The close association between our two countries is, of course, much older. India and Kenya fought together against colonialism: PM
Common belief in democratic values, our shared developmental priorities & the warm currents of Indian Ocean bind our societies: PM
Kenya's participation in Vibrant Gujarat has generated a strong interest in Indian businesses: PM Modi
India would be happy to share best practises in organic farming with Kenyan farmers: PM
The large Indian-origin community of Kenya is a vital and energetic link between us: PM Modi

ಘನತೆವೆತ್ತ ಅಧ್ಯಕ್ಷ ಉಹ್ರು ಕೆನ್ಯೆಟ್ಟಾ ಅವರೇ,

ಗೌರವಾನ್ವಿತ ಪ್ರತಿನಿಧಿಗಳೇ,

ಮಾಧ್ಯಮದ ಸದಸ್ಯರೇ,

ಸ್ನೇಹಿತರೆ,

ಸರಿಯಾಗಿ ಆರು ತಿಂಗಳುಗಳ ಹಿಂದೆ, ನನಗೆ ಕೆನ್ಯಾಗೆ ಭೇಟಿ ನೀಡಿದ್ದೆ. ಅಧ್ಯಕ್ಷ ಕೆನ್ಯೆಟ್ಟಾ ಮತ್ತು ಕೆನ್ಯಾದ ಜನತೆ ನನ್ನನ್ನು ಆತ್ಮೀಯವಾಗಿ ಮತ್ತು ನೈಜ ವಾತ್ಸಲ್ಯದಿಂದ ಬರಮಾಡಿಕೊಂಡರು. ಇಂದು, ನಾನು ಅಧ್ಯಕ್ಷ ಕೆನ್ಯೆಟ್ಟಾ ಮತ್ತು ಅವರ ನಿಯೋಗವನ್ನು ಭಾರತದಲ್ಲಿ ಸ್ವಾಗತಿಸಲು ಹರ್ಷಿಸುತ್ತೇನೆ. ನಮ್ಮ ಎರಡು ದೇಶಗಳ ನಡುವೆ ಇರುವ ನಂಟು ಬಹಳ ಹಳೆಯದು. ಭಾರತ ಮತ್ತು ಕೆನ್ಯಾ ವಸಾಹತುಶಾಹಿಯ ವಿರುದ್ಧ ಒಟ್ಟಾಗಿ ಹೋರಾಡಿದೆ. ಕೆನ್ಯಾದಲ್ಲಿ ವಸಾಹತುಶಾಹಿ ಆಡಳಿತ ಮಣಿಸಲು ಕೆನ್ಯಾದ ಸೋದರರೊಂದಿಗೆ ಕೈಜೋಡಿಸಿ ಸಹಕರಿಸಿದ ಭಾರತೀಯ ಸಂಜಾತ ಕಾರ್ಮಿಕ ಸಂಘಟನೆಯ ನಾಯಕ ಮಖನ್ ಸಿಂಗ್ ಅವರ ಕೊಡುಗೆಯನ್ನು ಕಳೆದ ತಿಂಗಳಷ್ಟೇ, ಅಧ್ಯಕ್ಷ ಕೆನ್ಯಟ್ಟಾ ಅವರು ಗುರುತಿಸಿದ್ದಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಸಮಾನ ನಂಬಿಕೆ, ನಮ್ಮ ಹಂಚಿಕೆಯ ಅಭಿವೃದ್ಧಿಯ ಆದ್ಯತೆಗಳು ಮತ್ತು ಹಿಂದೂ ಮಹಾಸಾಗರದ ಬೆಚ್ಚನೆಯ ಅಲೆಗಳು ನಮ್ಮ ಸಮಾಜದ ಬಾಂಧವ್ಯವನ್ನು ಬಂಧಿಸಿವೆ.

