UAE is one of our most valued partners and a close friend in an important region of the world: PM
We regard UAE as an important partner in India’s growth story: PM Modi
UAE can benefit by linking with our growth in manufacturing and services: PM
Our energy partnership, is an important bridge in our linkages: PM at joint press statement with Crown Prince of Abu Dhabi
Security and defence cooperation have added growing new dimensions to India-UAE relationship: PM
India-UAE economic partnership can be a source of regional and global prosperity: PM

ಅಬುಧಾಬಿಯ ರಾಜಕುಮಾರ, ಗೌರವಾನ್ವಿತ ಷೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಮಾಧ್ಯಮದ ಮಿತ್ರರೇ,

ಪ್ರಿಯ ಮಿತ್ರರಾದ ಗೌರವಾನ್ವಿತ, ಷೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ನನಗೆ ಅಪಾರ ಸಂತಸವಾಗಿದೆ. ರಾಜಕುಮಾರ ಅವರು ದೇಶಕ್ಕೆ ಎರಡನೇ ಬಾರಿ ಆಗಮಿಸಿರುವುದು ನಮ್ಮಲ್ಲಿ ಸಂತೋಷ ಮೂಡಿಸಿದೆ. ಹಾಗೂ ನಾಳೆ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಅವರು ನಮ್ಮ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿರುವುದರಿಂದ ಈ ಭೇಟಿ ಇನ್ನಷ್ಟು ವಿಶಿಷ್ಟ ಎನಿಸಿಕೊಳ್ಳಲಿದೆ.

ಗೌರವಾನ್ವಿತರೇ,

ನಾನು ನಮ್ಮ ಹಿಂದಿನ ಭೇಟಿಗಳನ್ನು, ಆಗಸ್ಟ್ 2015 ಮತ್ತು ಕಳೆದ ಫೆಬ್ರವರಿಯಲ್ಲಿ ನಡೆದಿರುವಂಥದ್ದು, ಹಾರ್ದಿಕವಾಗಿ ಸ್ಮರಿಸಿಕೊಳ್ಳುತ್ತೇನೆ. ಹಿಂದಿನ ಭೇಟಿ ವೇಳೆ ನಾವು ಉಭಯ ದೇಶಗಳ ನಡುವಿನ ನಾನಾ ಕ್ಷೇತ್ರಗಳಲ್ಲಿನ ವ್ಯವಹಾರಕ್ಕೆ ಸಂಬಂಧಿಸಿದಂತೆ,ದೀರ್ಘ ಮತ್ತು ವಿಶಾಲ ವ್ಯಾಪ್ತಿಯ ಚರ್ಚೆ ನಡೆಸಿದ್ದೆವು. ಎರಡು ದೇಶಗಳ ನಡುವಿನ ಪಾಲುದಾರಿಕೆ ಕುರಿತ ನಿಮ್ಮ ಪರಿಪ್ರೇಕ್ಷ, ನಮ್ಮ ಪ್ರಾಂತ್ಯದ ಬಗೆಗೆ ನಿಮಗಿರುವ ಗೌರವ ಹಾಗೂ ನಿಮ್ಮ ವಿಶ್ವಾತ್ಮಕ ದೃಷ್ಟಿಕೋನದಿಂದ ನಾನು ವೈಯಕ್ತಿಕವಾಗಿ ಲಾಭ ಪಡೆದಿದ್ದೇನೆ. ಗೌರವಾನ್ವಿತರೇ, ನಿಮ್ಮ ನಾಯಕತ್ವದಡಿಯಲ್ಲಿ ಎರಡು ದೇಶಗಳ ನಡುವಿನ ಸಂಬಂಧದಲ್ಲಿ ನೂತನ ಸಮನ್ವಯ ಸೃಷ್ಟಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಾವು ಮಹತ್ವಾಂಕಾಂಕ್ಷೆಯ ಮಾರ್ಗವೊಂದನ್ನು ರೂಪಿಸಿದ್ದು, ಎರಡು ದೇಶಗಳ ನಡುವಿನ ಸಹಭಾಗಿತ್ವವು ಮಹತ್ವಾಂಕಾಂಕ್ಷೆಯ, ಕ್ರಿಯೆಯನ್ನು ಆಧರಿಸಿದ ಹಾಗೂ ಘನ ಉದ್ದೇಶವೊಂದನ್ನು ಒಳಗೊಂಡಿರುವ ಸಂಬಂಧ ಆಗುವಂತೆ ರೂಪಿಸಿದ್ದೇವೆ. ನಾವು ಈಗ ವಿನಿಮಯ ಮಾಡಿಕೊಂಡ ಒಪ್ಪಂದವು ಇಂಥ ಅರ್ಥ ಮಾಡಿಕೊಳ್ಳುವಿಕೆಯನ್ನು ಸಾಂಸ್ಥೀಕರಣಗೊಳಿಸಿದೆ.

