದಾರೆ.

ಒಂದೇ ರಾಕೆಟ್ ಉಡಾವಣೆಯ ಮೂಲಕ ಏಕಕಾಲದಲ್ಲಿ 104 ಉಪಗ್ರಹಗಳನ್ನು ಅವರು ಕಳುಹಿಸಿದ್ದಾರೆ.

ಇವುಗಳಲ್ಲಿ 101 ಉಪಗ್ರಹಗಳು ಯು.ಎಸ್.ಎ., ಇಸ್ರೇಲ್, ಸ್ವಿಟ್ಜರ್ ಲ್ಯಾಂಡ್, ನೆದರ್ ಲ್ಯಾಂಡ್ಸ್, ಕಜಕಿಸ್ತಾನ್ ಮತ್ತು ಯುಎ.ಇ.ಗಳಿಗೆ ಸೇರಿದವುಗಳಾಗಿವೆ.

ನಮ್ಮ ರಕ್ಷಣಾ ವಿಜ್ಞಾನಿಗಳು ಕೂಡ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಕಳೆದ ಫೆಬ್ರವರಿ 11ರಂದು ಅತಿ ಎತ್ತರದ ಪ್ರದೇಶದಲ್ಲಿ ಖಂಡಾಂತರ ಕ್ಷಿಪಣಿಗಳನ್ನು ತಡೆಯಬಲ್ಲ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ, ಇದು ಕ್ಷಿಪಣಿ ದಾಳಿಯಿಂದ ನಮ್ಮ ನಗರಗಳಿಗೆ ಸಮರ್ಥವಾದ ರಕ್ಷಣೆಯನ್ನು ಒದಗಿಸುತ್ತದೆ.

ತಳಮಟ್ಟದ ಪ್ರದೇಶದಲ್ಲಿ ಕೂಡ ಕ್ಷಿಪಣಿಯನ್ನು ಭೇದಿಸುವ ಯಶಸ್ವೀ ಪರೀಕ್ಷಾರ್ಥ ಪ್ರಯೋಗದೊಂದಿಗೆ ಅವರು ನಿನ್ನೆ ತಮ್ಮ ಮುಕುಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ.

ಇಂಥ ಸಾಮರ್ಥ್ಯವನ್ನು ವಿಶ್ವದ ಕೇವಲ ನಾಲ್ಕು ರಾಷ್ಟ್ರಗಳು ಮಾತ್ರ ಹೊಂದಿವೆ.

ನಾನು ಬಾಹ್ಯಾಕಾಶ ಮತ್ತು ರಕ್ಷಣಾ ವಿಜ್ಞಾನಿಗಳ ಸಾಧನೆಗೆ ಅವರನ್ನು ಅಭಿನಂದಿಸುತ್ತೇನೆ.

हमारे अंतिरक्ष और रक्षा वैज्ञानिकों की उपलब्धियों ने भारत की प्रतिष्ठा को पूरे विश्व में ऊंचा किया है।

ಮಹಿಳೆಯರೇ ಮತ್ತು ಮಹನೀಯರೇ,

ನಾವು ಭಾರತೀಯರು ವಿಜ್ಞಾನ ಮತ್ತು ತಂತ್ರಜ್ಞಾನದ ಎರಡೂ ಕ್ಷೇತ್ರದಲ್ಲಿನ ಸಂಶೋಧನೆಯಲ್ಲಿ ಜೊತೆಗೆ ನಮ್ಮ ಆತ್ಮದಲ್ಲಿ ಕೂಡ ವಿಜ್ಞಾನ ಮತ್ತು ಯೋಗದ ಆಳವಾದ ಸಂಶೋಧನೆಯಲ್ಲಿ  ನಂಬಿಕೆ ಇಟ್ಟಿದ್ದೇವೆ.

ಅಂತಾರಾಷ್ಟ್ರೀಯ ಯೋಗ ಉತ್ಸವದ ಆಯೋಜನೆಗೆ  ಋಷಿಕೇಶಕ್ಕಿಂತಲೂ ಉತ್ತಮವಾದ ತಾಣ ಬಹುಶಃ ಮತ್ತೊಂದು ಇರಲಾರದು.

