PM Modi condemns terror attack on Uri, Jammu and Kashmir
I assure the nation that those behind this despicable attack will not go unpunished: PM
We salute all those martyred in Uri. Their service to the nation will always be remembered: PM
PM Modi speaks to Home Minister Rajnath Singh & Raksha Mantri Manohar Parrikar, takes stock of situation in Uri

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ.

“ಉರಿಯಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಹೇಯ ದಾಳಿಗೆ ಕಾರಣರಾದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ದೇಶಕ್ಕೆ ನಾನು ಭರವಸೆ ನೀಡುತ್ತೇನೆ.

ಉರಿಯಲ್ಲಿ ಹುತಾತ್ಮರಾದ ಎಲ್ಲರಿಗೂ ನಾನು ಗೌರವ ವಂದನೆ ಸಲ್ಲಿಸುತ್ತೇನೆ. ದೇಶಕ್ಕೆ ಅವರು ನೀಡಿದ ಸೇವೆ ಸದಾ ಸ್ಮರಣೀಯ. ಅವರ ಕುಟುಂಬದವರೊಂದಿಗೆ ನನ್ನ ಸಂವೇದನೆ ಇದೆ.

ಪರಿಸ್ಥಿತಿಯ ಬಗ್ಗೆ ಗೃಹ ಸಚಿವರು ಮತ್ತು ರಕ್ಷಣಾ ಸಚಿವರೊಂದಿಗೆ ಮಾತನಾಡಿದ್ದೇನೆ. ರಕ್ಷಣಾ ಸಚಿವರು ಪರಿಸ್ಥಿತಿಯ ಖುದ್ದು ಅವಲೋಕನಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲಿದ್ದಾರೆ”, ಎಂದು ಪ್ರಧಾನಿ ತಿಳಿಸಿದ್ದಾರೆ.