ಸೇನೆಯ ಸಿಬ್ಬಂದಿಗಳ ಸಂಪೂರ್ಣಯೋಗಕ್ಷೇಮ ಕಲ್ಯಾಣಾಭಿವೃದ್ದಿಗಾಗಿ ಕೇಂದ್ರ ಸರಕಾರ ಭದ್ದವಾಗಿದೆ. ಸರಕಾರ ರಚನೆಯಾದಕೂಡಲೇ ಸೈನಿಕರಿಗಾಗಿ ಹಲವಾರು ಕಾರ್ಯಯೋಜನೆಗಳನ್ನುಹಾಕಿಕೊಂಡಿದ್ದು, ಅಲ್ಲದೆ ಸೈನಿಕರಹಲವು ವರ್ಷಗಳ ಕಾಲ ನೆನೆಗುದ್ದಿ ಪೂರೈಸಲಾಗದ ಬೇಡಿಕೆಯಾದ " ಒಂದು ಶ್ರೇಣಿ, ಒಂದುನಿವೃತ್ತಿವೇತನ"  ಯೋಜನೆಯನ್ನು ನಿವೃತ್ತ ಸೇನಾನಿಗಳಿಗೋಸ್ಕರ ಅನುಷ್ಠಾನಗೊಳಿಸುವ ಮಹತ್ತರಕಾರ್ಯ ಸರಕಾರ ಈಡೇರಿಸಿದೆ. ಇದರಿಂದಾಗಿ ಮಾಜಿ ಸೈನಿಕರಿಗೆ ನೇರ ಪ್ರಯೋಜನ ಲಭಿಸಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಸೈನಿಕರ ಅದಮ್ಯ ಧೈರ್ಯದ ಬಗ್ಗೆ ಸದಾ ಗೌರವ ಹೊಂದಿದ್ದಾರೆ. ನಮ್ಮ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸುವಲ್ಲಿ ಅಗತ್ಯದ ಹಲವಾರು ಕ್ರಮಗಳನ್ನು ಅತ್ಯಂತ ಮಹತ್ತರಕಾರ್ಯವೆಂದು ಅನುಷ್ಠಾನಗೊಳಿಸಿದ್ದಾರೆ. ದಿನದ ಹಗಲು ರಾತ್ರಿ ಕಾಲ ಪೂರ್ತಿ ದೇಶದ ರಕ್ಷಣೆಗಾಗಿ ಕಳೆವ ಸೈನಿಕರ ಜೊತೆ ಪ್ರತಿ ವರ್ಷ ದೀಪಾವಳಿ ಆಚರಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಯಸುತ್ತಾರೆ.ಕಳೆದ ವರ್ಷ , ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರುದೇಶದಾಧ್ಯಂತ ಜನತೆ ಸೈನಿಕರಿಗೆ ನೇರವಾಗಿ ಶುಭಾಶಯ ಕೋರುವ ನಿಟ್ಟಿನಲ್ಲಿ ‘#Sandesh2Soldiers’ ಎಂಬ ವಿಶೇಷ ಅಭಿಯಾನ ಪ್ರಾರಂಭಿಸಿದ್ದರು.


ಹಿಂದಿನ ವರ್ಷದಲ್ಲಿ ಸೈನಿಕರ ಜೊತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು :

ಸೇನಾ ದಿನ ನಿಮಿತ್ತ ಭಾರತೀಯ ಸೇನೆಯ ಅದಮ್ಯ ಧೈರ್ಯಕ್ಕಾಗಿ ಮತ್ತು ಅಮೂಲ್ಯ ದೇಶ ಸೇವೆಗಾಗಿ  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸದರು.

ಸೇನಾ ದಿವಸ ನಿಮಿತ್ತ ನಿಮಗೆಲ್ಲರಿಗೂ, ಹಿರಿಯರಿಗೂ ಮತ್ತು ನಿಮ್ಮೆಲ್ಲ ಕುಟುಂಬದವರಿಗೂ ಶುಭಾಶಯಗಳು. ನಮ್ಮ ರಕ್ಷಣೆಗಾಗಿ ಮುಂದಿನ ಸಾಲಲ್ಲಿ ನಿಲ್ಲುವ ನಿಮಗೆ ನಾವು ನಮನ ಸಲ್ಲಿಸುತ್ತಿದ್ದೇವೆ. ವಿಪತ್ತುಕಾಲದಲ್ಲಿ ನೈಸರ್ಗಿಕ ಆಪತ್ತು ಬಂದಾಗ ನಮ್ಮ ರಕ್ಷಣೆಗಾಗಿ ಸದಾ ಸಿದ್ದರಿರುತ್ತೀರಿ, ರಕ್ಷಣೆಯ ಜವಾಬ್ದಾರಿ ಹೊತ್ತ ನಿಮ್ಮಿಂದಾಗಿ 125 ಕೋಟಿ ಭಾರತೀಯರು ಇಂದು ಶಾಂತಿ ನೆಮ್ಮದಿಯಿಂದ ಬದುಕುತ್ತಿದ್ದಾರೆ.