ಈ ತಾಣ ಋಷಿಗಳು, ಯಾತ್ರಿಕರು, ಸಾಮಾನ್ಯರು ಮತ್ತು ಪ್ರಸಿದ್ಧರನ್ನಷ್ಟೇ ಅಲ್ಲದೆ, ಸಹಸ್ರಮಾನಗಳಿಂದ, ಶಾಂತಿಯ ಅನ್ವೇಷಣೆಯಲ್ಲಿರುವವರನ್ನೂ ತನ್ನತ್ತ ಸೆಳೆದಿದೆ, ಇದು ಯೋಗದ ನಿಜವಾದ ತಿರುಳಾಗಿದೆ.

ಗಂಗಾನದಿಯ ತೀರದಲ್ಲಿರುವ ಋಷಿಕೇಶಕ್ಕೆ ಜಗತ್ತಿನ ವಿವಿಧ ಸ್ಥಳಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿರುವ ವೈವಿಧ್ಯಮಯ ಸಭೆಯನ್ನು ನೋಡಿದಾಗ, ನನ್ನ ಚಿಂತನೆಗಳು, ಜರ್ಮನಿಯ ವಿದ್ವಾಂಸ ಮ್ಯಾಕ್ಸ್ ಮುಲ್ಲರ್ ನತ್ತ ಹೊರಳುತ್ತವೆ. ಅವರು ಹೀಗೆ ಹೇಳುತ್ತಾರೆ:

“If I were asked under what sky the human mind has most fully developed some of its choicest gifts, has most deeply pondered on the greatest problems of life, and has found solutions, I should point to India.”

ಮ್ಯಾಕ್ಸ್ ಮುಲ್ಲರ್ ನಿಂದ ಇಂದು ಋಷಿಕೇಶದಲ್ಲಿ ಉಪಸ್ಥಿತರಿರುವ ನಿಮ್ಮಲ್ಲಿ ಹಲವರು, – ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಕಂಡಿರುವರೇ ಆಗಿದ್ದೀರಿ-  ಯಾವುದೇ ಸಂದರ್ಭದಲ್ಲಿ ಯಾರಿಗೇ ಆತ್ಮದ ಆಂತರ್ಯ ಅರಿಯುವ ಬಯಕೆಯಾದಾಗ ಅದಕ್ಕೆ ಭಾರತ ನಿಜವಾದ ಗಮ್ಯಸ್ಥಾನವಾಗುತ್ತದೆ.

 

ಹಲವು ಪ್ರಕರಣಗಳಲ್ಲಿ, ಆ ಬಯಕೆ ಅವರನ್ನು ಯೋಗದತ್ತ ಕರೆತರುತ್ತದೆ.

ಯೋಗ, ಜನರನ್ನು ಬದುಕಿನೊಂದಿಗೆ ಬೆಸೆಯುವ ಮತ್ತು ಪ್ರಕೃತಿಯೊಂದಿಗೆ ಮನುಕುಲವನ್ನು ಮರುಬೆಸೆಯುವ ಸಂಕೇತವಾಗಿದೆ.

ಅದು ನಮ್ಮ ಕುಟುಂಬ, ಸಮಾಜ ಮತ್ತು ಮನುಕುಲವನ್ನು ಸೀಮಿತವಾಗಿ ನೋಡುವ ನಮ್ಮ ಜ್ಞಾನವನ್ನು ವಿಸ್ತರಿಸುತ್ತದೆ ಮತ್ತು ನಮ್ಮ ಆತ್ಮ ವಿಸ್ತಾರವೂ ಆಗುತ್ತದೆ.

ಹೀಗಾಗಿಯೇ ಸ್ವಾಮಿ ವಿವೇಕಾನಂದರು ಹೇಳಿದ್ದು, “ವಿಸ್ತರಣೆಯೇ ಬದುಕು, ಸಂಕುಚಿತತ್ವವೇ ಸಾವು.”

ಯೋಗಾಭ್ಯಾಸ ಮಾಡುವುದರಿಂದ, ಏಕತ್ವದ ಸ್ಫೂರ್ತಿ ಹುಟ್ಟುತ್ತದೆ –  ಮನಸ್ಸಿನ, ದೇಹದ ಮತ್ತು ಬುದ್ಧಿಮತ್ತೆಯ ಏಕತ್ವ.