ಸ್ನೇಹಿತರೇ,

ಯುನೈಟೆಡ್ ಅರಬ್ ಎಮಿರೇಟ್ಸ್ ನಮ್ಮ ಅತ್ಯಂತ ಮೌಲ್ಯಯುತ ಜೊತೆಗಾರ ದೇಶವಾಗಿದ್ದು ಹಾಗೂ ಜಗತ್ತಿನ ಪ್ರಮುಖ ಪ್ರಾಂತ್ಯದಲ್ಲಿನ ನಮ್ಮ ನೆರೆಹೊ ರೆಯ ಸ್ನೇಹಿತ ರಾಷ್ಟ್ರವಾಗಿದೆ. ನಾನು ಈಗ ತಾನೇ ಗೌರವಾನ್ವಿತ ರಾಜಕುಮಾರರ ಜೊತೆಗೆ ಫಲದಾಯಕವಾದ ಹಾಗೂ ಉತ್ಪಾದಕ ಎನ್ನಬಹುದಾದ ಚರ್ಚೆ ನಡೆಸಿದ್ದೇನೆ. ಕಳೆದ ಎರಡು ಭೇಟಿಗಳಲ್ಲಿ ಮಾಡಿದ ನಾನಾ ನಿರ್ಧಾರಗಳನ್ನು ಜಾರಿಗೊಳಿಸುವ ಕುರಿತು ನಿರ್ದಿಷ್ಟ ಚರ್ಚೆ ನಡೆದಿದೆ. ಇಂಧನ ಮತ್ತು ಹೂಡಿಕೆ ಕ್ಷೇತ್ರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ನಮ್ಮ ನಡುವಿನ ಸಂಬಂಧದ ವೇಗವನ್ನು ಕಾಯ್ದಿಟ್ಟುಕೊಳ್ಳಲು ನಿರ್ಧರಿಸಿದ್ದೇವೆ.

ಸ್ನೇಹಿತರೇ, ಭಾರತದ ಅಭಿವೃದ್ಧಿ ಕಥನದಲ್ಲಿ ಯುಎಇ ಒಂದು ಪ್ರಮುಖ ಪಾಲುದಾರ ಎಂದು ನಾವು ಪರಿಗಣಿಸಿದ್ದೇವೆ. ದೇಶದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಯುಎಇಯ ಆಸಕ್ತಿಯನ್ನು ನಾವು ಸ್ವಾಗತಿಸುತ್ತೇವೆ. ಯುಎಇಯ ಸಾಂಸ್ಥಿಕ ಹೂಡಿಕೆದಾರರು ಮತ್ತು ನಮ್ಮ ದೇಶದ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ನಡುವೆ ಸಂಪರ್ಕ ಕಲ್ಪಿಸಲು ಕಾರ್ಯ ನಿರ್ವಹಿಸುತ್ತಿದ್ದೇವೆ.

