UK Secretary of State for Foreign & Commonwealth Affairs, Mr. Boris Johnson meets the PM

ಯು.ಕೆ.ಯ ಕಾಮನ್ ವೆಲ್ತ್ ವ್ಯವಹಾರ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವ ರೈಟ್ ಹಾನರಬಲ್ ಬೋರಿಸ್ ಜಾನ್ಸನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

2015ರ ನವೆಂಬರ್ ನಲ್ಲಿ ತಾವು ಯು.ಕೆ.ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಗ ಲಂಡನ್ ಮೇಯರ್ ಆಗಿದ್ದ ಶ್ರೀ. ಜಾನ್ಸನ್ ಅವರೊಂದಿಗಿನ ತಮ್ಮ ಹಿಂದಿನ ಭೇಟಿಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು ಮತ್ತು ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವ ಅವರನ್ನು ಅಭಿನಂದಿಸಿದರು. ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಅವರು 2016ರ ನವೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮುಂಬರುವ ದಿನಗಳಲ್ಲಿ ಭಾರತ – ಯುಕೆ ಬಾಂಧವ್ಯಕ್ಕೆ ಮಾರ್ಗದರ್ಶನ ಮಾಡಲು ಅಗತ್ಯವಾದ ಚೌಕಟ್ಟನ್ನು ಮಾಡಲಾಯಿತು ಎಂದು ಪ್ರಧಾನಿ ತಿಳಿಸಿದರು.

ವಿವಿಧ ವಲಯಗಳಲ್ಲಿ ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನ, ಹಣಕಾಸು ಮತ್ತು ರಕ್ಷಣೆ ಹಾಗೂ ಸುರಕ್ಷತಾ ವಲಯಲ್ಲಿ ದ್ವಿಪಕ್ಷೀಯ ಪಾಲುದಾರಿಕೆ ಬಲಪಡಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು.

ಪ್ರಧಾನಮಂತ್ರಿಯವರು ಯು.ಕೆ.ಯಲ್ಲಿರುವ ಭಾರತೀಯ ಸಮುದಾಯವು ಎರಡೂ ರಾಷ್ಟ್ರಗಳ ನಡುವೆ ಜೀವಂತ ಸೇತುವೆಯಾಗಿದೆ ಎಂಬ ವಿಷಯ ಉಲ್ಲೇಖಿಸಿದರು ಮತ್ತು ಇದು ಜನರೊಂದಿಗಿನ ಬಾಂಧವ್ಯದ ಪ್ರಮುಖ ಚಾಲಕಶಕ್ತಿಯಾಗಿದೆ ಎಂದರು ಮತ್ತು ಎರಡೂ ಕಡೆಯವರು ಈ ಬಾಂಧವ್ಯವರ್ಧನೆಗೆ ಒಗ್ಗೂಡಿ ದುಡಿಯುವ ವಿಶ್ವಾಸ ವ್ಯಕ್ತಪಡಿಸಿದರು.