ನಮ್ಮ ಕುಟುಂಬದೊಂದಿಗೆ, ನಾವು ಬದುಕುವ ಸಮಾಜದೊಂದಿಗೆ, ನಮ್ಮ ಸಹ ಮನುಜರೊಂದಿಗೆ, ಎಲ್ಲ ಪಶುಪಕ್ಷಿಗಳೊಂದಿಗೆ ಮತ್ತು ಮರಗಳೊಂದಿಗೆ ಈ ಸುಂದರ ಭೂಗ್ರಹದಲ್ಲಿ ನಾವು ಯಾರೊಂದಿಗೆ ಹಂಚಿಕೊಳ್ಳಬಯಸುತ್ತೇವೋ ಅವರೊಂದಿಗೆ – ಒಮ್ಮತ ಮೂಡುವುದು – ಈ ಯೋಗದಿಂದ.

ನಾನು ಎನ್ನುವುದರಿಂದ ನಾವು ಎನ್ನುವೆಡೆಯ ಪಯಣವೇ ಯೋಗ.

व्यक्ति से समष्टि तक ये यात्रा है। मैं से हम तक की यह अनुभूति, अहम से वयम तक का यह भाव-विस्तार, यही तो योग है।

ಈ ಪಯಣ, ಸ್ವಾಭಾವಿಕ ಉಪ ಉತ್ಪನ್ನ, ಇದು ಉತ್ತಮ ಆರೋಗ್ಯ, ಮನಸ್ಸಿಗೆ ಶಾಂತಿ ಮತ್ತು ಜೊತೆಗೆ ಬದುಕಿನಲ್ಲಿ ಸಮೃದ್ಧಿಯನ್ನು ತರುತ್ತದೆ.

ಯೋಗ ವ್ಯಕ್ತಿಯನ್ನು, ಆತನ ಚಿಂತನೆ, ಕ್ರಿಯೆ, ಜ್ಞಾನ ಮತ್ತು ಭಕ್ತಿಯಲ್ಲಿ  ಉತ್ತಮ ವ್ಯಕ್ತಿಯಾಗಿ ಮಾಡುತ್ತದೆ.

ಯೋಗವನ್ನು ಕೇವಲ ದೇಹವನ್ನು ಗಟ್ಟಿಮುಟ್ಟಾಗಿಡುವ ವ್ಯಾಯಾಮದ ಒಂದು ಗುಂಪು ಎಂದು ನೋಡುವುದು ನ್ಯಾಯೋಚಿತವಲ್ಲ.

ಯೋಗ, ದೈಹಿಕ ವ್ಯಾಯಾಮಕ್ಕಿಂದ ಮೀರಿದ್ದಾಗಿದೆ.

ಆಧುನಿಕ ಬದುಕಿನ ಒತ್ತಡದಿಂದ ಹೊರಬರುವ ಬಯಕೆ, ಕೆಲವೊಮ್ಮೆ ಜನರನ್ನು ತಂಬಾಕು, ಮದ್ಯ ಅಥವಾ ಮಾದಕದ್ರವ್ಯದತ್ತ ಕರೆದೊಯ್ಯುತ್ತಿದೆ.

ಯೋಗ ಕಾಲಾತೀತ, ಸರಳ ಮತ್ತು ಆರೋಗ್ಯಪೂರ್ಣ ಪರ್ಯಾಯ ಒದಗಿಸುತ್ತದೆ. ಒತ್ತಡದಿಂದ ಮತ್ತು ದೀರ್ಘಕಾಲೀನ ಜೀವನ ಶೈಲಿಯ ಸಂಬಂಧಿಸಿದ ಸ್ಥಿತಿಯಿಂದ ಹೊರಬರಲು ಯೋಗಾಭ್ಯಾಸ ಸಹಕಾರಿ ಎಂಬುದು ಹಲವು ಸಾಕ್ಷಿಗಳು ಸಿಗುತ್ತವೆ.

ಇಂದು ವಿಶ್ವ ಅವಳಿ ಭೀತಿಯ ಸವಾಲು ಎದುರಿಸುತ್ತಿದೆ – ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ.

ಈ ಸಮಸ್ಯೆಗಳಿಗೆ ದೀರ್ಘಕಾಲೀನ ಮತ್ತು ಸುಸ್ಥಿರ ಪರಿಹಾರಕ್ಕಾಗಿ ಈಗ ವಿಶ್ವ ಭಾರತ ಮತ್ತು ಯೋಗದತ್ತ ನೋಡುತ್ತಿದೆ.