ಸ್ನೇಹಿತರೆ,

ನಮ್ಮ ಇಂದಿನ ಚರ್ಚೆಯಲ್ಲಿ, ಅಧ್ಯಕ್ಷರು ಮತ್ತು ನಾನು, ನಮ್ಮ ಬಾಂಧವ್ಯದ ಪೂರ್ಣಶ್ರೇಣಿಯ ಪರಾಮರ್ಶೆ ನಡೆಸಿದ್ದೇವೆ. ಕಳೆದ ವರ್ಷ ನನ್ನ ಕೆನ್ಯಾ ಭೇಟಿಯ ವೇಳೆ, ನಮ್ಮ ಪ್ರಯತ್ನದ ಪ್ರಮುಖವಾಗಿ ಗಮನ ಹರಿಸ ಬೇಕಾದ ಕ್ಷೇತ್ರವಾಗಿ ಆರ್ಥಿಕ ಸಹಕಾರವನ್ನು ಗುರುತಿಸಿದ್ದೇವೆ. ಈ ನಿಟ್ಟಿನಲ್ಲಿ ದ್ವಿಪಕ್ಷೀಯ ವಾಣಿಜ್ಯ ವಿಸ್ತರಣೆ, ಎರಡೂ ರಾಷ್ಟ್ರಗಳ ನಡುವೆ ಹೆಚ್ಚಿನ ಹಣಕಾಸು ಹರಿವು ಮತ್ತು ಬಲವಾದ ಅಭಿವೃದ್ಧಿಯ ಪಾಲುದಾರಿಕೆ ನಮ್ಮ ಆದ್ಯತೆಯಾಗಿದೆ.

ನಿನ್ನೆ, 8ನೇ ಚೈತನ್ಯಪೂರ್ಣ ಗುಜರಾತ್ ಜಾಗತಿಕ ಶೃಂಗಸಭೆಗೆ ಉನ್ನತ ಮಟ್ಟದ ನಿಯೋಗದ ನೇತೃತ್ವವನ್ನು ಅಧ್ಯಕ್ಷ ಕೆನ್ಯಟ್ಟಾ ವಹಿಸಿದ್ದರು. ಚೈತನ್ಯಪೂರ್ಣ ಗುಜರಾತ್ ನಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯು ಕೇನ್ಯಾದಲ್ಲಿ ಹೂಡಿಕೆ ಮತ್ತು ವಾಣಿಜ್ಯ ಅವಕಾಶಗಳೊಂದಿಗೆ ಭಾರತೀಯ ವಾಣಿಜ್ಯ ಸಂಪರ್ಕದಲ್ಲಿ ಬಲವಾದ ಆಸಕ್ತಿಯನ್ನು ಸೃಷ್ಟಿಸಿದೆ. ಆರೋಗ್ಯ ಸೇವೆ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಕೃಷಿ, ನೀಲಿ ಆರ್ಥಿಕತೆ ಮತ್ತು ಇಂಧನ ಕ್ಷೇತ್ರದ ಅವಕಾಶಗಳನ್ನು ಬಳಸಿಕೊಳ್ಳಲು ಎರಡೂ ರಾಷ್ಟ್ರಗಳಲ್ಲಿ ನಾವು ಕೈಗಾರಿಕೆ ಮತ್ತು ವಾಣಿಜ್ಯೋದ್ಯಮವನ್ನು ಉತ್ತೇಜಿಸುತ್ತೇವೆ. ನಾಳಿನ ಜಂಟಿ ವಾಣಿಜ್ಯ ಮಂಡಳಿ ಸಭೆಯು ಈ ಕ್ಷೇತ್ರಗಳಲ್ಲಿ ವಾಣಿಜ್ಯ ಕಾರ್ಯಕ್ರಮ ರೂಪಿಸಲು ಕಾರ್ಯೋನ್ಮುಖವಾಗಲಿದೆ. ವಾಣಿಜ್ಯವನ್ನು ಉತ್ತೇಜಿಸಲು ನಾವು, ಗುಣಮಟ್ಟ ಮತ್ತು ಸಂಬಂಧಿತ ಕ್ಷೇತ್ರಗಳ ವಾಣಿಜ್ಯ ಕ್ರಮಗಳನ್ನು ಕಲ್ಪಿಸುತ್ತಿದ್ದೇವೆ. ಕೃಷಿ ಮತ್ತು ಆಹಾರ ಭದ್ರತೆಯ ವಿಸ್ತೃತ ಮತ್ತು ವ್ಯಾಪಕ ಶ್ರೇಣಿಯ ಸಹಕಾರ ನಮ್ಮ ಹಂಚಿಕೆಯ ಆದ್ಯತೆಯಾಗಿದೆ.

