PM Narendra Modi lays foundation stones for several development projects in Mumbai
PM Modi lays foundation of the Shiv Smarak, a towering statue in the Arabian Sea in the memory of Maratha king Chhatrapati Shivaji
Even in the midst of struggle, Shivaji Maharaj remained a torchbearer of good governance: PM
Development is the solution to all problems, it is the way ahead: PM
The strength of 125 crore Indians will bring about change in this nation: PM Modi

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಇಂದು ಮುಂಬೈನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲ ಎರಡು ಮೆಟ್ರೋ ಮಾರ್ಗಗಳು, ಮುಂಬೈ-ಟ್ರಾನ್ಸ್ ಬಂದರು ಸಂಪರ್ಕ, ಮುಂಬಯಿ ನಗರ ಸಾರಿಗೆ ಯೋಜನೆ 3ನೇ ಹಂತ ಮತ್ತು ಎರಡು ಮೇಲ್ಸೇತುವೆ ರಸ್ತೆ ಮಾರ್ಗಗಳೂ ಸೇರಿವೆ.

ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಮುಂಬಯಿ ಕರಾವಳಿ ತೀರದ ಅರಬ್ಬಿ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಸ್ಮಾರಕಕ್ಕೆ ಜಲ ಪೂಜೆಯನ್ನೂ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಂಬೈನ ಬಾಂದ್ರಾ ಕುರ್ಲಾ ಸಮುಚ್ಛಯದಲ್ಲಿ ಬೃಹತ್ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ತಮ್ಮ ಹೋರಾಟದ ನಡುವೆಯೂ ಶಿವಾಜಿ ಮಹಾರಾಜ್ ಅವರು ಉತ್ತಮ ಆಡಳಿತದ ದೀವಟಿಗೆ ಹಿಡಿದ ಮಹನೀಯರಾಗಿ ಕಾಣುತ್ತಾರೆ ಎಂದರು. ಶಿವಾಜಿ ಮಹಾರಾಜ್ ಅವರದು ಬಹುಮುಖ ವ್ಯಕ್ತಿತ್ವದ ವ್ಯಕ್ತಿ, ಮತ್ತು ಅವರ ಹಲವು ವ್ಯಕ್ತಿತ್ವಗಳು ನಮಗೆ ಸ್ಫೂರ್ತಿ ನೀಡಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಶಿವಾಜಿ ಮಹಾರಾಜರ ಶೌರ್ಯ ಎಲ್ಲರಿಗೂ ತಿಳಿದಿದೆ. ಆದರೆ ನಾವು ಅವರಲ್ಲಿ ಇನ್ನೂ ಹಲವು ಮಹತ್ವದ ಅಂಶಗಳಿವೆ ಅದರ ಬಗ್ಗೆಯೂ ನಾವು ತಿಳಿಯಬೇಕು, ಅವುಗಳಲ್ಲಿ ಅವರ ಜಲ ಮತ್ತು ಹಣಕಾಸು ನೀತಿಯೂ ಸೇರಿದೆ ಎಂದರು.

ಶಿವಾಜಿ ಮಹಾರಾಜ್ ಅವರ ಸ್ಮಾರಕಕ್ಕೆ ಜಲ ಪೂಜೆ ಸಲ್ಲಿಸುತ್ತಿರುವುದು ವಿಶೇಷವಾಗಿದ್ದು, ತಮಗೆ ಅಂಥ ಅವಕಾಶ ದೊರೆತಿದ್ದು ತಮಗೆ ಸಂತಸ ತಂದಿದೆ ಎಂದರು.

ಅಭಿವೃದ್ಧಿಯೇ ಎಲ್ಲ ಸಮಸ್ಯೆಗಳಿಗೂ ಪರಿಹಾರ, ಇದುವೆ ಮುಂದಿನ ದಾರಿ ಎಂದು ಪ್ರಧಾನಿ ಪ್ರತಿಪಾದಿಸಿದರು. 125 ಕೋಟಿ ಭಾರತೀಯರ ಬಲವು ದೇಶದಲ್ಲಿ ಬದಲಾವಣೆ ತರುತ್ತದೆ ಎಂದೂ ಅವರು ಹೇಳಿದರು.

ನಾವು ಅಧಿಕಾರ ವಹಿಸಿಕೊಂಡ ದಿನದಿಂದಲೂ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ನಡೆಯುತ್ತಲೇ ಇದೆ, ಮತ್ತು ನವೆಂಬರ್ 8ರಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಜನರಲ್ಲಿ ಭೀತಿ ಹುಟ್ಟಿಸಲು ಮತ್ತು ದಾರಿ ತಪ್ಪಿಸುವ ಪ್ರಯತ್ನಗಳು ನಡೆದವು ಆದರೂ ಜನರು ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದರು ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದ ಜನರು ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಒಪ್ಪಿಕೊಳ್ಳುವಿದಿಲ್ಲ ಎಂದೂ ಅವರೂ ಹೇಳಿದರು.