ನಾವು ಯಾವಾಗ ಜಾಗತಿಕ ಶಾಂತಿಯ ಬಗ್ಗೆ ಮಾತನಾಡುತ್ತೇವೋ, ಆಗ ರಾಷ್ಟ್ರಗಳ ನಡುವೆ ಶಾಂತಿ ಇರಬೇಕು. ಆಗ ಮಾತ್ರವೇ ಸಮಾಜದಲ್ಲಿ ಶಾಂತಿ ಇರಲು ಸಾಧ್ಯ. ಶಾಂತಿಯುತ ಕುಟುಂಬಗಳು ಮಾತ್ರವೇ ಶಾಂತಿಯುತ ಸಮಾಜ ಸ್ಥಾಪಿಸಲು ಸಾಧ್ಯ. ಕೇವಲ ಶಾಂತಿಯುವ ವ್ಯಕ್ತಿಗಳು ಮಾತ್ರ ಶಾಂತಿಯುತ ಕುಟುಂಬ ರೂಪಿಸಲು ಸಾಧ್ಯ. ವ್ಯಕ್ತಿಗಳಲ್ಲಿ, ಕುಟುಂಬದಲ್ಲಿ, ಸಮಾಜದಲ್ಲಿ, ರಾಷ್ಟ್ರದಲ್ಲಿ ಮತ್ತು ಅಂತಿಮವಾಗಿ ವಿಶ್ವದಲ್ಲಿ ಅಂಥ ಶಾಂತಿ ಮತ್ತು ಸೌಹಾರ್ದತೆಯನ್ನು ಯೋಗ ಮಾತ್ರವೇ ಸೃಷ್ಟಿಸಬಲ್ಲದು.

ಯೋಗದಿಂದ ನಾವು ಹೊಸ ಯುಗವನ್ನೇ ಸೃಷ್ಟಿಸಬಹುದು – ಏಕಮತ್ಯದ ಮತ್ತು ಸೌಹಾರ್ದಯುತ ಯುಗ.

ನಾವು ಹವಾಮಾನ ಬದಲಾವಣೆ ಬಗ್ಗೆ ಮಾತನಾಡಿದಾಗ, ನಾವು ಬಳಕೆಯ ಜೀವನಶೈಲಿಯಿಂದ ದೂರ ಸರಿಯಬೇಕು ಅಥವಾ ಭೋಗದಿಂದ ಯೋಗದತ್ತ ಬರಬೇಕು.

ಶಿಸ್ತಿನ ಜೀವನ ಮತ್ತು ಅಭಿವೃದ್ಧಿಗೆ ಯೋಗ ಬಲವಾದ ಆಧಾರ ಒದಗಿಸುತ್ತದೆ.

ಏಕ ಕಾಲದಲ್ಲಿ ಸ್ವಹಿತ ಮತ್ತು ಯಾವುದೇ ಪ್ರಯತ್ನದಿಂದ ಏನು ಸಿಗುತ್ತದೆ ಎಂಬುದಕ್ಕಷ್ಟೇ ನಾವು ಒತ್ತು ನೀಡಿದಾಗ, ಯೋಗ ಮನಸ್ಸು ಹರ್ಷದಾಯಕಗೊಳಿಸಿ ಹೊಸ ಆಲೋಚನೆ ಮೂಡಿಸುತ್ತದೆ.

ಯೋಗ ಯಾರಿಗೆ ಅದರಿಂದ ಏನು ಸಿಗುತ್ತದೆ ಎಂಬುದಲ್ಲ, ಯೋಗ ಒಬ್ಬರು ಏನನ್ನು ಬಿಡುತ್ತಾರೆ, ಯಾರು ಯಾವುದರಿಂದ ದೂರವಾಗುತ್ತಾರೆ ಎಂಬುದಾಗಿದೆ.

ಹೀಗಾಗಿ ಗಳಿಕೆಯ ಬದಲಾಗಿ, ಯೋಗವು ನಮಗೆ ಈ ಜಗತ್ತಿನಲ್ಲಿ ನಾವು ಕರೆಯುವ ವಿಮೋಚನೆ ಅಥವಾ ಮುಕ್ತಿಯ ಮಾರ್ಗ ತೋರುತ್ತದೆ,

ಸ್ವಾಮಿ ಚಿದಾನಂದ ಸರಸ್ವತಿ ಜೀ, ತಮ್ಮ ಪಾರಮಾರ್ಥ ನಿಕೇತನದ ಕಾರ್ಯದ ಮೂಲಕ ಈ ಶ್ರೇಷ್ಠ ಮಾದರಿಗಳೊಂದಿಗೆ ಬದುಕುವ ಮಾರ್ಗ ತೋರಿದ್ದಾರೆ.

