Group of Secretaries present ideas for transformative change in different areas of governance
Secretaries to GoI present ideas on science and technology, energy and environment to PM Modi

ಭಾರತ ಸರ್ಕಾರದ ಕಾರ್ಯದರ್ಶಿಗಳ ಮೂರು ಗುಂಪು ಇಂದು ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನಾತ್ಮಕ ಬದಲಾವಣೆಯ ಕಲ್ಪನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುಂದೆ ಮಂಡಿಸಿತು.

ಜನ ಕೇಂದ್ರಿತ ಸೇವೆಗಳ ವಿತರಣೆ, ಡಿಜಿಟಲ್ ಸೇರ್ಪಡೆ, ನಾವಿನ್ಯ ಮತ್ತು ಕಾನೂನು ಸರಳೀಕರಣದಂಥ ವಿಚಾರಗಳು ಈ ಆಡಳಿತ ಪ್ರಾತ್ಯಕ್ಷಿಕೆಯ ವೇಳೆ ಬಿಂಬಿತವಾದವು.

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಾತ್ಯಕ್ಷಿಕೆಯು ಸುಧಾರಿತ ಅವಕಾಶಗಳು ಮತ್ತು ಕಲಿಕೆಯ ಲಭ್ಯತೆ; ಉದ್ಯೋಗ ಮತ್ತು ನವೋದ್ಯಮ; ಮತ್ತು .”ವಿಜ್ಞಾನವನ್ನು ಸುಲಭವಾಗಿ ಮಾಡುವತ್ತ.” ಗಮನ ಹರಿಸಿದ್ದವು.

”ಇಂಧನ ಮತ್ತು ಪರಿಸರ” ಕುರಿತ ಪ್ರಾತ್ಯಕ್ಷಿಕೆಯು ವಿವಿಧ ಇಂಧನ ಮೂಲಗಳು ಮತ್ತು ಇಂಧನ ದಕ್ಷತೆ ಕುರಿತಂತೆ ಸಲಹೆಗಳನ್ನೂ ಒಳಗೊಂಡಿದ್ದವು.

ಕೇಂದ್ರ ಸಚಿವರು ಮತ್ತು ನೀತಿ ಆಯೋಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಮಂಡನೆಗೆ ನಿಗದಿಯಾಗಿರುವ ಒಟ್ಟು ಒಂಬತ್ತು ಪ್ರಾತ್ಯಕ್ಷಿಕೆಗಳ ಪೈಕಿ ವಿವಿಧ ಆಡಳಿತಕ್ಕೆ ಸಂಬಂಧಿಸಿದ ಒಟ್ಟು ನಾಲ್ಕು ಪ್ರಾತ್ಯಕ್ಷಿಕೆಗಳನ್ನು ಪ್ರಸಕ್ತ ಸರಣಿಯಲ್ಲಿ ನೀಡಲಾಗಿದೆ.