2017ನೇ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ರಾಷ್ಟ್ರಪತಿಯವರು ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಅಧಿವೇನಶದ ವೇಳೆ ಆಯವ್ಯಯ ಮತ್ತು ಇತರ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ.
ಇತ್ತೀಚೆಗೆ ರಾಜಕೀಯ ಪಕ್ಷಗಳೊಂದಿಗೆ ಸಂಘಟಿತವಾಗಿ ಮತ್ತು ವೈಯಕ್ತಿಕವಾಗಿ ಮಾತುಕತೆ ನಡೆಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅಧಿವೇಶನವನ್ನು ರಚನಾತ್ಮಕ ಚರ್ಚೆಗೆ ಕಡ್ಡಾಯವಾಗಿ ಸದ್ವಿನಿಯೋಗಪಡಿಸಿಕೊಳ್ಳಬೇಕಾಗಿದೆ ಮತ್ತು ಅದೇ ವೇಳೆ, ಬಜೆಟ್ ಕುರಿತಂತೆ ವಿಸ್ತೃತ ಚರ್ಚೆ ಆಗಬೇಕಾಗಿದೆ.
ಇದೇ ಮೊದಲ ಬಾರಿಗೆ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಆಗುತ್ತಿದೆ. ನಿಮಗೆ ನೆನಪಿರಬಹುದು ಈ ಹಿಂದೆ ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಸಮಯವನ್ನು ಬೆಳಗ್ಗೆಗೆ ಬದಲಾಯಿಸಿತು ಮತ್ತು ಸಂಸತ್ತಿನ ಅಧಿವೇಶನ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲೇ ಬಜೆಟ್ ಮಂಡಿಸಲಾಯಿತು.
ಇಂದಿನಿಂದ ಮತ್ತೊಂದು ಹೊಸ ಸಂಪ್ರದಾಯ ಆರಂಭವಾಗುತ್ತಿದೆ. ಒಂದು ತಿಂಗಳ ಮೊದಲು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ ಮತ್ತು ರೈಲ್ವೆ ಬಜೆಟ್ ಈಗ ಕೇಂದ್ರ ಬಜೆಟ್ ಭಾಗವಾಗಿದೆ. ಈ ಬಗ್ಗೆ ಸಂಸತ್ತಿನಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ ಮತ್ತು ಈ ನಿರ್ಧಾರದ ಲಾಭ ಮುಂದಿನ ದಿನಗಳಲ್ಲಿ ಪ್ರತಿಫಲಿತವಾಗಲಿದೆ. ಸಾರ್ವಜನಿಕರ ದೊಡ್ಡ ಹಿತದ ದೃಷ್ಟಿಯಿಂದ ಎಲ್ಲ ರಾಜಕೀಯ ಪಕ್ಷಗಳೂ ಸಂಸತ್ತಿನಲ್ಲಿ ಆರೋಗ್ಯ ಪೂರ್ಣ ಚರ್ಚೆಯ ಖಾತ್ರಿಗಾಗಿ ಕೈಜೋಡಿಸುತ್ತವೆ ಎಂಬ ಆಶಾ ಭಾವನೆ ನನಗಿದೆ.