ವಿಶ್ವದಾದ್ಯಂತ ಇರುವ ಜನರಿಗೆ ಯೋಗ ತಲುಪಿಸುವ ಪಾರಮಾರ್ಥ ನಿಕೇತನದ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ.

ಹಿಂದುತ್ವ ಕುರಿತ 11 ಸಂಪುಟಗಳ ವಿಶ್ವಕೋಶ ಸಂಪಾದನೆಯಲ್ಲಿ ಸ್ವಾಮೀಜಿ ಅವರ ಸಕ್ರಿಯ ಪಾತ್ರವನ್ನು ನಾನು ಸ್ಮರಿಸುತ್ತೇನೆ.

ಸ್ವಾಮೀಜಿ ಮತ್ತು ಅವರ ತಂಡ, ಈ ಅಭಿಯಾನವನ್ನು ಕೈಗೊಂಡು ಕಾಲು ಶತಮಾನಕ್ಕಿಂತ ಕಡಿಮೆ ಅವಧಿಯಲ್ಲಿ ಮಾಡಿದ್ದಾರೆ. ಈ ಕಾರ್ಯದ ಆಳ ಅಮೋಘವಾದ್ದಾಗಿದೆ. 11 ಸಂಪುಟಗಳಲ್ಲಿ ಅವರು ಬಹುತೇಕ ಎಲ್ಲ ಹಿಂದುತ್ವದ ಅಂಶಗಳನ್ನೂ ಸೇರಿಸುವಲ್ಲಿ ಶಕ್ತರಾಗಿದ್ದಾರೆ.

ಇದು ಆಧ್ಯಾತ್ಮಿಕ ಅನ್ವೇಷಿಕರಿಗೆ, ಯೋಗಿ, ಮತ್ತು ಒಂದು ಸಾಮಾನ್ಯನಿಗೆ ಕೂಡ ಉಪಯುಕ್ತಕವಾಗಿದೆ.

ಹಿಂದು ಧರ್ಮದ ವಿಶ್ವಕೋಶದಂಥ ಕಾರ್ಯ, ವಿವಿಧ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಿದರೆ, ದೇಶದ ಒಳಗೆ ಇತರ ಸಂಪ್ರದಾಯ, ಸಂಸ್ಕೃತಿಯ ನಡುವೆಯೇ ಇದು ತಿಳಿವಳಿಕೆ ಮತ್ತು ಅರಿವನ್ನು ಹೆಚ್ಚಿಸುತ್ತದೆ.

ಈ ಹೆಚ್ಚಿನ ಅರಿವು, ತಿಳಿವಳಿಕೆ ಸಮುದಾಯಗಳ ನಡುವೆ ದ್ವೇಷ, ತಪ್ಪು ಗ್ರಹಿಕೆ ತಗ್ಗಿಸಿ, ಸಹಕಾರ, ಶಾಂತಿ ಮತ್ತು ಸೌಹಾರ್ದತೆ ಹೆಚ್ಚಿಸುತ್ತದೆ.

ಸ್ವಚ್ಛ ಭಾರತ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸಿದ ಪಾರಮಾರ್ಥ ನಿಕೇತನವನ್ನು ನಾನು ಅಭಿನಂದಿಸಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತೇನೆ.

ಭಾರತೀಯ ಸಂಪ್ರದಾಯಗಳು, ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತವೆ. ಇದು ಕೇವಲ ವ್ಯಕ್ತಿಯ ಶರೀರವನ್ನು ಮಾತ್ರ ಶುದ್ಧಿಯಾಗಿಟ್ಟುಕೊಳ್ಳುವುದಲ್ಲ, ಆದರೆ, ಒಬ್ಬರ ಮನೆ, ಕಾರ್ಯಕ್ಷೇತ್ರ ಮತ್ತು ಆರಾಧನೆಯ ಸ್ಥಳಗಳ ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡುತ್ತದೆ.