ದುಬೈಯಲ್ಲಿ ನಡೆಯಲಿರುವ “ವರ್ಲ್ಡ್ ಎಕ್ಸ್ಪೋ 2020′ ರಲ್ಲಿನ ಮೂಲಸೌಕರ್ಯ ಯೋಜನೆಗಳಲ್ಲಿ ಕೈ ಜೋಡಿಸಲು ಭಾರತದ ಕಂಪನಿಗಳು ಆಸಕ್ತ ವಾಗಿವೆ ಎಂದು ರಾಜಕುಮಾರ ಅವರಿಗೆ ತಿಳಿಸಿದ್ದೇನೆ. ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿನ ಬೆಳವಣಿಗೆಯಲ್ಲಿ ಯುಎಇ ಕೈ ಜೋಡಿಸಿ, ಲಾಭ ಪಡೆದು ಕೊಳ್ಳಬಹುದು ಎಂಬುದು ನಮ್ಮ ಅಭಿಪ್ರಾಯ.
ಡಿಜಿಟಲ್ ಆರ್ಥಿಕತೆ ನಿರ್ಮಾಣ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸ್ಮಾರ್ಟ್ ಯೋಜನೆ ಇನ್ನಿತರ ಉಪಕ್ರಮಗಳಲ್ಲಿರುವ ಅಪಾರ ಅವಕಾಶಗಳನ್ನು ಎರಡೂ ದೇಶಗಳು ಒಟ್ಟಾಗಿ ಬಳಸಿಕೊಳ್ಳಬಹುದು. ದ್ವಿಪಕ್ಷೀಯ ವ್ಯಾಪಾರದ ಗುಣಮಟ್ಟ ಮತ್ತು ಪರಿಮಾಣವನ್ನು ಹೆಚ್ಚಿಸಬೇಕೆಂದು ಎರಡೂ ದೇಶಗಳ ಉದ್ಯಮ ಮತ್ತು ವ್ಯಾಪಾರ ಸಂಸ್ಥೆಗಳನ್ನು ನಾವು ಉತ್ತೇಜಿಸುತ್ತಿದ್ದೇವೆ ಮತ್ತು ಅಗತ್ಯ ನೆರವು ನೀಡುತ್ತಿದ್ದೇವೆ.

ಇಂದು ಸಹಿ ಮಾಡಿದ ವ್ಯಾಪಾರ ಪರಿಹಾರ ಕುರಿತ ಒಪ್ಪಂದವು ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಿದೆ. ಇಂಧನ ಕುರಿತ ಸಹಯೋಗವು ತಮ್ಮ ಮತ್ತು ರಾಜಕುಮಾರ ಅವರ ನಡುವಿನ ಸಂಬಂಧದ ಪ್ರಮುಖ ಕೊಂಡಿಯಾಗಿದೆ. ಇದು ದೇಶದ ಇಂಧನ ಸುರಕ್ಷೆಗೆ ಗಣನೀಯ ಪಾಲು ಸಲ್ಲಿಸಲಿದೆ. ಗೌರವಾನ್ವಿತ ರಾಜಕುಮಾರ ಹಾಗೂ ತಾವು ನಿರ್ದಿಷ್ಟ ಯೋಜನೆಗಳು ಹಾಗೂ ಪ್ರಸ್ತಾವಗಳ ಮೂಲಕ ಇಂಧನ ಕ್ಷೇತ್ರ ಕುರಿತ ಒಪ್ಪಂದಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ಚರ್ಚಿಸಿದ್ದೇವೆ. ಈ ದಿಕ್ಕಿನಲ್ಲಿ, ಇಂಧನ ಕ್ಷೇತ್ರದಲ್ಲಿ ದೀರ್ಘಕಾಲೀನ ಪೂರೈಕೆ ಒಪ್ಪಂದಗಳು ಹಾಗೂ ಜಂಟಿ ಯೋಜನೆಗಳು ಸೂಕ್ತ ಮಾರ್ಗವಾಗಲಿವೆ.

