It is the responsibility of everyone to work towards cleanliness: PM Modi
Cleanliness is not something to be achieved by budget allocations. It should become a mass movement: PM Modi
Like 'Satyagraha' freed the country from colonialism, 'Swachhagraha' would free the country from dirt, says PM Modi

ಯಾವಾಗ ಯಾರೊಬ್ಬರೂ ಅಶುಚಿತ್ವವನ್ನು ಮತ್ತು ಅಶುಚಿತ್ವದಿಂದ ಕೂಡಿದ ಸುತ್ತಲ ವಾತಾವರಣವನ್ನು ಇಷ್ಟ ಪಡುವುದಿಲ್ಲವೋ ಆಗಶುಚಿತ್ವದ ಹವ್ಯಾಸಕ್ಕೆ ಕೆಲವು ಪ್ರಯತ್ನ ಬೆಳೆಯುತ್ತದೆ ಎಂದರು.

ಈಗ ಮಕ್ಕಳಲ್ಲಿ ಶುಚಿತ್ವಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಜಾಗೃತಿ ಮೂಡುತಿದೆ. ಇದು ಸ್ವಚ್ಛ ಭಾರತ ಜನತೆಯ ಬದುಕಿಗೆ ಆಪ್ತವಾಗಿರುವುದನ್ನು ತೋರಿಸುತ್ತದೆ ಎಂದರು. ಶುಚಿತ್ವವನ್ನು ಉತ್ತೇಜಿಸಲು ಈಗ ನಗರ ಮತ್ತು ಪಟ್ಟಣಗಳ ನಡುವೆ ಆರೋಗ್ಯಪೂರ್ಣ ಸ್ಪರ್ಧೆ ಬೆಳೆಯುತ್ತಿದೆ ಎಂದರು.

ಮಾಧ್ಯಮಗಳ ಧನಾತ್ಮಕ ಪಾತ್ರವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ನನಗಿಂತಲೂ ಹೆಚ್ಚಾಗಿ ಶುಚಿತ್ವದ ಸ್ವಚ್ಛತೆಯ ಉದ್ದಶಕ್ಕಾಗಿ ಮುಂದುವರಿಸಿಕೊಂಡು ಹೋದವರು ಇದ್ದರೆ ಅದು ಮಾಧ್ಯಮ ಎಂದು ಹೇಳಿದರು.

ನೈರ್ಮಲ್ಯ ಎನ್ನುವುದು ಬಜೆಟ್ ಹಂಚಿಕೆಯ ಮೂಲಕ ಏನೋ ಒಂದನ್ನು ಸಾಧಿಸುವುದಲ್ಲ. ಅದು ಒಂದು ಸಮೂಹ ಚಳವಳಿ ಎಂದು ಪ್ರತಿಪಾದಿಸಿದರು.
ವಸಾಹತುಶಾಹಿ ಆಳ್ವಿಕೆಯಿಂದ ನಮ್ಮನ್ನು ಮುಕ್ತಗೊಳಿಸಲು ಮಹಾತ್ಮಾಗಾಂಧಿ ಅವರು ನಡೆಸಿದ, ಸತ್ಯಾಗ್ರಹವನ್ನು ಸ್ಮರಿಸಿದ ಪ್ರಧಾನಿ, ಇಂದು ಭಾರತವನ್ನು ಕೊಳೆಮುಕ್ತಗೊಳಿಸಲು ಸ್ವಚ್ಛಾಗ್ರಹ ನಡೆಯಬೇಕಾಗಿದೆ ಎಂದರು.

ದೀರ್ಘಕಾಲದಿಂದಲೂ ಮರು ಬಳಕೆ ಮತ್ತು ಮತ್ತೆ ಉಪಯೋಗಿಸುವುದು ನಮ್ಮ ಹವ್ಯಾಸವಾಗಿದೆ ಎಂದ ಪ್ರಧಾನಿ, ಇದನ್ನು ಹೆಚ್ಚು ತಂತ್ರಜ್ಞಾನಚಾಲಿತಗೊಳಿಸಬೇಕು ಎಂದರು.

ಪ್ರಶಸ್ತಿ ವಿಜೇತರನ್ನು ಅದರಲ್ಲೂ ಜನರ ಪಾಲ್ಗೊಳ್ಳುವಿಕೆಯಿಂದ ಯಶಸ್ಸು ಸಾಧಿಸಿದವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.