ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಉಪ ರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿ ಅವರು ಬರೆದಿರುವ ಕೃತಿ “ಸಿಟಿಜನ್ ಅಂಡ್ ಸೊಸೈಟಿ” ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ಭವನದಲ್ಲಿ ಕೃತಿಯನ್ನು ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಬಿಡಗುಡೆ ಮಾಡಿದರು.
ಈ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು ಮುಂದಿನ ಪೀಳಿಗೆಗಾಗಿ ತಮ್ಮ ಚಿಂತನೆಗಳನ್ನು ಕೃತಿ ರೂಪದಲ್ಲಿ ತಂದಿರುವ ಉಪ ರಾಷ್ಟ್ರಪತಿಯವರನ್ನು ಅಭಿನಂದಿಸಿದರು.
ಇಂದು ತಂತ್ರಜ್ಞಾನ ಸಿಟಿಜನ್ ಗಳನ್ನು ನೆಟ್ಟಿಜನ್ ಗಳನ್ನಾಗಿ ಪರಿವರ್ತಿಸಿದೆ, ಮತ್ತು ಸಾಂಪ್ರದಾಯಿಕ ಗಡಿಗಳನ್ನು ಅಳಿಸಿಹಾಕಿದೆ ಎಂದರು. ಆದಾಗ್ಯೂ ಭಾರತದಲ್ಲಿ ಸಮಾಜ ಮತ್ತು ಸಿಟಿಜನ್ ಗಳ ನಡುವೆ “ಕುಟುಂಬ’ ಎಂದು ಕರೆಯಲಾಗುವ ಘಟಕವಿದೆ, ಇದು ನಮ್ಮ ದೊಡ್ಡ ಬಲವಾಗಿದೆ ಎಂದು ಹೇಳಿದರು.
ಹಲವು ಉಪ ಭಾಷೆ ಮತ್ತು ಭಾಷೆಗಳ ದೇಶ ಭಾರತ ಎಂಬುದು ನಮ್ಮ ಹೆಮ್ಮೆಯಾಗಿದೆ ಮತ್ತು ಹಲವು ವಿವಿಧ ನಂಬಿಕೆಗಳ ನಡುವೆ ಸೌಹಾರ್ದತೆಯ ಜೀವನ ಸಾಗಿದೆ ಎಂದರು. ಎಲ್ಲ ಪ್ರಜೆಗಳೂ ಇದು ಸಾಧ್ಯವಾಗಲು ತಮ್ಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.