ಗೆಳೆಯರೇ, ಭದ್ರತೆ ಮತ್ತು ರಕ್ಷಣೆ ಕ್ಷೇತ್ರದಲ್ಲಿನ ಸಹಯೋಗವು ನಮ್ಮ ಸಂಬಂಧಕ್ಕೆ ಹೊಸ ಆಯಾಮ ನೀಡಿದೆ. ಸಾಗರ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ, ರಕ್ಷಣೆ ಕ್ಷೇತ್ರದ ಹೊಸ ವಿಭಾಗಗಳಲ್ಲಿ ನಾವು ಉಪಯುಕ್ತ ಸಹಕಾರವನ್ನು ವಿಸ್ತರಿಸಲು ಒಪ್ಪಿಕೊಂಡಿದ್ದೇವೆ. ಇಂದು ಬೆಳಗ್ಗೆ ಸಹಿ ಮಾಡಿದ ರಕ್ಷಣೆ ಕ್ಷೇತ್ರದಲ್ಲಿ ಸಹಕಾರಕ್ಕೆ ಸಂಬಂಧಿಸಿದ ಎಂಒಯು(ಒಪ್ಪಂದ ಪತ್ರ), ನಮ್ಮ ರಕ್ಷಣೆ ಕ್ಷೇತ್ರವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲಿದೆ ಎಂಬ ನಂಬಿಕೆ ಇದೆ.
ಹಿಂಸೆ ಮತ್ತು ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಎರಡೂ ದೇಶಗಳು ಕೈಜೋಡಿಸಿರುವುದು ನಮ್ಮ ಸಮಾಜವನ್ನು ಸುರಕ್ಷಿತವಾಗಿ ಇರಿಸಲು ಅಗತ್ಯ ಎಂದು ನಾವು ಭಾವಿಸಿದ್ದೇವೆ.

ಸ್ನೇಹಿತರೇ,

ಎರಡೂ ದೇಶಗಳ ನಡುವೆ ಹತ್ತಿರದ ಸಂಬಂಧದಿಂದ ನಮ್ಮ ದೇಶಗಳಿಗೆ ಮಾತ್ರ ಒಳಿತಾಗಲಿ ಎಂದು ಗೌರವಾನ್ವಿತ ಯುವರಾಜ ಹಾಗೂ ತಾವು ಭಾವಿಸಿಲ್ಲ. ಅಕ್ಕಪಕ್ಕದ ರಾಜ್ಯಗಳಿಗೂ ಇದರಿಂದ ಒಳಿತಾಗಲಿದೆ. ಎರಡೂ ದೇಶಗಳ ಸಂಬಂಧದಿಂದ ಈ ಪ್ರಾಂತ್ಯದಲ್ಲಿ ಸ್ಥಿರತೆ ಮೂಡಲಿದೆ. ಎರಡು ದೇಶ ಗಳ ನಡುವಿನ ಆರ್ಥಿಕ ಸಹಯೋಗವು ಪ್ರಾಂತ್ಯ ಮತ್ತು ಜಾಗತಿಕ ಐಶ್ವರ್ಯ ವೃದ್ಧಿಗೆ ಪೂರಕವಾಗಿರಲಿದೆ. ಪಶ್ಚಿಮ ಏಷ್ಯಾ ಮತ್ತು ಗಲ್ಫ್ ನಲ್ಲಿನ ನಾನಾ ಬೆಳವಣಿಗೆ ಬಗ್ಗೆ ತಾವಿಬ್ಬರೂ ಚರ್ಚಿಸಿದ್ದು, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವ ಆಸಕ್ತಿ ಹೊಂದಿದ್ದೇವೆ. ಅಫಘಾನಿಸ್ತಾನ ಸೇರಿದಂತೆ ಈ ಪ್ರಾಂತ್ಯದಲ್ಲಿನ ಸ್ಥಿತಿ ಬಗೆಗೆ ಚರ್ಚೆ ನಡೆಸಿದ್ದೇವೆ. ಉಗ್ರವಾದ ಮತ್ತು ಮೂಲಭೂತವಾದದ ಹೆಚ್ಚಳದಿಂದ ಜನರ ಸುರಕ್ಷತೆ ಮತ್ತು ರಕ್ಷಣೆಗೆ ಧಕ್ಕೆಯೊದಗಲಿದ್ದು, ಈ ಸಂಬಂಧ ಪರಸ್ಪರ ಸಹಕಾರ ಅಗತ್ಯವಿದೆ ಎಂಬುದು ಇಬ್ಬರ ಕಾಳಜಿಯಾಗಿದೆ.

