Eight-member delegation of British Parliamentarians meets PM Modi
The relations between India and UK have strong bipartisan support in both countries: PM
India and UK are natural partners in the global fight against terrorism: PM

ಎಂಟು ಮಂದಿ ಬ್ರಿಟೀಷ್ ಸಂಸದೀಯಪಟುಗಳ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.

ಭಾರತ ಮತ್ತು ಯು.ಕೆ. ನಡುವಿನ ಬಾಂಧವ್ಯಕ್ಕೆ ಎರಡೂ ರಾಷ್ಟ್ರಗಳಲ್ಲಿ ಬಲವಾದ ಉಭಯಪಕ್ಷೀಯ ಬೆಂಬಲವಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಎರಡೂ ರಾಷ್ಟ್ರಗಳ ನಡುವಿನ ಸಂಸದೀಯಪಟುಗಳ ಹೆಚ್ಚಿನ ಮಾತುಕತೆಗೆ ಕರೆ ನೀಡಿದರು.

 

2015ರ ನವೆಂಬರ್ ನಲ್ಲಿ ತಾವು ಯು.ಕೆ.ಗೆ ಭೇಟಿ ನೀಡಿದ್ದನ್ನು ಹಾಗೂ ಅಲ್ಲಿನ ಪ್ರಧಾನಮಂತ್ರಿ ಥೆರೇಸಾ ಮೇ ಅವರು 2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದನ್ನು ಪ್ರಧಾನಮಂತ್ರಿಯವರು, ಆತ್ಮೀಯತೆಯಿಂದ ಸ್ಮರಿಸಿದರು.

2017ನೇ ವರ್ಷವನ್ನು ಭಾರತ – ಯುಕೆ ಸಾಂಸ್ಕೃತಿಕ ವರ್ಷವಾಗಿ ಆಚರಿಸುತ್ತಿರುವುದನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು.

ಜಾಗತಿಕ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಯು.ಕೆ. ಸ್ವಾಭಾವಿಕ ಪಾಲುದಾರರು ಎಂದು ಹೇಳಿದ ಪ್ರಧಾನಿಯವರು, ಭಯೋತ್ಪಾದನೆ, ವಿಧ್ವಂಸಕತೆ ಮತ್ತು ಮೂಲಭೂತವಾದದ ವಿರುದ್ಧ ನಿರಂತರವಾಗಿ ತಮ್ಮ ಸಂಘಟಿತ ಧ್ವನಿ ಎತ್ತುವಂತೆ ಮನವಿ ಮಾಡಿದರು.