ಯಾವುದೇ ಸ್ವರೂಪದ ತ್ಯಾಜ್ಯದ ಸಂಗ್ರಹಣೆ ಅಥವಾ ನಾಲ್ಕು ಗೋಡೆಗಳ ಮಧ್ಯೆ ಕೊಳೆ ಸೇರಿದರೆ, ಈ ಸ್ಥಳಗಳು ಅಶುಚಿ ಎಂದು ಪರಿಗಣಿತವಾಗುತ್ತವೆ.

ನಮ್ಮ ಪುರಾತನ ಪುರಾಣಗಳಲ್ಲಿ ಕೂಡ ಈ ವೈಯಕ್ತಿಕ ಶುಚಿತ್ವದ ಮಹತ್ವ ಹೇಳಲಾಗಿದೆ.

ಆದಾಗ್ಯೂ ಇಂದಿಗೂ, ಮುಕ್ತ ಸ್ಥಳಗಳಲ್ಲಿ ತ್ಯಾಜ್ಯವನ್ನು ಸುರಿಯುವ ಪ್ರವೃತ್ತಿ ಮುಂದುವರಿದಿದೆ.

ಇದು ಪಾಶ್ಚಿಮಾತ್ಯ ಮತ್ತು ಇತರ ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ಸತ್ಯವಲ್ಲ. ಅಲ್ಲಿ ಸಮುದಾಯ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಇದೆ.

ಸಾರ್ವಜನಿಕ ಬಳಕೆಯ ಜಲಾಶ್ರಯಗಳು, ಭೂಮಿ ಮತ್ತು ಗಾಳಿಯ ಶುದ್ಧೀಕರಣದ ಅರಿವು ಮತ್ತು ಪಾಲನೆ ಅತ್ಯಂತ ಮುಖ್ಯ.

ಹೀಗಾಗಿ, ಉತ್ತಮ ಆರೋಗ್ಯವು ವೈಯಕ್ತಿಕ ಉತ್ತಮ ಕಾರ್ಯ ಮತ್ತು ಪರಿಸರದ ಉತ್ತಮಿಕೆಯ ಸಂಘಟಿತ ಪ್ರಯತ್ನದಲ್ಲಿದೆ.

ಸ್ವಚ್ಛ ಭಾರತ ಅಭಿಯಾನದ ಮೂಲಕ, ನಾವು, ಸಮುದಾಯದ ಶುಚಿತ್ವ ಮತ್ತು ವೈಯಕ್ತಿಕ ಆರೋಗ್ಯಕ್ಕೆ ನಂಟು ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ.

ಐತಿಹಾಸಿಕವಾಗಿ ದೇವಾಲಯಗಳು ನಮ್ಮ ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಸಾಮಾನ್ಯವಾಗಿ ಅವು ವಿಶಾಲವಾದ ಜಾಗದಲ್ಲಿ ಕಟ್ಟಲ್ಪಟ್ಟಿರುತ್ತವೆ ಮತ್ತು ವಸತಿ ಪ್ರದೇಶದಿಂದ ದೂರವೇ ಇರುತ್ತವೆ.

ಆದಾಗ್ಯೂ, ಕಾಲಾನಂತರದಲ್ಲಿ ಅವುಗಳ ಸುತ್ತ ಮಾರುಕಟ್ಟೆ ಮತ್ತು ವಸತಿ ಬಡಾವಣೆಗಳು ಬರುತ್ತವೆ. ಮತ್ತು ಅವು ಅಶುದ್ಧ ಪರಿಸರದಿಂದ ಕೂಡಿ ದೊಡ್ಡ ಸವಾಲು ಎದುರಿಸುತ್ತವೆ.

ಸ್ವಚ್ಛ ಭಾರತ ಅಭಿಯಾನ, ಈ ಸಮಸ್ಯೆ ಎದುರಿಸಲು ಈಗ ಸಾಂಪ್ರದಾಯಿಕ ತಾಣಗಳ ಸ್ವಚ್ಛತೆಯನ್ನೂ ಸೇರಿಸಿಕೊಂಡಿದೆ.

ಮೊದಲ ಹಂತದಲ್ಲಿ, ನಾವು ಕಾಮಾಕ್ಯ ದೇವಾಲಯ, ಜಗನ್ನಾಥಪುರಿ, ಮೀನಾಕ್ಷಿ ದೇವಾಲಯ, ತಿರುಪತಿ, ಸ್ವರ್ಣ ಮಂದಿರ ಮತ್ತು ವೈಷ್ಣೋದೇವಿ ದೇವಾಲಯಗಳನ್ನು ತೆಗೆದುಕೊಂಡಿದ್ದು, ಅವುಗಳ ಪರಿಸರವನ್ನು ಪರಿಶುದ್ಧವಾಗಿಡುವ ಕಾರ್ಯ ಮಾಡುತ್ತಿದ್ದೇವೆ.