ಸ್ನೇಹಿತರೇ, ಯುಎಇಯನ್ನು ಅಂದಾಜು 2.6 ದಶ ಲಕ್ಷ ಭಾರತೀಯರು ತಮ್ಮ ಮನೆಯಾಗಿಸಿ ಕೊಂಡಿದ್ದಾರೆ. ಭಾರತೀಯರು ಸಲ್ಲಿಸಿದ ಕಾಣಿಕೆ ಬಗ್ಗೆ ಯುಎಇ ಮತ್ತು ಭಾರತ ಎರಡೂ ದೇಶದಲ್ಲೂ ಅಪಾರ ಗೌರವವಿದೆ. ಯುಎಇಯಲ್ಲಿ ನೆಲೆಸಿರುವ ಭಾರತೀಯರ ಯೋಗಕ್ಷೇಮವನ್ನು ಉತ್ತಮವಾಗಿ ನೋಡಿಕೊಂಡಿರುವುದಕ್ಕೆ ರಾಜಕುಮಾರನಿಗೆ ಕೃತಜ್ಞತೆ ಸಲ್ಲಿಸಿದ್ದೇನೆ. ಅಬುಧಾಬಿಯಲ್ಲಿ ದೇವಾಲಯ ನಿರ್ಮಾಣಕ್ಕಾಗಿ ಭಾರತೀಯರಿಗೆ ಭೂಮಿ ನೀಡಿರು ವುದಕ್ಕೆ ಧನ್ಯವಾದ ಸಲ್ಲಿಸಿದ್ದೇನೆ.

ಗೆಳೆಯರೇ, ಎರಡು ದೇಶಗಳ ನಡುವಿನ ಸಂಬಂಧದ ಯಶಸ್ಸಿಗೆ ಯುಎಇ ಅಧ್ಯಕ್ಷ, ಗೌರವಾನ್ವಿತ ಷೇಕ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್

ಮತ್ತು ಗೌರವಾನ್ವಿತ ಷೇಕ್ ಮೊಹಮ್ಮದ್ ಅವರ ವೈಯಕ್ತಿಕ ಆಸಕ್ತಿ ಕಾರಣ. ಈ ಸಂಬಂಧ, ಸಹಕಾರ ಇನ್ನಷ್ಟು ಉತ್ತಮಗೊಳ್ಳಲಿದ್ದು, ಪ್ರಗತಿ ಸಾಧಿಸಲಿದೆ. ಗೌರವಾನ್ವಿತರೇ, ಮಾನ್ಯರೇ, ಹಿಂದಿನ ಭೇಟಿಗಳಿಂದ ಮೂಡಿದ ಪರಸ್ಪರ ತಿಳಿವಳಿಕೆ ಮತ್ತು ಆರ್ಥಿಕ ಲಾಭದ ಅಡಿಪಾಯದ ಮೇಲೆ ಈ ಭೇಟಿ ಫಲ ನೀಡಲಿದೆ ಎಂದು ನಾನು ನಂಬಿದ್ದೇನೆ. ಅದು ಭವಿಷ್ಯದಲ್ಲಿ ಗಾಢವಾದ, ಗುರಿಯುಳ್ಳ ಹಾಗೂ ವೈವಿಧ್ಯಮಯ ಸಹಯೋಗದ ಚೌಕಟ್ಟನ್ನು ರೂಪಿಸಲಿದೆ ಎಂದು ನಂಬಿದ್ದೇನೆ. ಭಾರತಕ್ಕೆ ಆಗಮಿಸಬೇಕೆಂಬ ತಮ್ಮ ಆಹ್ವಾನವನ್ನು ಒಪ್ಪಿಕೊಂಡಿದ್ದಕ್ಕೆ ರಾಜಕುಮಾರನಿಗೆ ಧನ್ಯವಾದ ಸಲ್ಲಿಸುತ್ತೇನೆ, ದೇಶದಲ್ಲಿ ಅವರ ಮತ್ತು ಅವರ ತಂಡದ ವಾಸ್ತವ್ಯ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ.
ಧನ್ಯವಾದಗಳು. ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.