Cabinet chaired by PM Modi approves setting up of GST council and secretariat
Govt undertaking steps required in the direction of implementation of GST ahead of schedule
First meeting of the GST Council scheduled on 22nd and 23rd September 2016

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಿಎಸ್ಟಿ ಮಂಡಳಿ ಮತ್ತು ಅದರ ಸಚಿವಾಲಯ ಸ್ಥಾಪನೆಗೆ ಈ ಕೆಳಕಂಡ ವಿವರಗಳನ್ವಯ ತನ್ನ ಅನುಮೋದನೆ ನೀಡಿದೆ:

ಎ) ಸಂವಿಧಾನಕ್ಕೆ ತಿದ್ದುಪಡಿ ಮಾಡಲಾದ 279ಎ ವಿಧಿಯನ್ವಯ ಜಿಎಸ್ಟಿ ಮಂಡಳಿಯ ರಚನೆ;

ಬಿ) ನವದೆಹಲಿಯಲ್ಲಿ ಅದರ ಕಚೇರಿ ಇರುವಂತೆ ಜಿಎಸ್ಟಿ ಮಂಡಳಿಯ ಸಚಿವಾಲಯ ರಚನೆ;

ಸಿ) ಕಾರ್ಯದರ್ಶಿ (ಕಂದಾಯ) ಇವರನ್ನು ಜಿಎಸ್ಟಿ ಮಂಡಳಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ನೇಮಕ;

ಡಿ) ಜಿಎಸ್ಟಿ ಮಂಡಳಿಯ ಎಲ್ಲ ಪ್ರಕ್ರಿಯೆಗಳಿಗೆ ಕೇಂದ್ರೀಯ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ (ಸಿಬಿಇಸಿ)

ಅಧ್ಯಕ್ಷರನ್ನು ಖಾಯಂ ಆಹ್ವಾನಿತರಾಗಿ (ಮತದಾನದ ಹಕ್ಕಿಲ್ಲದ) ಸೇರಿಸುವುದು;
ಇ) ಜಿಎಸ್ಟಿ ಮಂಡಳಿ ಸಚಿವಾಲಯದಲ್ಲಿ ಜಿಎಸ್ಟಿ ಮಂಡಳಿಗೆ ಒಂದು ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯ ಸೃಷ್ಟಿ (ಭಾರತ

ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯ ಮಟ್ಟದಲ್ಲಿ), ಮತ್ತು ಜಿಎಸ್ಟಿ ಮಂಡಳಿ ಸಚಿವಾಲಯದಲ್ಲಿ ನಾಲ್ಕು ಆಯುಕ್ತರ ಹುದ್ದೆಯ ಸೃಷ್ಟಿ (ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿಗಳ ಮಟ್ಟದಲ್ಲಿ)

ಜಿಎಸ್ಟಿ ಮಂಡಳಿಯ ಸಚಿವಾಲಯದ ಆವರ್ತನ ಮತ್ತು ಪುನರಾವರ್ತನ ವೆಚ್ಚಗಳ (ರೆಕರಿಂಗ್ ಮತ್ತು ನಾನ್ ರೆಕರಿಂಗ್)ನ್ನು ಸರಿದೂಗಿಸಲು ಅಗತ್ಯವಾದ ಹಣಕಾಸು ಒದಗಿಸಲು ಸಂಪುಟ ನಿರ್ಧರಿಸಿತು, ಈ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಎರವಲು ಪಡೆಯುವ ಅಧಿಕಾರಿಗಳು ಜಿಎಸ್ಟಿ ಮಂಡಳಿಯ ಸಚಿವಾಲಯವನ್ನು ನಡೆಸುತ್ತಾರೆ. ಈವರೆಗೆ ಜಿಎಸ್ಟಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ನಿಗದಿತ ಸಮಯಕ್ಕಿಂತ ಮೊದಲೇ ಕೈಗೊಳ್ಳಲಾಗಿದೆ.

ಹಣಕಾಸು ಸಚಿವರು ನವದೆಹಲಿಯಲ್ಲಿ 2016ರ ಸೆಪ್ಟೆಂಬರ್ 22 ಮತ್ತು 23ರಂದು ಜಿಎಸ್ಟಿ ಮಂಡಳಿಯ ಪ್ರಥಮ ಸಭೆಯನ್ನು ಕರೆಯಲು ನಿರ್ಧರಿಸಿದ್ದಾರೆ.