ನಾವು ಕೆನ್ಯಾದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸಲು ಸಹಯೋಗ ನೀಡಲಿದ್ದೇವೆ. ಕೃಷಿಯ ಯಾಂತ್ರೀಕರಣದ ಹೊಸ ಆಯಾಮವನ್ನು ತೆರೆಯಲು ಇಂದು 100 ದಶಲಕ್ಷ ಡಾಲರ್ ಲೈನ್ ಆಫ್ ಕ್ರೆಡಿಟ್ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಬೇಳೆಕಾಳುಗಳನ್ನು ಕೇನ್ಯಾದಲ್ಲಿ ಉತ್ಪಾದಿಸಿ ಮತ್ತು ಆಮದು ಮಾಡಿಕೊಳ್ಳುವ ದೀರ್ಘಕಾಲೀನವಾದ ವ್ಯವಸ್ಥೆಯ ಬಗ್ಗೆ ಇಂದು ಚರ್ಚಿಸಿದ್ದೇವೆ. ಕೆನ್ಯಾ ರೈತರೊಂದಿಗೆ ಸಾವಯವ ಕೃಷಿಯ ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ನಾವು ಹರ್ಷಿಸುತ್ತೇವೆ. ಆರೋಗ್ಯ ವಲಯದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಕೆನ್ಯಟ್ಟಾ ರಾಷ್ಟ್ರೀಯ ಆಸ್ಪತ್ರೆಗೆ ಬೆಬೆಟ್ರಾನ್ ಯಂತ್ರವನ್ನು ಪೂರೈಸಲಾಗಿದೆ.

ನಮ್ಮ ಭಾರತ ಆಫ್ರಿಕಾ ವೇದಿಕೆಯ ಶೃಂಗದ ಉಪಕ್ರಮದಡಿ ಸಂಬಂಧಿತ ವೈದ್ಯರ ಸಾಮರ್ಥ್ಯವರ್ಧನೆ ಕ್ರಮವನ್ನೂ ಕೈಗೊಳ್ಳಲಾಗಿದೆ. ಶಿಕ್ಷಣದಲ್ಲಿನ ನಮ್ಮ ಪಾಲುದಾರಿಕೆಯು ಎರಡೂ ರಾಷ್ಟ್ರಗಳ ನಡುವಿನ ಜನರ ನಡುವೆ ಹೊಸ ಸಂಪರ್ಕವನ್ನು ಸೃಷ್ಟಿಸುತ್ತಿವೆ. ನಾವು ನೈರೋಬಿ ವಿಶ್ವವಿದ್ಯಾಲಯದೊಂದಿಗೆ ಬಲವಾದ ಬಾಂಧವ್ಯ ಹೊಂದಿದ್ದೇವೆ, ಅಲ್ಲಿ ಐಸಿಸಿಆರ್ ವತಿಯಿಂದ ಭಾರತೀಯ ಅಧ್ಯಯನ ಪೀಠ ಸ್ಥಾಪಿಸಲಾಗುತ್ತಿದೆ ಮತ್ತು ಭಾರತದ ನೆರವಿನೊಂದಿಗೆ ಅಲ್ಲಿನ ಗ್ರಂಥಾಲಯವನ್ನು ನವೀಕರಿಸಲಾಗುತ್ತಿದೆ. ಇನ್ನು ಇಂಧನದ ವಿಚಾರದಲ್ಲಿ ನಾವು ಅಂತಾರಾಷ್ಟ್ರೀಯ ಸೌರ ಸಹಯೋಗಕ್ಕೆ ಕೆನ್ಯಾ ಬೆಂಬಲವನ್ನು ಮತ್ತು ನಮ್ಮ ಆರ್ಥಿಕ ಪ್ರಗತಿಗೆ ಸೂರ್ಯನ ಶಕ್ತಿಯನ್ನು ಇಂಧನವಾಗಿ ಪಡೆಯುವ ಜಂಟಿ ಪ್ರಯತ್ನಗಳನ್ನು ಗೌರವಿಸುತ್ತೇವೆ.

