ನಗದು ರಹಿತ ವಹಿವಾಟು ಹೆಚ್ಚಿಸಬೇಕು ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕರೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರ ಕಾರ್ಯಾಲಯದ ಹಿರಿಯ ಅಧಿಕಾರಿಗಳು ಇಂದು ವಿಶಿಷ್ಠ ಉಪಕ್ರಮವನ್ನು ಕೈಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಶ್ರೀ ನೃಪೇಂದ್ರ ಮಿಶ್ರಾ ಮತ್ತು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ. ಮಿಶ್ರಾ ಸೇರಿದಂತೆ ಹಿರಿಯ ಅಧಿಕಾರಿಗಳು 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿಯವರ ಕಾರ್ಯಾಲಯದ ಸಿಬ್ಬಂದಿಗೆ, ಮೊಬೈಲ್ ಬ್ಯಾಂಕಿಂಗ್ ಪ್ರಕ್ರಿಯೆ ಮತ್ತು ಯು.ಪಿ.ಐ, ಇ ವ್ಯಾಲೆಟ್ಸ್ ಇತ್ಯಾದಿ ಮೂಲಕ ದೈನಂದಿನ ವಹಿವಾಟು ನಡೆಸುವ ಕುರಿತಂತೆ ತರಬೇತಿ ನೀಡಿ ಸಜ್ಜುಗೊಳಿಸಲು ಕಾರ್ಯಾಗಾರ ಏರ್ಪಡಿಸಿದ್ದರು.
ಅಧಿಕಾರಿಗಳು ನಗದು ರಹಿತ ವಹಿವಾಟಿನ ಪ್ರಾತ್ಯಕ್ಷಿಕೆಗಳನ್ನು ನೀಡಿದರು ಮತ್ತು ತಮ್ಮ ಸಿಬ್ಬಂದಿಯ ಫೋನ್ ಗಳಲ್ಲಿ ಸೂಕ್ತ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲೂ ಸಹಾಯ ಮಾಡಿದರು.
ಕಾರ್ಯಾಗಾರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು ಮತ್ತು ಪಾಲ್ಗೊಂಡಿದ್ದವರಿಂದ ಸ್ಮಾರ್ಟ್ ಬ್ಯಾಂಕಿಂಗ್ ಮತ್ತು ವಹಿವಾಟು ಪರಿಹಾರದ ಕುರಿತಂತೆ ಉತ್ಸಾಹ ವ್ಯಕ್ತವಾಯಿತು.
ಎಸ್.ಬಿ.ಐ. ಮತ್ತು ಮೈ ಗೌ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.