ಹಿನ್ನೆಲೆ:

ರಾಷ್ಟ್ರದಲ್ಲಿ ಸರಕು ಮತ್ತು ಸೇವೆಗಳ ತೆರಿಗೆ ಪರಿಚಯಿಸಲು ಸಂವಿಧಾನದ (ನೂರಾ ಇಪ್ಪತ್ತೆರಡನೇ ತಿದ್ದುಪಡಿ) ಮಸೂದೆ 2016ಕ್ಕೆ ರಾಷ್ಟ್ರಪತಿಯವರು, 2016ರ ಸೆಪ್ಟೆಂಬರ್ 8ರಂದು ಒಪ್ಪಿಗೆ ಸೂಚಿಸಿದ್ದಾರೆ ಮತ್ತು ಅದನ್ನು ಸಂವಿಧಾನದ (ನೂರಾ ಒಂದನೇ ತಿದ್ದುಪಡಿ) ಕಾಯಿದೆ 2016 ಎಂದು ಅಧಿಸೂಚಿಸಲಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತರಲಾದ 279 ಎ ವಿಧಿಯನ್ವಯ ಜಿಎಸ್ಪಿಟ ಮಂಡಳಿಯನ್ನು 279ಎ ವಿಧಿ ಆರಂಭವಾಗುವ ದಿನದಿಂದ 60 ದಿನಗಳ ಒಳಗಾಗಿ ಸ್ಥಾಪಿಸಬೇಕು. 279 ಎ ವಿಧಿಯನ್ನು 2016ರ ಸೆಪ್ಟೆಂಬರ್ 12ರಿಂದ ಜಾರಿಗೆ ತರಲು 2016ರ ಸೆಪ್ಟೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ.

ಸಂವಿಧಾನಕ್ಕೆ ತಿದ್ದುಪಡಿ ತರಲಾದ 279 ಎ ವಿಧಿಯನ್ವಯ, ಜಿಎಸ್ಟಿ ಮಂಡಳಿಯು ಕೇಂದ್ರ ಮತ್ತು ರಾಜ್ಯಗಳ ಜಂಟಿ ವೇದಿಕೆ ಆಗಿರುತ್ತದೆ ಮತ್ತು ಈ ಕೆಳಗಿನ ಸದಸ್ಯರನ್ನು ಒಳಗೊಂಡಿರುತ್ತದೆ: –

ಎ) ಕೇಂದ್ರ ಹಣಕಾಸು ಸಚಿವರು – ಅಧ್ಯಕ್ಷರು.

ಬಿ) ಕೇಂದ್ರದ ಹಣಕಾಸು ಖಾತೆಯ
ಕಂದಾಯ ಉಸ್ತುವಾರಿಯ ರಾಜ್ಯ ಸಚಿವರು – ಸದಸ್ಯರು

ಸಿ) ಹಣಕಾಸು ಅಥವಾ ತೆರಿಗೆ ಉಸ್ತುವಾರಿ

ಸಚಿವರು ಅಥವಾ ರಾಜ್ಯ ಸರ್ಕಾರ ನಾಮಾಂಕನ

ಮಾಡುವ ಇತರ ಯಾವುದೇ ಸಚಿವರು. – ಸದಸ್ಯರು

279 ಎ (4) ವಿಧಿಯನ್ವಯ, ಮಂಡಳಿಯು ಜಿಎಸ್ಟಿಯಿಂದ ವಿನಾಯಿತಿ ಪಡೆಯಬಹುದಾದ ಸರಕು ಮತ್ತು ಸೇವೆಗಳು, ಮಾದರಿ ಜಿಎಸ್ಟಿ ಕಾಯಿದೆಗಳು, ವಿತರಣೆಯ ಸ್ಥಳದ ಆಡಳಿತ ನೀತಿ, ಮಿತಿಯ ಮಿತಿಗಳು, ಬ್ಯಾಂಡ್ ಸೇರಿದಂತೆ ವಾಸ್ತರ ದರ, ಪ್ರಕೃತಿ ವಿಕೋಪ/ಪ್ರಕೋಪಗಳ ಸಂದರ್ಭದಲ್ಲಿ ಸಂಪನ್ಮೂಲ ಹೆಚ್ಚಳಕ್ಕಾಗಿ ವಿಶೇಷ ದರ, ಕೆಲವು ರಾಜ್ಯಗಳಿಗೆ ವಿಶೇಷ ಅವಕಾಶಗಳು ಇತ್ಯಾದಿ ಸೇರಿದಂತೆ ಜಿಎಸ್ಟಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡಲಿದೆ.