ವಿಯಟ್ನಾಂ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಎಂಗುಯೆನ್ ಥೈ ಕಿಮ್ ಎನ್ಗನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
2016ರ ಸೆಪ್ಟೆಂಬರ್ ನಲ್ಲಿ ತಾವು ವಿಯಟ್ನಾಂಗೆ ಭೇಟಿ ನೀಡಿದ್ದ ಅವಧಿಯಲ್ಲಿ ಹನೋಯ್ ಅವರೊಂದಿಗೆ ನಡೆದ ಭೇಟಿಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ವಿಯಟ್ನಾಂನ ರಾಷ್ಟ್ರೀಯ ಅಸೆಂಬ್ಲಿಯ ಮುಖ್ಯಸ್ಥೆಯಾಗಿರುವ ಮೊದಲ ಮಹಿಳೆ ಶ್ರೀಮತಿ ಎನ್ಗನ್ ಆಗಿದ್ದು, ಇದು ವಿಶ್ವದಾದ್ಯಂತ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.
ಭಾರತ ಮತ್ತು ವಿಯಟ್ನಾಂ ನಡುವೆ ಹೆಚ್ಚಿನ ಸಂಸದೀಯ ಮಾತುಕತೆಯನ್ನು ಪ್ರಧಾನಿ ಸ್ವಾಗತಿಸಿದರು ಮತ್ತು ಎರಡೂ ರಾಷ್ಟ್ರಗಳ ಯುವ ಸಂಸದೀಯಪಟುಗಳ ವಿನಿಮಯ ಕಾರ್ಯಕ್ರಮ ಆರಂಭಿಸುವಂತೆ ಕರೆ ನೀಡಿದರು.
ಅಣು ಶಕ್ತಿಯ ಶಾಂತಿಯುತ ಬಳಕೆಯ ಸಹಕಾರ ಕುರಿತ ದ್ವಿಪಕ್ಷೀಯ ಒಪ್ಪಂದಕ್ಕೆ ಇಂದು ಅಂಕಿತ ಹಾಕಲಾಗುತ್ತಿದ್ದು, ಇದು ಭಾರತ ಮತ್ತು ವಿಯಟ್ನಾಂ ನಡುವೆ ಸಮಗ್ರ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.
Mrs. Nguyen Thi Kim Ngan, President of the National Assembly of Vietnam met PM @narendramodi. pic.twitter.com/fduG5AuMsR
— PMO India (@PMOIndia) December 9, 2016