ಆರೋಗ್ಯ, ನೈರ್ಮಲ್ಯ ಮತ್ತು ನಗರಾಭಿವೃದ್ಧಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಕುರಿತಂತೆ ಪ್ರಧಾನಮಂತ್ರಿಯವರಿಗೆ ತಮ್ಮ ಕಲ್ಪನೆ ಮಂಡಿಸಿದ ಕಾರ್ಯದರ್ಶಿಗಳ ಎರಡು ಗುಂಪು

ಭಾರತ ಸರ್ಕಾರದ ಕಾರ್ಯದರ್ಶಿಗಳ ಎರಡು ಗುಂಪು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಆರೋಗ್ಯ, ನೈರ್ಮಲ್ಯ ಮತ್ತು ನಗರಾಭಿವೃದ್ಧಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಕುರಿತಂತೆ ತಮ್ಮ ಕಲ್ಪನೆಗಳನ್ನು ಮಂಡಿಸಿದರು.

ಕೇಂದ್ರ ಸಚಿವರು ಮತ್ತು ನೀತಿ ಆಯೋಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಆಡಳಿತಕ್ಕೆ ಸಂಬಂಧಿಸಿದ ವಿವಿಧ ಧ್ಯೆಯಗಳ ಮೇಲೆ ಮಂಡನೆಗೆ ನಿಗದಿಯಾಗಿರುವ ಒಟ್ಟು ಒಂಬತ್ತು ಪ್ರಾತ್ಯಕ್ಷಿಕೆಗಳ ಪೈಕಿ ಈವರೆಗೆ ಒಟ್ಟು ಏಳು ಮಂಡನೆಯಾಗಿವೆ.