ಆದ ಕಾರಣ, ಸ್ವಚ್ಛ ಭಾರತ ಅಭಿಯಾನ – ಭಾರತವನ್ನು ಶುದ್ಧೀಕರಿಸುವ ಬಯಕೆ, ದೇಶದ ನಂಬಿಕೆ ಮತ್ತು ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಿತವಾಗಿದೆ.

ನಾನು, ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಸ್ತಾಪ ಮಂಡಿಸಿದಾಗ, 2014ರ ಸೆಪ್ಟೆಂಬರ್ ನಲ್ಲಿ ಜಾಗತಿಕವಾಗಿ ಯೋಗಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದನ್ನು ನೀವೆಲ್ಲರೂ ಗಮನಿಸಿದ್ದೀರಿ.

ಅದಕ್ಕೆ ದೊರಕಿದ ಸ್ವಯಂಪ್ರೇರಿತವಾದ ಬೆಂಬಲವನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.

ಅಭೂತಪೂರ್ವವಾಗಿ, ವಿಶ್ವಾದ್ಯಂತದ ಹಲವಾರು ದೇಶಗಳು ನಮ್ಮೊಂದಿಗೆ ಕೈ ಜೋಡಿಸಿದವು.

ಈಗ, ಪ್ರತಿ ವರ್ಷ ಜೂನ್ 21ರಂದು ಇಡೀ ವಿಶ್ವವೇ ಯೋಗಕ್ಕಾಗಿ ಒಗ್ಗೂಡುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಹಲವಾರು ದೇಶಗಳು ಒಟ್ಟಿಗೆ ಬರುವುದು, ಯೋಗದ ನೈಜ ಸಾರವನ್ನು – ಒಮ್ಮತವನ್ನು ಬಿಂಬಿಸುತ್ತದೆ.

ಯೋಗಕ್ಕೆ ಹೊಸ ಯುಗ ರೂಪಿಸುವ ಸಾಮರ್ಥ್ಯವಿದೆ. – ಮಾನವನ ಸ್ಪರ್ಧೆಯ ನಡುವೆ ಶಾಂತಿಯ, ಭ್ರಾತೃತ್ವದ ಮತ್ತು ಸಮಗ್ರ ಪ್ರಗತಿಯ ಯುಗ.  

ಮಹನೀಯರೇ ಮತ್ತು ಮಹಿಳೆಯರೇ,

ಬೃಹತ್ ಹಿಮಾಲಯದ ಹಾರೈಕೆ ನಿಮ್ಮೊಂದಿಗಿರಲಿ,

ಸಹಸ್ರಮಾನಗಳಿಂದ ನಮ್ಮ ಋಷಿಗಳು ಮತ್ತು ಸಂತರು ತಪಸ್ಸು ಮಾಡಿದ ಈ  ಗಂಗಾ ನದಿ ತೀರದಲ್ಲಿ,ಈ ಮಹಾನ್ ಉತ್ಸವದಲ್ಲಿ ನಿಮಗೆ ಸಂತೃಪ್ತಿ ಮತ್ತು ಆನಂದ ನಿಮ್ಮದಾಗಲಿ.

ಋಷಿಕೇಶದ ಆಧ್ಯಾತ್ಮಿಕ ನಗರಿಯಲ್ಲಿನ ವಾಸ್ತವ್ಯ ಮತ್ತು ಪವಿತ್ರ ಪಾರಮಾರ್ಥ ನಿಕೇತನದ ಪರಿಸರ ನಿಮಗೆ ಸಂತಸ ತರಲಿ

ಪ್ರತಿಯೊಬ್ಬರಿಗೂ ಯೋಗ ಒಳಿತನ್ನು ತರಲಿ

ಯೋಗ ಉತ್ಸವಕ್ಕೆ ನಾನು, ಯಶಸ್ಸು ಕೋರುತ್ತೇನೆ.

ಧನ್ಯವಾದಗಳು, ಅತೀವ ಧನ್ಯವಾದಗಳು.