ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು, ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ನಡೆದ ರಾಮಾಯಣ ದರ್ಶನಂ ವಸ್ತುಪ್ರದರ್ಶನ ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಭಾಷಣ ಮಾಡಿದರು.

12ನೇ ಜನವರಿ ಸಾಧಾರಣ ದಿನವಲ್ಲ, ಮತ್ತು ಸ್ವಾಮಿ ವಿವೇಕಾನಂದರ ಶಕ್ತಿಶಾಲಿ ಚಿಂತನೆಗಳು ಹಲವು ಮನಸ್ಸುಗಳನ್ನು ಇನ್ನೂ ರೂಪುಗೊಳಿಸುತ್ತಿದೆ ಎಂದು ಹೇಳಿದರು. ಭಾರತ ಇಂದು ಯುವ ದೇಶವಾಗಿದೆ, ಮತ್ತು ಅದು ಆಧ್ಯಾತ್ಮಿಕವಾಗಿ ಮತ್ತು ಲೌಕಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ಚಿಂತನೆಗಳು ಸದಾ ಯುವಕರನ್ನು ರಾಷ್ಟ್ರ ನಿರ್ಮಾಣದಲ್ಲಿ ಉತ್ತೇಜಿಸುತ್ತವೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಮಂತ್ರಿಯವರು ಸಂತ ತಿರುವಳ್ಳುವರ್ ಮತ್ತು ಶ್ರೀ ಏಕನಾಥ ರಾನಡೆ ಅವರಿಗೂ ಗೌರವ ನಮನ ಸಲ್ಲಿಸಿದರು. ಕಲಿಕೆಯ ಪ್ರಕ್ರಿಯೆಯನ್ನೂ ಎಂದಿಗೂ ನಿಲ್ಲಿಸದಂತೆ ಅವರು ಯುವಜನರಿಗೆ ಕರೆ ನೀಡಿದರು.