ಸ್ನೇಹಿತರೆ,

ಇನ್ನು ಸಾಗರ ಕ್ಷೇತ್ರದಲ್ಲಿನ ಸವಾಲುಗಳು ನಮಗೆ ಇಬ್ಬರಿಗೂ ಹಂಚಿಕೆಯ ಕಾಳಜಿಯಾಗಿದೆ. ಆದಾಗ್ಯೂ ನಾವು ಮೀನುಗಾರಿಕೆಯಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಬಯಸುತ್ತೇವೆ. ನಾವು ನಮ್ಮ ರಕ್ಷಣಾ ಸಹಕಾರವನ್ನು ಶೀಘ್ರ ಕಾರ್ಯಾನುಷ್ಠಾನಕ್ಕೆ ತರಲು ಗಮನ ಹರಿಸುತ್ತೇವೆ. ಜಲರಾಶಿಶಾಸ್ತ್ರ, ಸಂವಹನ ಜಾಲಗಳು, ಕಡಲ್ಗಳ್ಳತನ ತಡೆ, ಸಾಮರ್ಥ್ಯ ವರ್ಧನೆ, ರಕ್ಷಣೆ ಮತ್ತು ವೈದ್ಯಕೀಯ ಸಹಕಾರದ ವಿನಿಮಯ ನಿರ್ದಿಷ್ಟವಾದ ಕೆಲವು ಆದ್ಯತೆಯ ಕ್ಷೇತ್ರಗಳಾಗಿವೆ. ನಾವು ನಮ್ಮ ಭದ್ರತೆಯ ಸಹಕಾರವನ್ನು ಮತ್ತು ಸಾಮರ್ಥ್ಯವನ್ನು ಬಲಪಡಿಸು ಪಾಲುದಾರರಾಗಿದ್ದೇವೆ. ಈ ನಿಟ್ಟನಲ್ಲಿ, ನಾವು ಜಂಟಿ ಕಾರ್ಯ ಗುಂಪಿಗೆ ಶೀಘ್ರ ಭೇಟಿ ಮಾಡುವಂತೆ ಸೂಚಿಸಿದ್ದೇವೆ. ಇದು ಸೈಬರ್ ಭದ್ರತೆ, ಭಯೋತ್ಪಾದನೆ ನಿಗ್ರಹ, ಮಾದಕವಸ್ತು, ನಶೀಲಿ ವಸ್ತುಗಳು ಮತ್ತು ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಹಣ ರವಾನೆ ತಡೆಯ ಬಗ್ಗೆ ಗಮನ ಹರಿಸಲಿದೆ.

ಸ್ನೇಹಿತರೆ,

ಬೃಹತ್ ಸಂಖ್ಯೆಯ ಭಾರತ ಮೂಲದ ಕೆನ್ಯಾ ಸಮುದಾಯ ನಮ್ಮ ನಡುವಿನ ಉತ್ಸಾಹಪೂರ್ಣ ನಂಟಿಗೆ ಪ್ರಮುಖವಾಗಿದೆ. ಅವರನ್ನು ವಾಣಿಜ್ಯ, ಹೂಡಿಕೆ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ತೊಡಗಿಸಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆ ನಾನು ಅಧ್ಯಕ್ಷ ಕೆನ್ಯೆಟ್ಟಾ ಅವರೊಂದಿಗೆ ಚರ್ಚಿಸಿದ್ದೇನೆ. ಕಳೆದ ವರ್ಷ ನಮ್ಮ ಭೇಟಿಯಲ್ಲಿ ಅಧ್ಯಕ್ಷರು ಮತ್ತು ನಾನು, ನಮ್ಮ ಚರ್ಚೆಯ ಅಂಶಗಳ ಜಾರಿಗೆ ವೈಯಕ್ತಿಕವಾಗಿ ಮತ್ತು ಆಪ್ತವಾಗಿ ಉಸ್ತುವಾರಿ ವಹಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದೆವು. ನಾವು ಅದನ್ನು ಮುಂದುವರಿಸುವ ಖಾತ್ರಿ ನೀಡಬೇಕಾಗಿದೆ.

ಗೌರವಾನ್ವಿತರೇ,

ನಾನು ಮತ್ತೊಮ್ಮೆ ಭಾರತದ ಜನತೆಯ ಪರವಾಗಿ ಮತ್ತು ನನ್ನ ಪರವಾಗಿ ನಮ್ಮ ಆಹ್ವಾನವನ್ನು ಮನ್ನಿಸಿದ್ದಕ್ಕೆ ಮತ್ತು ದೆಹಲಿಯಲ್ಲಿ ಮತ್ತು ಗುಜರಾತ್ ನಲ್ಲಿ ನಿಮ್ಮ ಉಪಸ್ಥಿತಿಯೊಂದಿಗೆ ಗೌರವಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ.

ಧನ್ಯವಾದಗಳು.

ತುಂಬಾ ತುಂಬಾ ಧನ್ಯವಾದಗಳು..