ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು 2016ನೇ ಸಾಲಿನ ಸ್ತ್ರೀಶಕ್ತಿ ಪುರಸ್ಕಾರ ಮತ್ತು ನಾರಿ ಶಕ್ತಿ ಪುರಸ್ಕಾರಕ್ಕೆ ಪಾತ್ರರಾದವರನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು.
ಈ ಸಂವಾದದ ವೇಳೆ, ಪ್ರಶಸ್ತಿ ವಿಜೇತರನ್ನು ಅವರ ವೈಯಕ್ತಿಕ ಸಾಮರ್ಥ್ಯ ಮತ್ತು ತಮ್ಮ ತಮ್ಮ ಕ್ಷೇತ್ರದಲ್ಲಿ ದಾರಿದೀಪಕರಾಗಿ ಮಾಡಿರುವ ಪ್ರವರ್ತಕ ಸಾಧನೆಗಾಗಿ ಪ್ರಧಾನಮಂತ್ರಿಯವರು ಅಭಿನಂದಿಸಿದರು.
ಮುಂದಿನ ಮೂರು ದಶಕಗಳಲ್ಲಿ ಭಾರತ ವಾರ್ಷಿಕ ಶೇಕಡ 8ರ ದರದಲ್ಲಿ ವೃದ್ಧಿ ಸಾಧಿಸಿದಲ್ಲಿ, ಅದು ವಿಶ್ವದ ಅತ್ಯಂತ ಮುಂದುವರಿದ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದರು. ಅದಕ್ಕೆ ಸೂಕ್ತವಾಗಿ ಮಹಿಳೆಯರು ಸಜ್ಜಾದರೆ, ಈ ಗುರಿ ಸಾಧನೆಗೆ ಅವರು ಗರಿಷ್ಠ ಕೊಡುಗೆ ನೀಡಬಹುದು ಎಂದರು
ಲೋಕಸಭೆಯಲ್ಲಿಂದು ಮಂಡಿಸಲಾದ ಹೆರಿಗೆ ರಜೆ ವಿಧೇಯಕವು, 12 ವಾರಗಳಿಂದ 26 ವಾರಗಳ ಹೆರಿಗೆ ರಜೆಯ ಪಾವತಿಗೆ ಹೆಚ್ಚಳ ಮಾಡುತ್ತದೆ ಎಂದರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಮನೇಕಾ ಗಾಂಧಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.