PM Modi presents Ramnath Goenka Journalism Awards
The colonial rulers were scared of those who wrote and expressed themselves through the newspapers: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪತ್ರಿಕೋದ್ಯಮದ ಸಾಧನೆಗಾಗಿ ರಾಮನಾಥ ಗೊಯೆಂಕಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ವಾರ್ತಾ ಪತ್ರಿಕೆಗಳು ಬಹು ಬಲವಾದ ಅಭಿವ್ಯಕ್ತಿ ಮಾದ್ಯಮವಾಗಿದ್ದವು ಎಂದರು. ವಸಾಹತುಶಾಹಿ ಆಡಳಿತಗಾರರು ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಮತ್ತು ಆ ಮೂಲಕ ಅಭಿವ್ಯಕ್ತಿ ಪಡಿಸಿಕೊಳ್ಳುತ್ತಿದ್ದವರಿಗೆ ಹೆದರುತ್ತಿದ್ದರು ಎಂದು ಹೇಳಿದರು.

ದಿವಂಗತ ರಾಮನಾಥ ಗೊಯೆಂಕಾ ಅವರನ್ನು ಕೊಂಡಾಡಿದ ಪ್ರಧಾನಮಂತ್ರಿಯವರು, ತುರ್ತು ಪರಿಸ್ಥಿತಿಯನ್ನು ಕೆಲವು ಮಾಧ್ಯಮಗಳು ಮಾತ್ರ ಖಂಡಿಸಿದವು ಮತ್ತು ಅದರ ನೇತೃತ್ವವನ್ನು ರಾಮನಾಥ ಗೊಯೆಂಕಾ ಜೀ ವಹಿಸಿದ್ದರು ಎಂದರು.

ತಂತ್ರಜ್ಞಾನ ಇಂದು ಮಾಧ್ಯಮಕ್ಕೆ ಸವಾಲು ಒಡ್ಡಿದೆ ಎಂದ ಪ್ರಧಾನಮಂತ್ರಿಯವರು, ಹಿಂದೆ 24 ಗಂಟೆಗಳಲ್ಲಿ ಬಹಿರಂಗವಾಗುತ್ತಿದ್ದ ಸುದ್ದಿ ಇಂದು 24 ಸೆಕೆಂಡುಗಳಲ್ಲಿ ಆಗುತ್ತದೆ ಎಂದರು.

 

Click here to read full text speech