PM Narendra Modi addresses public meeting in Aligarh
Our aim is to make rural India smoke-free. We have launched the Ujjwala Yojana & are providing gas connections to the poor: PM
We want our farmers to prosper. We will undertake every possible measure that benefits them: PM
Uttar Pradesh does not need SCAM. It needs a BJP Government that is devoted to development, welfare of poor & elderly: PM

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಆಲಿಗಢದಲ್ಲಿ ಒಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಮಾತನಾಡಿದಶ್ರೀ ಮೋದಿ , ನನ್ನ ಸರ್ಕಾರ ನಿರಂತರವಾಗಿ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದರು" 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ , ನಾವು ಭ್ರಷ್ಟಾಚಾರ ನಿಗ್ರಹಿಸಲು ಮತ್ತು ಭ್ರಷ್ಟ ವಿರುದ್ಧ ಕ್ರಮ ತೆಗೆದುಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದೇವೆ " ಎಂದು ಹೇಳಿದರು. 

ಉತ್ತರ ಪ್ರದೇಶದ ಸಮಾಜವಾದಿ ಪಕ್ಷವನ್ನು ಟೀಕಿಸುತ್ತಾ , ಉತ್ತರ ಪ್ರದೇಶದ ಸರ್ಕಾರ ರಾಜ್ಯದ ಅಭಿವೃದ್ಧಿ ಮತ್ತು ರಾಜ್ಯದಲ್ಲಿ ಮುಚ್ಚುತ್ತಿರುವ ಕೈಗಾರಿಕೆಗಳ ಬಗ್ಗೆ ಕಾಳಜಿ ವಹಿಸಿಲ್ಲ . ಆಲಿಗಢ ಬೀಗಗಳ ಪ್ರಸಿದ್ಧವಾಗಿದೆ . ಆದರೆ ಯುಪಿ ಸರ್ಕಾರದ ಕಾಳಜಿ ಕೊರತೆಯಿಂದಾಗಿ, ರಾಜ್ಯದಲ್ಲಿ ಕೈಗಾರಿಕೆಗಳು ಮುಚ್ಚಲಾಗುತ್ತಿದೆ ಮತ್ತು ಬೀಗಗಳನ್ನು ಹಾಕಲಾಗುತ್ತಿದೆ". ನಮ್ಮ ಗಮನ ವಿಕಾಸ್ - ವಿದ್ಯುತ್ (ವಿದ್ಯುತ್), ಕಾನೂನ್ (ಕಾನೂನು), ಸಡಕ್ (ಸರಿಯಾದ ಸಂಪರ್ಕ)ದ " ಮೇಲಿದೆ ”

ನನ್ನ ಸರ್ಕಾರ ಅವರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಲು ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು . " ನಾವು ನಮ್ಮ ಯುವಕರ ಏಳಿಗೆಯನ್ನು ಬಯಸುತ್ತೇವೆ . ನಾವು ಮುದ್ರಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ , ಅವರಿಗೆ ಸಲ ಒದಗಿಸಿದ್ದೇವೆ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದ್ದೇವೆ”

ಉತ್ತರ ಪ್ರದೇಶದಲ್ಲಿ ಅಪರಾಧಿಗಳಿಗೆ ಕಾನೂನಿನ ಯಾವುದೇ ಭಯವಿಲ್ಲ ಎಂದು ಶ್ರೀ ಮೋದಿ ಹೇಳಿದರು . " ಉತ್ತರ ಪ್ರದೇಶದಲ್ಲಿ ಅಪರಾಧಿಗಳಿಗೆ ಕಾನೂನಿನ ಯಾವುದೇ ಭಯವಿಲ್ಲ , ಅಪರಾಧಿಗಳಿಗೆ ಆಶ್ರಯ ನೀಡುವ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕಲು ನಾನು ಉತ್ತರ ಪ್ರದೇಶದ ಜನರಲ್ಲಿ ವಿನಂತಿಸುತ್ತೇನೆ .

Tಕಬ್ಬು ಬೆಳೆಸುವ ರೈತರ ಕಲ್ಯಾಣಕ್ಕಾಗಿ ಯೋಜನೆಗಳ ಬಗ್ಗೆ ಪ್ರಧಾನಿ ಮಾತನಾಡಿದರು ಮತ್ತು ಅವರ ಬಾಕಿ ಹಣವನ್ನು 14 ದಿನಗಳಲ್ಲಿ ಪಾವತಿಸಲಾಗುತ್ತದೆ ಎಂದು ಹೇಳಿದರು . " ನಾವು ಕಬ್ಬು ರೈತರ ಕ್ರಮಗಳನ್ನು ಕೈಗೊಂಡಿದ್ದೇವೆ . ಆದರೆ ಏಕೆ ಉತ್ತರ ಪ್ರದೇಶದ ಸರ್ಕಾರದಿಂದ ಅವುಗಳನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ ," ನಾವು ರೈತರ ಏಳಿಗೆಯನ್ನು ಬಯಸುತ್ತೇವೆ . ಅವರಿಗೆ ಪ್ರಯೋಜನವಾಗುವಂತಹ ಸಾಧ್ಯವಾಗುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ " ಎಂದೂ ಶ್ರೀ ಮೋದಿ ಹೇಳಿದರು.

ವಿರೋಧ ಪಕ್ಷವನ್ನು ಟೀಕಿಸುತ್ತಾ , " ಪ್ರತಿ ಇತರ ಪಕ್ಷ ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ರಾಜಕೀಯವಾಗಿಸುತ್ತದೆ . ಆದರೆ ಎಲ್ಲರೂ ಡಾ ಅಂಬೇಡ್ಕರ್ ಕೊಡುಗೆಗಳನ್ನು ತಿಳಿಯಬೇಕೆಂದು ನಾವು ಬಯಸುತ್ತೇವೆ.”

ಉತ್ತರ ಪ್ರದೇಶದ ಜನರು ‘SCAM’ ವಿರುದ್ಧ ಹೋರಾಡಬೇಕು - ಸಮಮಾಜವಾದಿ ಪಕ್ಷ , ಅಖಿಲೇಶ್ ಯಾದವ್ ಮತ್ತು ಮಾಯಾವತಿ . " ಉತ್ತರ ಪ್ರದೇಶಕ್ಕೆ ಸ್ಕ್ಯಾಮ್ ಬೇಕಿಲ್ಲ . ಉತ್ತರ ಪ್ರದೇಶಕ್ಕೆ ಅಭಿವೃದ್ಧಿ , ಬಡವರ ಮತ್ತು ಹಿರಿಯರ ಕಲ್ಯಾಣಕ್ಕೆ ಬದ್ಧವಾದ ಬಿಜೆಪಿ ಸರ್ಕಾರದ ಅಗತ್ಯವಿದೆ ”

ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರವನ್ನು ಬದಲಾಯಿಸಲು ಜನರಲ್ಲಿ ಶ್ರೀ ಮೋದಿ ವಿನಂತಿಸಿದರು.

ಹಲವಾರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Click here to read full text speech