ಸಹಾಯಕ ಕಾರ್ಯದರ್ಶಿಗಳಾಗಿ ತನ್ನ ಕೊನೆಯ ಅಧಿವೇಶನದ ಭಾಗವಾಗಿ 2014ರ ತಂಡದ ಐ.ಎ.ಎಸ್. ಅಧಿಕಾರಿಗಳ ತಂಡ ಇಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುಂದೆ ಪ್ರಾತ್ಯಕ್ಷಿಕೆಗಳನ್ನು ಮಂಡಿಸಿದರು.
ಅಧಿಕಾರಿಗಳು ಡಿಬಿಟಿ, ಸ್ವಚ್ಛ ಭಾರತ, ಇ-ನ್ಯಾಯಾಲಯ, ಪ್ರವಾಸೋದ್ಯಮ, ಆರೋಗ್ಯ ಮತ್ತು ಆಡಳಿತದಲ್ಲಿ ಬಾಹ್ಯಾಕಾಶ ಆನ್ವಯಿಕಗಳು ಕುರಿತಂತೆ ಸಿದ್ಧಪಡಿಸಿದ ವಿವಿಧ ವಿಷಯಗಳಿಗೆ ಸಂಬಂಧಿಸಿದ 8 ಆಯ್ದ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಆಳವಾದ ಅಧ್ಯಯನದ ಮೂಲಕ ಮಂಡಿಸಿದ ಪ್ರಾತ್ಯಕ್ಷಿಕೆಗೆ ಯುವ ಅಧಿಕಾರಿಗಳನ್ನು ಪ್ರಶಂಸಿಸಿದರು.
ಸಹಾಯಕ ಕಾರ್ಯದರ್ಶಿಗಳಾಗಿಕೇಂದ್ರ ಸರ್ಕಾರ ಜೊತೆ ಈಐಎಎಸ್ ಅಧಿಕಾರಿಗಳ ಬಾಂಧವ್ಯ, ಯುವ ಮತ್ತು ಅನುಭವದ ಮಿಶ್ರಣದೊಂದಿಗೆ ಉತ್ತಮ ಫಲಿತಾಂಶ ತರಲು ಸಹಕಾರಿಯಾಗುತ್ತದೆ ಎಂದು ತಾವು ನಿರೀಕ್ಷಿಸುವುದಾಗಿ ಅವರು ಹೇಳಿದರು. ಇಂದು ಪ್ರಸ್ತುತ ಪಡಿಸಲಾದ ಫಲಿತಾಂಶಗಳು, ತಮಗೆ ತೃಪ್ತಿ ತಂದಿದ್ದು, ಈ ನೋಟ ಸಾಕಾರಗೊಳ್ಳುವ ಮಾರ್ಗದಲ್ಲಿದೆ ಎಂದು ಹೇಳಿದರು.
ತಂಡದ ಸ್ಫೂರ್ತಿಯನ್ನು ಅಳವಡಿಸಿಕೊಂಡು ಮತ್ತು ತಾವು ಯಾವುದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರೂ ಸಂಗ್ರಹಾಗಾರದ ಸಾಮರ್ಥ್ಯವನ್ನು ಒಡೆದು ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ನೀತಿಗಳ ಮೇಲೆ ರಾಜಕೀಯ ಎಂದಿಗೂ ಸವಾರಿ ಮಾಡಬಾರದು ಎಂದು ಹೇಳಿದ ಪ್ರಧಾನಿ,ತಾವು ಕೈಗೊಳ್ಳುವ ನಿರ್ಧಾರಗಳ ವಿಚಾರದಲ್ಲಿ ಈ ಕೆಳಗಿನ ಎರಡು ಒರೆ ಹಚ್ಚುವ ಕಲ್ಲುಗಳ ನೆರವು ಪಡೆಯುವಂತೆ ಹೇಳಿದರು: (ಎ) ಆ ನಿರ್ಧಾರ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹಿತಕ್ಕೆ ವಿರುದ್ಧವಾಗಿರಬಾರದು ಮತ್ತು (ಬಿ) ಬಡವರಲ್ಲೇ ಅತಿ ಬಡವರಿಗೆ ಎಂದಿಗೂ ಆ ನಿರ್ಧಾರದಿಂದ ತೊಂದರೆ ಆಗಬಾರದು.